ಪುನೀತ್ ರಾಜ್ ಕುಮಾರ್ ‘ನಮನ ಕಾರ್ಯಕ್ರಮ’ಕ್ಕೆ ಅತಿಥಿಗಳ ಆಗಮನ ಶುರು..!
ಹೃದಯಸ್ತಂಭನದಿಂದ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದಿಂದ ನಮನ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಸದ್ಯ ಗಾಯಿತ್ರಿ ವಿಹಾರ ಅಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಚಿತ್ರರಂಗ ಹಾಗೂ ರಾಜಕೀಯ ರಂಗದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.
ಗಾಯಿತ್ರಿ ವಿಹಾರ್ ಸಾಗರ್ ಹಾಲ್ ಅಲ್ಲಿ 2000 ಆಸನಗಳ ವ್ಯವಸ್ಥೆ ಮಾಡಲಾಗಿದೆ.. 750 ವಿವಿಐಪಿಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.. 200 ಮಂದಿಗೆ ಕೂರಲು ಸೋಫಾ ವ್ಯವಸ್ಥೆಇದೆ.. 1250 ವಿಐಪಿ ಆಸನಗಳಿವೆ.. ಸ್ಟೇಜ್ ನಲ್ಲಿ ಸಂಪೂರ್ಣ ಎಲ್ ಇಡಿ ವ್ಯವಸ್ಥೆಯಿದೆ..
16×12 ಅಳತೆಯ 4 ಎಲ್ ಇ ಡಿ ವಾಲ್.. 24×60 ಅಳತೆಯಲ್ಲಿ ಸ್ಟೇಜ್ ಎಲ್ ಇ ಡಿ ಅಳವಡಿಸಲಾಗಿದೆ.. ಕನ್ನಡ, ತೆಲುಗು, ತಮಿಳು,ಮಲಯಾಳಂ,ಹಿಂದಿ ಸಿನಿಮಾರಂಗದ ಪ್ರಮುಖ ನಟ, ನಟಿಯರು ಭಾಗಿಯಾಗುತ್ತಿದ್ದಾರೆ..
750 ವಿವಿಐಪಿ ಆಸನಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ.. ಈಗಾಗಲೇ ವಾಣಿಜ್ಯ ಮಂಡಳಿ 2000 ಪಾಸ್ ಗಳ ವಿತರಣೆ ಮಾಡಿದೆ.. ಅದಕ್ಕೆ ತಕ್ಕಂತೆ ಗಾಯಿತ್ರಿ ವಿಹಾರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.. MPI, VVIP, VIP ಗಳಿಗೆ ಮೂರು ದ್ವಾರಗಳಲ್ಲಿ ಎಂಟ್ರಿಗೆ ವ್ಯವಸ್ಥೆ ಮಾಡಲಾಗಿದೆ..








