ಹಮಾಸ್ (Hamas) ಉಗ್ರರು ಹಲವು ರಾಷ್ಟ್ರಗಳ ಒತ್ತೆಯಾಳು ಪ್ರಜೆಗಳನ್ನು ಬಿಡುಗಡೆ ಮಾಡಿದ್ದಾರೆ. 12 ಜನ ಒತ್ತೆಯಾಳುಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ ಎಂದು ಥಾಯ್ಲೆಂಡ್ ಪ್ರಧಾನಿ ಸ್ರೆಟ್ಟಾ ಥಾವಿಸಿನ್ (Srettha Thavisin) ಹೇಳಿದ್ದಾರೆ.
“12 ಥಾಯ್ ಒತ್ತೆಯಾಳುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಭದ್ರತಾ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೃಢಪಡಿಸಿದೆ. ಗಾಜಾದಲ್ಲಿ ತಾತ್ಕಾಲಿಕ ಕದನ ವಿರಾಮದ(Truce Deal) ಭಾಗವಾಗಿ ಹಮಾಸ್, ಇಸ್ರೇಲಿ ಜೈಲಿನಲ್ಲಿರುವ 39 ಪ್ಯಾಲೆಸ್ತೀನಿಯಾದವರ ಪ್ರತಿಯಾಗಿ 13 ಜನ ಇಸ್ರೇಲಿ ಒತ್ತೆಯಾಳುಗಳ ಗುಂಪನ್ನು ನೆರೆಯ ಈಜಿಪ್ಟ್‌ಗೆ ತಲುಪಿಸಲು ಆರಂಭದಲ್ಲಿ ನಿಗದಿಪಡಿಸಲಾಗಿತ್ತು. 12 ಥಾಯ್ ಪ್ರಜೆಗಳನ್ನು ಬಿಡುಗಡೆ ಮಾಡಿ, ಸುಮಾರು ಎರಡು ತಿಂಗಳ ನಂತರ 25 ಜನರು ಸೆರೆಯಿಂದ ಹೊರಬಂದಿದ್ದಾರೆ.
13 ಇಸ್ರೇಲಿಗಳ ಜೊತೆಗೆ ತನ್ನ 12 ನಾಗರಿಕರನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ ಎಂದು ಥಾಯ್ಲೆಂಡ್ ಘೋಷಿಸಿತು.