ಯುಪಿಯಲ್ಲಿ ಬಿಜೆಪಿ ಗೆಲ್ಲುತ್ತೆ… ಆದ್ರೆ 108 ಸ್ಥಾನಗಳು ಕುಸಿಯುತ್ತೆ… ಕಾರಣ ಲಖಿಂಪುರ ಪ್ರರಣ – ಸಮೀಕ್ಷೆ..!

1 min read
job

ಯುಪಿಯಲ್ಲಿ ಬಿಜೆಪಿ ಗೆಲ್ಲುತ್ತೆ… ಆದ್ರೆ 108 ಸ್ಥಾನಗಳು ಕುಸಿಯುತ್ತೆ… ಕಾರಣ ಲಖಿಂಪುರ ಪ್ರರಣ – ಸಮೀಕ್ಷೆ..!

ನವದೆಹಲಿ: ಉತ್ತರಪ್ರದೇಶದಲ್ಲಿ ಪ್ರಸ್ತುತ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.. ಇನ್ನೇನು 2022 ರಲ್ಲಿ ವಿಧಾನಸಭಾ ಚುನಾವಣೆಯಿದ್ದು ಈಗಾಗಲೇ ಬಿಜೆಪಿ , ಕಾಂಗ್ರೆಸ್, ಮಾಯಾವತಿ ನೇತೃತ್ವದ ಬಿಎಸ್ ಪಿ ಭರ್ಜರಿ ಪ್ರಚಾರದಲ್ಲಿ ತೊಡಗಿವೆ.. ಪ್ರಣಾಳಿಕೆಗಳಲ್ಲಿ ಹುಬ್ಬೇರಿಸುವಂತಹ ಭರವಸೆಗಳನ್ನೇ ಕಾಂಗ್ರೆಸ್ – ಬಿಜಿಪಿ ನಾಯಕರು ನೀಡಿದ್ದಾರೆ.. ಮತ್ತೊಂದ್ ಕಡೆ ಪ್ರಚಾರ ರ್ಯಾಲಿಗಳು ಭರದಿಂದ ನಡೆಯುತ್ತಿದ್ರೆ, ಎಲ್ಲಾ ಪಕ್ಷಗಳ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳು ಜಾರಿಯಲ್ಲಿವೆ..

ಒಟ್ಟಾರೆ ವಿಧಾನಸಭಾ ಚುನಾವಣಾ ಕಾವು ಈಗಿನಿಂದಲೇ ರಂಗೇರಿದೆ.. ಈ ನಡುವೆ ಸಮೀಕ್ಷೆ ವರದಿ ಕೂಡ ಬಂದಿದ್ದು ಗೆಲುವು ಬಿಜೆಪಿಗೆ ಎಂಬ ಫಲಿತಾಂಶ ಹೊರಬಂದಿದೆ. ಆದ್ರೂ ಇದು ಪ್ರಯಾಸದ ಗೆಲುವಾಗಿರಲಿದೆ ಎನ್ನಲಾಗ್ತಿದೆ.. ಹೌದು ಸಮೀಕ್ಷೆ ಪ್ರಕಾರ ಬಿಜೆಪಿ ಈ ಬಾರಿ 108 ಸ್ಥಾನಗಳನ್ನ ಕಳೆದುಕೊಳ್ಳಲಿದೆ ಎನ್ನಲಾಗ್ತಿದೆ.. ಅದ್ರಲ್ಲೂ ಇದಕ್ಕೆ ಮುಖ್ಯ ಕಾರಣ ಲಖೀಮ್ ಪುರ ಹಿಂಸಾಚಾರವೆಂಬ ಅಂಶ ಬಹಿರಂಗವಾಗಿದೆ..

