ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸುಂದರ ಜೀವನ ನಡೆಸುತ್ತಿರುವ ಅವರು ಈಗ ನಿವಾಸ ಖಾಲಿ ಮಾಡಿಕೊಂಡಿರುವ ವಿಚಾರಕ್ಕೆ ಚರ್ಚೆಗೆ ಬಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಜೊತೆಗೆ ಮದುವೆಯಾದ ನಂತರದಿಂದ ಅಮೆರಿಕದಲ್ಲಿಯೇ ಐಷಾರಾಮಿ ಬದುಕು ನಡೆಸುತ್ತಿದ್ದಾರೆ. ಆದರೆ, ಈಗ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಗೆ ಸಂಕಷ್ಟ ಶುರುವಾಗಿದ್ದು, ಬರೋಬ್ಬರಿ 165 ಕೋಟಿ ರೂ. ಮೌಲ್ಯದ ನಿವಾಸವನ್ನು ತೊರೆದಿದ್ದಾರೆ. 2019ರಿಂದಲೂ ಈ ಜೋಡಿ ಆ ನಿವಾಸದಲ್ಲಿ ವಾಸಿಸುತ್ತಿತ್ತು. ಆದರೆ, ಈಗ ಮನೆ ತೊರೆದಿದ್ದು, ಅದು ವಾಸಯೋಗ್ಯವಲ್ಲ ಎನ್ನಲಾಗಿದೆ.
ಹೀಗಾಗಿ ಮಾರಾಟ ಮಾಡಿದ ಸಂಸ್ಥೆಯ ವಿರುದ್ಧ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ದೂರು ದಾಖಲಿಸಿದ್ದಾರೆ. ಈ ದಂಪತಿ ವಾಸಿಸಲು ಆರಂಭಿಸಿದಾಗಲೇ ಮನೆಯ ಕೆಲವಡೆ ಸಮಸ್ಯೆಗಳು ಎದುರಾಗಿವೆ. ಪೂಲ್ ಮತ್ತು ಸ್ಪಾ ಏರಿಯಾದಲ್ಲಿ ಆರಂಭದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ನಂತರ ಮಹಡಿ ಮೇಲಿರುವ ಬಾರ್ಬಿಕ್ಯೂ ಏರಿಯಾದಲ್ಲಿ ಲೀಕೇಜ್ ಕಾಣಿಸಿಕೊಂಡಿದೆ. ನಂತರ ಮನೆಯ ಹಲವು ಪ್ರದೇಶಗಳಲ್ಲಿ ಲೀಕೇಜ್ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದಾಗಿ ಈ ದಂಪತಿ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ಮನೆ ಮಾರಾಟ ಮಾಡಿರುವ ವ್ಯಕ್ತಿಯು ಮನೆ ದುರಸ್ತಿಯ ವೆಚ್ಚಗಳನ್ನು ಮರು ಪಾವತಿಸಬೇಕು. ನಷ್ಟ ಮತ್ತು ಪ್ರತಿವಾದಿಯ ನಡವಳಿಕೆಯಿಂದ ಉಂಟಾದ ಇತರ ಹಾನಿಗಳಿಗೆ ಪರಿಹಾರವನ್ನು ನೀಡಬೇಕು. ಆಸ್ತಿಯನ್ನು ದುರಸ್ತಿ ಮಾಡುವ ವೆಚ್ಚವು ಸುಮಾರು 20 ಕೋಟಿ ರೂ. ಹಣ ನೀಡಬೇಕೆಂದು ಒತ್ತಾಯಿಸಿದ್ದಾರೆ.