ಮದುವೆಯಾಗಿ 15 ವರ್ಷಗಳ ನಂತರ ವಿಚ್ಛೇದನಕ್ಕೆ ಮುಂದಾದ ಅಮಿರ್ ಖಾನ್ ದಂಪತಿ
ಮುಂಬೈ: ಬಾಲಿವುಡ್ ನ ಸ್ಟಾರ್ ನಟ ಅಮಿರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ಮದುವೆಯಾದ 10 ವರ್ಷಗಳ ಬಳಿಕ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.. ಹೌದು.. ಇಬ್ಬರೂ ಪರಸ್ಪರ ಒಪ್ಪಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಆಮಿರ್ ಖಾನ್ ಮತ್ತು ಕಿರಣ್ ರಾವ್ ಜೊತೆಯಾಗಿ ಹೇಳಿಕೆ ಬಿಡುಗಡೆ ಮಾಡಿದ್ದು, ಇನ್ಮುಂದೆ ಇಬ್ಬರ ದಾರಿ ಬೇರೆ ಆಗಿರಲಿದೆ. ನಾವಿಬ್ಬರು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಈ 15 ವರ್ಷಗಳಲ್ಲಿ ಇಬ್ಬರೂ ಸುಂದರ ಜೀವನವನ್ನು ಕಳೆದಿದ್ದೇವೆ. ಹೊಸ ಅನುಭವ ಆನಂದ, ಸಂತೋಷವನ್ನು ಶೇರ್ ಮಾಡಿಕೊಂಡಿದ್ದೇವೆ. ನಮ್ಮಿಬ್ಬರ ಸಂಬಂಧ ಕೇವಲ ವಿಶ್ವಾಸ, ಗೌರವ ಮತ್ತು ಪ್ರೀತಿಯ ಮೇಲೆಯೇ ಭದ್ರವಾಗಿ ಬೆಳೆದಿದೆ.
ಇಂದು ನಾವು ಜೀವನ ಹೊಸ ಅಧ್ಯಾಯ ಆರಂಭಿಸಲು ಹೊರಟಿದ್ದೇವೆ. ಆದ್ರೆ ಗಂಡ-ಹೆಂಡತಿಯಾಗಿ ಅಲ್ಲ. ಬದಲಾಗಿ ತಂದೆ-ತಾಯಿ ಮತ್ತು ವಿಸ್ತೃತ ಕುಟುಂಬದ ರೂಪದಲ್ಲಿ. ನಾವು ಕಳೆದ ಹಲವು ದಿನಗಳಿಂದಲೇ ಪ್ರತ್ಯೇಕವಾಗುವ ಪ್ಲಾನ್ ಆರಂಭಿಸಿದ್ದೇವೆ.
ಇಂದು ನಮ್ಮ ನಿರ್ಧಾರವನ್ನು ಸಮಾಜದ ಮುಂದೆ ಅಧಿಕೃತವಾಗಿ ಹೇಳಿಕೊಳ್ಳುತ್ತಿದ್ದೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಪತಿ-ಪತ್ನಿ ರೂಪದಲ್ಲಿ ಪ್ರತ್ಯೇಕವಾದ್ರೂ ಕುಟುಂಬಕ್ಕಾಗಿ ಒಬ್ಬರಿಗೊಬ್ಬರು ಜೊತೆಯಾಗಿರುತ್ತೇವೆ. ಜೊತೆಯಾಗಿಯೇ ಪುತ್ರನ ಪಾಲನೆ-ಪೋಷಣೆ ಮಾಡುತ್ತೇವೆ. ಸಿನಿಮಾ, ನಿರ್ಮಾಣ ಸಂಸ್ಥೆ ಮತ್ತು ಇನ್ನಿತರ ಪ್ರೊಜೆಕ್ಟ್ ಗಳಲ್ಲಿ ಸಹೋದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತೇವೆ. ಕೆಲಸದ ಮಧ್ಯೆ ಸಂಬಂಧವನ್ನು ಅಡ್ಡಿ ತರಲ್ಲ ಎಂದು ಹೇಳಿಕೊಂಡಿದ್ದಾರೆ.
ಅಂದ್ಹಾಗೆ ಈ ಜೋಡಿ ನಡುವೆ ಲಗಾನ್ ಚಿತ್ರದ ಸಂದರ್ಭದಲ್ಲಿ ಪ್ರೀತಿ ಹುಟ್ಟಿತ್ತು.. ಬಳಿಕ ಡಿಸೆಂಬರ್ 28, 2005ರಂದು ಮದುವೆಯಾಗಿದ್ದರು.. ಅವರಿಗೆ ಓರ್ವ ಪುತ್ರನಿದ್ದಾನೆ.. ಅಮಿರ್ ಖಾನ್ ಪುತ್ರನ ಹೆಸರು ಅಜಾದ್.