ಪ್ರಾಯದ ಯುವಕ ಮೇಕೆಯನ್ನು ಮದುವೆಯಾಗಿದ್ದಾರು ಏಕೆ !?
ಅಮರಾವತಿ: ಕನ್ಯೆಯೊಂದಿಗೆ ಮದುವೆಯಾಗುವುದು ಸಾಮನ್ಯ ಸಂಗತಿ, ಆದರೆ ಇಲ್ಲೊಬ್ಬ ಯುವಕ ಶಾಸ್ತ್ರೋಕ್ತವಾಗಿ ಮೇಕೆಯನ್ನು ಮದುವೆಯಾಗಿರುವ ಅಪರೂಪದ ಘಟನೆ ಆಂಧ್ರ ಪ್ರದೇಶದ ನಜಿವೀಡುದಲ್ಲಿ ನಡೆದಿದೆ.
ಹೌದು ಯುವಕನೊಬ್ಬ ಮದುವೆಯಾಗಲು ಕನ್ಯೆ ಹುಡುಕುತ್ತಿದ್ದ. ಆದರೆ ಕನ್ಯೆ ಸಿಗದೆ ರೋಸಿಹೋಗಿದ್ದ. ಯುವಕನಿಗಾಗಿ ಮನೆಯವರು ಜ್ಯೋತಿಷ್ಯರೊಬ್ಬರ ಬಳಿ ಯುವಕನ ಜಾತಕವನ್ನು ತೋರಿಸಿದ್ದಾರೆ. ಜ್ಯೋತಿಷಿ ಯುವಕನ ಜಾತಕ ನೋಡಿ ಈತನಿಗೆ ಎರಡು ಮದುವೆ ಆಗುವ ಯೋಗ ಇದೆ ಎಂದು ಜ್ಯೋತಿಷ್ಯ ನುಡಿದಿದ್ದಾರೆ.
ಈ ಯುವಕ ಮದುವೆ ಆದರು ಕೂಡ ಮೊದಲನೇ ಹೆಂಡತಿ ಮರಣ ಹೊಂದುತ್ತಾಳೆ ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದರು. ಈ ಮಾತು ಕೇಳಿ ಕುಟುಂಬದವರು ಈ ಸಮಸ್ಯೆಗೆ ಪರಿಹಾರ ಏನು ಎಂದು ಪ್ರಶ್ನಿಸಿದ್ದಾರೆ. ಬಳಿಕ ಯುವಕ ಮೊದಲು ಮೇಕೆಯನ್ನು ಮದುವೆ ಆಗುವಂತೆ ಜ್ಯೋತಿಷಿ ಪರಿಹಾರ ಸೂಚಿಸಿದ್ದಾರೆ. ಇದನ್ನು ಕೇಳಿ ಯುವಕನ ಮನೆಯವರು ಯುವಕನಿಗೆ ಮೇಕೆಯೊಂದಿಗೆ ಮದುವೆ ಮಾಡಲು ತೀರ್ಮಾನಿಸಿದ್ದಾರೆ.