Cooking : ಬಾಯಲ್ಲಿ ನೀರೂರಿಸುವ ಪಾವ್ ಭಾಜಿ ಮನೆಯಲ್ಲಿ ಮಾಡಿ… ರೆಸಿಪಿ ನೋಡಿ..!!!
ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ – 3
ಹೂಕೋಸು – 11/2 ಕಪ್
ಕ್ಯಾರೆಟ್ – 1/2 ಕಪ್
ಬಟಾಣಿ – 1/2 ಕಪ್
ಈರುಳ್ಳಿ -2
ಟೊಮ್ಯಾಟೊ – 2
ಕ್ಯಾಪ್ಸಿಕಂ -1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಎವರೆಸ್ಟ್ ಪಾವ್ ಭಾಜಿ ಮಸಾಲ – 2 ಟೀಸ್ಪೂನ್
ಮೆಣಸಿನ ಪುಡಿ – 2 ಟೀಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಮೊದಲಿಗೆ ಆಲೂಗಡ್ಡೆ, ಹೂಕೋಸು, ಕ್ಯಾರೆಟ್ ಮತ್ತು ಬಟಾಣಿಗಳನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ನಂತರ ಆಲೂಗಡ್ಡೆಯ ಸಿಪ್ಪೆ ತೆಗೆದು ಎಲ್ಲವನ್ನು ಹುಡಿ ಮಾಡಿ ಮತ್ತು ಪಕ್ಕದಲ್ಲಿ ಇರಿಸಿಕೊಳ್ಳಿ.
ನಂತರ ಈರುಳ್ಳಿ, ಟೊಮ್ಯಾಟೊ ಮತ್ತು ಕ್ಯಾಪ್ಸಿಕಂ ಅನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಳಿಕ ಬಾಣಲೆಯಲ್ಲಿ 1 ಟೀಸ್ಪೂನ್ ಬೆಣ್ಣೆಯನ್ನು ಬಿಸಿ ಮಾಡಿ. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಮಧ್ಯಮ ಉರಿಯಲ್ಲಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಬಳಿಕ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಟೊಮೆಟೊ ಸೇರಿಸಿ. ಟೊಮೆಟೊ ಮೃದುವಾಗುವವರೆಗೆ ಬೇಯಿಸಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಉತ್ತಮ ಸುವಾಸನೆ ಬರುವವರೆಗೆ ಹುರಿಯಿರಿ. ಈಗ ಅದಕ್ಕೆ ಬೇಯಿಸಿ ಪುಡಿ ಮಾಡಿದ ತರಕಾರಿಗಳನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಎವರೆಸ್ಟ್ ಪಾವ್ ಭಾಜಿ ಮಸಾಲ ಮತ್ತು ಮೆಣಸಿನ ಪುಡಿ ಸೇರಿಸಿ. ಚೆನ್ನಾಗಿ ಬೆರೆಸಿ. ಮಧ್ಯಮ ಉರಿಯಲ್ಲಿ ಸುಮಾರು 10 ನಿಮಿಷ ಬೇಯಿಸಿ. ಕೊನೆಯದಾಗಿ ಸ್ವಲ್ಪ ಬೆಣ್ಣೆ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
cooking , food recipies , saakshatv









