ಇಂದೋರ್ : 5 ವರ್ಷದಲ್ಲಿ 75 ಯುವತಿಯರ ಮದುವೆಯಾಗಿ ವೇಶ್ಯಾವಾಟಿಗೆ ತಳ್ಳಿದ ನೀಚ
ಇಂದೋರ್ : ನೀಚನೊಬ್ಬ 5 ವರ್ಷಗಳಲ್ಲಿ ಸುಮಾರು 75 ಯುವತಯಿಯರನ್ನು ಮದುವೆಯಾಗಿ ಅವರೆಲ್ಲರನ್ನೂ ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದು ಇದೀಗ ಸಿಕ್ಕಿಬಿದ್ದಿದ್ದಾನೆ. ಸೆಕ್ಸ್ ರಾಕೆಟ್ ಕಳ್ಳಸಾಗಣೆದಾರ ಮುನೀರ್ ಅಲಿಯಾಸ್ ಮುನಿರುಲೆ ಎಂಬಾತ ವಿಚಾರಣೆ ವೇಳೆ ಅನೇಕ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ.
ಈತ ಬಾಂಗ್ಲಾದೇಶದಿಂದ 200 ಕ್ಕೂ ಹೆಚ್ಚು ಹುಡುಗಿಯರನ್ನು ಪುಸಲಾಯಿಸಿ , ಕೆಲಸ ಕೊಡಿಸುವ ನೆಪ , ಪ್ರೀತಿ ನೆಪ , ಎಲ್ಲದ್ದಕ್ಕಿಂತ ಮೀರಿ ಅನೇಕರನ್ನ ಮದುವೆಯಾಗಿ ಕರೆದುಕೊಂಡು ಬಂದು ವೇಶ್ಯಾವಾಟಿಕೆಗೆ ದೂಡಿದ್ದಾನೆ. ಅಷ್ಟೇ ಅಲ್ಲದೇ ಪ್ರತಿ ತಿಂಗಳು 55 ಕ್ಕೂ ಹೆಚ್ಚು ಹುಡುಗಿಯರನ್ನು ಕರೆತರುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಮುನೀರ್ ನನ್ನು ಕಳೆದ ಗುರುವಾರ ಪೊಲೀಸರು ಬಂಧಿಸಿದ್ದರು.
ಬಾಂಗ್ಲಾದೇಶ ಮತ್ತು ಭಾರತದ ಪೋರಸ್ ಗಡಿಯಲ್ಲಿರುವ ಸುರಂಗಗಳ ಮಾರ್ಗದ ಮೂಲಕ ಆರೋಪಿಗಳು ಹುಡುಗಿಯರನ್ನ ಕರೆತರುತ್ತಿದ್ದರು ಮತ್ತು ಗಡಿ ಸಮೀಪದ ಸಣ್ಣ ಹಳ್ಳಿಯಲ್ಲಿರುವ ಏಜೆಂಟರ ಮೂಲಕ ಮುರ್ಷಿದಾಬಾದ್ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಕರೆತಂದು ಭಾರತಕ್ಕೆ ಕಳುಹಿಸಿಕೊಡ್ತಿದ್ರು ಎನ್ನಲಾಗಿದೆ.
ಅಂದ್ಹಾಗೆ ಇಂದೋರ್ ಪೊಲೀಸರು 11 ತಿಂಗಳ ಹಿಂದೆ ಲಸುಡಿಯಾ ಮತ್ತು ವಿಜಯ್ ನಗರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ 21 ಬಾಂಗ್ಲಾದೇಶಿ ಹುಡುಗಿಯರನ್ನು ರಕ್ಷಿಸಿದ್ದರು. ಆನಂತರದಲ್ಲಿ ಮಾನವ ಕಳ್ಲ ಸಾಗಾಣಿಕೆಯ ಬಗ್ಗೆ ತನಿಖೆ ಚುರುಕುಗೊಳಿಸಿದ್ದರು.
ಮುನೀರ್ ಹೊರತಾಗಿ ಸಾಗರ್ ಅಲಿಯಾಸ್ ಸ್ಯಾಂಡೋ, ಅಫ್ರಿನ್, ಅಮರಿನ್ ಮತ್ತು ಇತರರನ್ನು ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿ ಗುರುತಿಸಲಾಗಿದೆ. ಮುನೀರ್ ಬಾಂಗ್ಲಾದೇಶದ ಜಾಸೋರ್ ಮೂಲದವನು. ಈತ ಹುಡುಗಿಯರನ್ನು ಮದುವೆ ಮಾಡಿಕೊಂಡು ಭಾರತಕ್ಕೆ ಕರೆತಂದು ಮಾರಾಟ ಮಾಡ್ತಿದ್ದ. ಮಾತ್ರವಲ್ಲದೇ ಇದರ ಹಿಂದೆ ದೊಡ್ಡ ಜಾಲವೇ ಇದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮುನೀರ್ ಮೊದಲು ಹುಡುಗಿಯರನ್ನು ಕೋಲ್ಕತ್ತಾ, ನಂತರ ಮುಂಬೈಗೆ ಕರೆತಂದು ನಂತರ ಭೋಪಾಲ್ ಮತ್ತು ದೇಶದ ಇತರ ನಗರಗಳಿಗೆ ಬೇಡಿಕೆಯ ಮೇರೆಗೆ ಹುಡುಗಿಯರನ್ನು ಕಳುಹಿಸಿಕೊಡ್ತಿದ್ದ ಎಂದು ತಿಳಿದುಬಂದಿದೆ.








