ನವದೆಹಲಿ: ಸೀಪ್ ನದಿಯಲ್ಲಿ ದೋಣಿ ಮುಳುಗಿ 8 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ (Madhya Pradesh) ಶಿಯೋಪುರ್ ಜಿಲ್ಲೆಯ ಸೀಪ್ ನದಿಯಲ್ಲಿ ಈ ಘಟನೆ ನಡೆದಿದೆ. ದೋಣಿ ಮುಳುಗಿದ ಪರಿಣಾಮ ಅದರಲ್ಲಿದ್ದವರೆಲ್ಲ ನೀರಲ್ಲಿ ಮುಳುಗಿದ್ದಾರೆ. ಮುಳುಗಿದವರಿಗಾಗಿ ಸಾಕಷ್ಟು ಶೋಧ ಕಾರ್ಯ ನಡೆಸಲಾಗಿದೆ. ಆದರೆ, ಅವರು ಪತ್ತೆಯಾಗದ ಹಿನ್ನೆಲೆಯಲ್ಲಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಸಂಭವಿಸಿದಾಗ ದೋಣಿಯಲ್ಲಿ 12ಕ್ಕೂ ಅಧಿಕ ಜನರಿದ್ದರು. ಈ ಪೈಕಿ ನಾಲ್ವರನ್ನು ರಕ್ಷಿಸಲಾಗಿದೆ. ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಇಆರ್‌ಎಫ್) ತಂಡದ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಜೋರಾಗಿ ಗಾಳಿ ಬೀಸಿದ್ದರಿಂದಾಗಿ ದೋಣಿ ಮುಳುಗಲು ಕಾರಣವಾಗಿರಬಹುದು ಎನ್ನಲಾಗಿದೆ.