ಮದಗಜ ಟೀಮ್ ನಿಂದ ಅಭಿಮಾನಿಗಳಿಗೆ ಬಿಗ್ ಗಿಫ್ಟ್ : ತೆಲುಗಿನಲ್ಲಿ ಟೀಸರ್ ರಿಲೀಸ್ ಡೇಟ್ ಅನೌನ್ಸ್..!
ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹುನಿರೀಕ್ಷೆ ಮದಗಜ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಅಂದ್ಹಾಗೆ ಕನ್ನಡದಲ್ಲಿ ಟೀಸರ್ ರಿಲೀಸ್ ಆಗಿ ಸೋಷಿಯಲ್ ಮೀಡಿಯಾಗಳಲ್ಲಿ ಮದಗಜ ರಾರಾಜಿಸುತ್ತಿದೆ. ಇದರ ಬೆನ್ನಲ್ಲೇ ಇದೀಗ ತೆಲುಗಿನಲ್ಲೂ ಟೀಸರ್ ರಿಲೀಸ್ ಮಾಡುವ ಡೇಟ್ ಅನೌನ್ಸ್ ಮಾಡಿದ ಚಿತ್ರತಂಡ. ಇಂದು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಮಹತ್ವದ ಘೋಷಣೆ ಮಾಡಿರೋ ಸಿನಿಮಾ ತಂಡ ತೆಲುಗಿನಲ್ಲಿ ಟೀಸರ್ ರಿಲೀಸ್ ಡೇಟ್ ಬಹಿರಂಗಪಡಿಸಿದೆ.
ಕೊರೊನಾ ಸೋಂಕಿನ ಭೀತಿ : ಪರಿವಾರಕ್ಕಾಗಿ ಸೆಲ್ಫ್ ಕ್ವಾರಂಟೈನಲ್ಲಿ ‘ರಾಖಿ ಭಾಯ್’..!
ಅಂದ್ಹಾಗೆ ಜನವರಿ 1 ಹೊಸ ವರ್ಷಕ್ಕೆ ತೆಲುಗಿನಲ್ಲಿ ಮದಗಜ ಟೀಸರ್ ರಿಲೀಸ್ ಆಗಲಿದೆ. ಜನವರಿ 1 ರಂದು 10.10 ಕ್ಕೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ತೆಲುಗು ಟೀಸರ್ ಬಿಡುಗಡೆಯಾಗಲಿದೆ. ಇನ್ನೂ ಹೊಸ ವರ್ಷದ ಪ್ರಯುಕ್ತ ಮದಗಜ ಸಿನಿಮಾದ ತೆಲುಗು ವರ್ಷನ್ ಟೀಸರ್ ಬಿಡುಗಡೆಯಾಗಲಿದೆ ಎಂದು ಸ್ವತಃ ಶ್ರೀಮುರಳಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಇನ್ನೂ ಡಿಸೆಂಬರ್ 17 ರಂದು ಶ್ರೀಮುರಳಿಯ ಹುಟ್ಟುಹಬ್ಬದ ಪ್ರಯುಕ್ತ ಮದಗಜ ಸಿನಿಮಾದ ಕನ್ನಡ ಟೀಸರ್ ಬಿಡುಗಡೆಯಾಗಿತ್ತು. ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿ ಭಾರೀ ಸದ್ದು ಮಾಡ್ತಿದೆ. ಭಾರೀ ವೀಕ್ಷಣೆ ಪಡೆದಿದೆ. ನೆಟ್ಟಿಗರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ತೆಲುಗಿನಲ್ಲೂ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಮೂಲಕ ಟಾಲಿವುಡ್ ನಲ್ಲೂ ಮೋಡಿ ಮಾಡಲು ಸಜ್ಜಾಗಿದ್ದಾರೆ ರೋರಿಂಗ್ ಸ್ಟಾರ್. ಈ ಸುದ್ದಿ ಕೇಳ್ತಿದ್ದಂತೆ ಕನ್ನಡ ಸಿಇನಿಪ್ರಿಯರು ಶ್ರೀಮುರುಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇನ್ನೂ ಈಗಾಗಲೇ ಮದಗಜ ಸಿನಿಮಾದ ಶೂಟಿಂಗ್ ಕಡೆಯ ಹಂತ ತಲುಪಿದ್ದು, ಶೀಘ್ರವೇ ಸಂಪೂರ್ಣ ಚಿತ್ರೀಕರಣ ಮುಗಿಯಲಿದೆ. ಚಿತ್ರದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದು, ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