ಹೌದು.. ಈ ಬಾರಿ 108 ಸ್ಥಾನಗಳಲ್ಲಿ ಬಿಜೆಪಿ ಕುಸಿದ್ರೂ , ಸಮಾಜವಾದಿ ಪಕ್ಷದ ಗಳಿಕೆ ಹೆಚ್ಚಾಗಲಿದೆ ಎಂದು ‘ಎಬಿಪಿ-ಸಿ-ವೋಟರ್-ಐಎಎನ್‌ಎಸ್’ ಸಮೀಕ್ಷಾ ವರದಿ ಹೇಳಿದೆ. ಉತ್ತರಾಖಂಡ ಮತ್ತು ಪಂಜಾಬ್‌ ಗಳಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಯುತವಾಗಲಿದೆ ಎಂದೂ ಸಮೀಕ್ಷೆ ತಿಳಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯೇ ಉತ್ತರ ಪ್ರದೇಶದಲ್ಲಿ ಗೆಲ್ಲುವ ನೆಚ್ಚಿನ ಪಕ್ಷವಾಗಿದೆ. ಸಮಾಜವಾದಿ ಪಕ್ಷವೂ ಬೆಳೆಯುತ್ತಿದ್ದು, ಉಭಯ ಪಕ್ಷಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಇನ್ನೂ ಚುನಾವಣೆ ನಡೆಯಲಿರುವ ರಾಜ್ಯಗಳ 690 ಕ್ಷೇತ್ರಗಳ 1,07,193 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 217 ಸ್ಥಾನ ಗಳಿಸಲಿವೆ. ಇದು ಕಳೆದ ಬಾರಿಗಿಂತ (325) 108 ಕಡಿಮೆಯಾಗಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವರ್ಚಸ್ಸು ವೃದ್ಧಿಸುತ್ತಿದೆ. ಅವರ ಪಕ್ಷವು 156 ಸ್ಥಾನ ಗಳಿಸಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಮಧ್ಯೆಯೇ ನೇರ ಹಣಾಹಣಿ ಏರ್ಪಡಲಿದೆ. ಎರಡು ಪಕ್ಷಗಳ ನಡುವಣ ಅಂತರ ಸುಮಾರು 60ರಷ್ಟು ಇರಬಹುದು ಎಂದು ಸಮೀಕ್ಷೆ ತಿಳಿಸಿದೆ.

ಬೇರೆ ಗುಂಪಿನ ರಕ್ತ ಹಾಕಿ ವೈದ್ಯರ ಯಡವಟ್ಟು – ಯುವತಿ ಸಾವು

ಉತ್ತರಾಖಂಡದಲ್ಲಿ 38 ಸ್ಥಾನಗಳೊಂದಿಗೆ ಬಿಜೆಪಿಯೇ ಮುಂಚೂಣಿಯಲ್ಲಿದೆ. ಆದರೆ, ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ 57ಕ್ಕಿಂತ ಈ ಬಾರಿ 19 ಸ್ಥಾನ ಕಡಿಮೆ ಇದೆ. ಇಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದ್ದು, ಈ ಬಾರಿ 21 ಸ್ಥಾನ ಹೆಚ್ಚು ಗಳಿಸಿ ತನ್ನ ಬಲವನ್ನು 32ಕ್ಕೆ ಹೆಚ್ಚಿಸಿಕೊಳ್ಳಲಿದೆ. ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವಣ ಅಂತರ ಕಡಿಮೆಯಾಗಲಿದೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಎಎಪಿ 51 ಸ್ಥಾನ ಗಳಿಸಲಿದೆ. ಕಾಂಗ್ರೆಸ್ 46 ಸ್ಥಾನ ಗಳಿಸಲಿದೆ. ಕಳೆದ ಬಾರಿ ಕಾಂಗ್ರೆಸ್ 77 ಸ್ಥಾನ ಗಳಿಸಿತ್ತು. ಅಕಾಲಿ ದಳ 20 ಸ್ಥಾನಗಳೊಂದಿಗೆ 3ನೇ ಸ್ಥಾನದಲ್ಲಿದೆ.

40 ಸದಸ್ಯ ಬಲದ ವಿಧಾನಸಭೆಯ ಗೋವಾದಲ್ಲಿ 21 ಸ್ಥಾನದೊಂದಿಗೆ ಬಿಜೆಪಿಯೇ ಮುಂಚೂಣಿಯಲ್ಲಿದೆ. ಸಮೀಕ್ಷೆಯಲ್ಲಿ ಇತರರಿಗೆ 10, ಎಎಪಿಗೆ 5 ಹಾಗೂ ಕಾಂಗ್ರೆಸ್‌ಗೆ 4 ಸ್ಥಾನ ದೊರೆತಿವೆ. 60 ಸದಸ್ಯ ಬಲದ ವಿಧಾನಸಭೆಯ ಮಣಿಪುರದಲ್ಲಿ 27 ಸ್ಥಾನಗಳೊಂದಿಗೆ ಬಿಜೆಪಿ ಮುಂಚೂಣಿಯಲ್ಲಿದೆ. ಕಾಂಗ್ರೆಸ್ 22 ಸ್ಥಾನ ಗಳಿಸಿರುವುದಾಗಿ ಸಮೀಕ್ಷಾ ವರದಿ ತಿಳಿಸಿದೆ.

ಸಿದ್ದರಾಮಯ್ಯ , ಡಿಕೆಶಿ ವಿರುದ್ಧ ಬಿಜೆಪಿ ಟ್ವೀಟ್ ವಾರ್…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd