ಸಾವಿರ ಕೋಟಿ ಆಫರ್ ಕೈ ಬಿಟ್ಟ ರಾಖಿ ಬಾಯ್…? ಕಾರಣವೇನು..?
ಸ್ಯಾಂಡಲ್ ವುಡ್ ನ ರಾಕಿ ಭಾಯ್ ಈಗ ವಿಶ್ವಪ್ರಸಿದ್ಧಿ ಪಡೆದಿದ್ದಾರೆ. ಹೋದಲೆಲ್ಲಾ ಅಭಿಮಾನಿಗಳು ರಾಕಿ ಭಾಯ್ ಜೊತೆ ಸೆಲ್ಫಿಗಾಗಿ ಗುಂಪುಕಟ್ಟು ನಿಲ್ತಾರೆ. KGF ಸಿನಿಮಾ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಪರ ಭಾಷಿಗರ ಬಾಯಲ್ಲೂ ರಾಕಿ ಭಾಯ್ ದೇ ಜಪ ಆಗಿದೆ.
ಇತ್ತೀಚೆಗೆ ಗೋವಾ, ಮುಂಬೈಗಳಿಗೆ ತೆರಳಿದ್ದಾಗ ಅಲ್ಲಿ ಯಶ್ ಅಭಿಮಾನಿಗಳು ರಾಖಿ ಬಾಯ್ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದಿದ್ರು. ಇಡೀ ಭಾರತೀಯ ಸಿನಿಮಾರಂಗವೇ ಯಶ್ ಅಭಿಮನಯದ KGF ಚಾಪ್ಟರ್ 2 ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಜಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ. ಸಿನಿಮಾ 2022ರ ಏಪ್ರಿಲ್ ನಲ್ಲಿ ತೆರಕಾಣಲಿದೆ. ಈ ನಡುವೆ ಯಶ್ ಮುಂದಿನ ಸಿನಿಮಾ ಯಾವುದು..? ಯಾರ ಜೊತೆಗೆ ಸಿನಿಮಾ ಮಾಡಲಿದ್ದಾರೆ..? ಅನ್ನೋ ಕುತೂಹಲವೂ ಕೂಡ ಸಹಜವಾಗಿಯೇ ಇದೆ. ಆದ್ರೆ ಯಶ್ ಸಾವಿರ ಕೋಟಿ ಆಫರ್ ಅನ್ನ ಕೈಬಿಟ್ಟಿದ್ದಾರೆ ಅನ್ನೋ ಸುದ್ದಿ ಇದೀಗ ಹೊರಬಿದ್ದಿದೆ.
ಅಂದ್ಹಾಗೆ ಈಗ ಯಶ್ ಗೆ ಇರೋ ರೇಂಜ್ ಗೆ ಅವರಿಗೆ 1000 ಕೋಟಿ ರೂಪಾಯಿ ಆಫರ್ ಬಂದ್ರೂ ಆಶ್ಚರ್ಯ ಪಡಬೇಕಿಲ್ಲ. 100 ಕೋಟಿ ಬಜೆಟ್ ಸಿನಿಮಾ ಅಂದ್ರೆನೇ ಆ ಸಿನಿಮಾದ ಕ್ರೇಜ್ ಹೇಗಿರುತ್ತೆ ಅನ್ನೋದು ಗೊತ್ತಿದೆ. ರಾಧೆ ಶ್ಯಾಮ್ ಸುಮಾರು 500 ಕೋಟಿ , ಪುಷ್ಪ ಸುಮಾರು 500 ಕೋಟಿ ಬಜೆಟ್ ನಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳು.
ಆದ್ರೆ ಯಶ್ ಗೆ 1000 ಕೋಟಿ ಆಫರ್ ಬಂದಿದ್ರೂ ಅದನ್ನ ಕೈಬಿಟ್ಟಿದ್ದಾರಂತೆ. ಹೌದು.. ಬಾಲಿವುಡ್ ನ ಹೆಸರಾಂತ ನಿರ್ಮಾಣ ಸಂಸ್ಥೆಯೊಂದು ಯಶ್ ಮುಂದೆ ಬರೊಬ್ಬರಿ 700 ಕೋಟಿ ಆಫರ್ ಇಟ್ಟಿತ್ತಂತೆ. ಆದ್ರೆ ಯಶ್ ಈ ಆಫರ್ ನ ತಿರಸ್ಕರಿಸಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣ ಏನ್ ಗೊತ್ತಾ..?
5 ವರ್ಷಗಳ ಕಾಲ ಯಶ್ ಅದೆ ನಿರ್ಮಾಣ ಸಂಸ್ಥೆಯಲ್ಲಿ 5 ಸಿನಿಮಾಗಳನ್ನು ಮಾಡೋ ಕಂಡೀಷನ್ ಹಾಕಿತ್ತಂತೆ. ಆದ್ರೆ ಯಶ್ ಇದಕ್ಕೆ 1000 ರೂಗಳ ಬೇಡಿಕೆ ಇಟ್ಟಿದ್ದರಂತೆ. ಸಾವಿರ ಕೋಟಿಗೆ ಒಪ್ಪಂದ ಆಗದ ಹಿನ್ನೆಲೆ ಯಶ್ 700 ಕೋಟಿಯನ್ನು ಬಿಟ್ಟು ಬಂದಿದ್ದಾರೆ ಎಂದು ಹೇಳಲಾಗ್ತಿದೆ.