ಹಜ್ ಯಾತ್ರೆ – ಮುಸ್ಲಿಂ ಬಾಂಧವರಿಗೆ ಮಹತ್ವದ ಸೂಚನೆ!
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಇಂದು ಹಜ್ ಯಾತ್ರೆಯ 2022 ಪ್ರಕ್ರಿಯೆಯನ್ನ ಶುರುಮಾಡಿದರು . ಹಜ್ ಯಾತ್ರೆಯ ಸಂಪೂರ್ಣ ಪ್ರಕ್ರಿಯೆಯು 100% ಆನ್ಲೈನ್ ಮೂಲಕವೇ ಜರುಗಲಿದೆ.
ಹಜ್ ಯಾತ್ರೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜನವರಿ 31, 2022. ಜನರು ಹಜ್ಗೆ ಆನ್ಲೈನ್ನಲ್ಲಿ ಮತ್ತು “ಹಜ್ ಮೊಬೈಲ್ ಅಪ್ಲಿಕೇಶನ್” ಮೂಲಕ ಅರ್ಜಿ ಸಲ್ಲಿಸಬಹುದು.
‘ಹಜ್ ಆಪ್ ಇನ್ ಯುವರ್ ಹ್ಯಾಂಡ್’ ಎಂಬ ಅಡಿಬರಹದೊಂದಿಗೆ ಆಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಪದೇ ಪದೇ ಕೇಳಲಾಗುವ ಪ್ರಶ್ನೆಗಳು, ಅರ್ಜಿ ನಮೂನೆ, ಅರ್ಜಿಯನ್ನ ಭರ್ತಿ ಮಾಡಲು ಮಾಹಿತಿ ನೀಡುವ ವೀಡಿಯೊ ಜೊತೆಗೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಅಪ್ಲಿಕೇಶನ್ ಒಳಗೊಂಡಿದೆ.