( ಇದು ಧಾರಾವಾಹಿಯಾಗಿದ್ದು , ಪ್ರತಿ ದಿನ Saakshatv Authour Special ವಿಭಾಗದಲ್ಲಿ ಸಂಜೆ 6.30 ಕ್ಕೆ ಒಂದೊಂದು ಅಧ್ಯಾಯಗಳನ್ನ ಹಾಕುತ್ತಾ ಹೋಗುವೆ.. – ನಿಹಾರಿಕಾ ರಾವ್ )
ಬೆಂಗಳೂರಿನ ಇಬ್ಬರು ಕೋಟ್ಯಾಧಿಪತಿಗಳ ಮಕ್ಕಳ ನಡುವೆ ಅದ್ಧೂರಿ ಮದುವೆ… ವರ ಸಂತೋಷದಲ್ಲಿ ಪ್ರಪಂಚ ಮರೆತಿದ್ರೆ.. ವಧುವಿನ ಪಾಲಿಗೆ ಜೀವನವೇ ಮುಗಿದು ಹೋಗಿರುತ್ತೆ….? ಇಬ್ಬರ ನಡುವೆ ಮದುವೆಯಾದಾಗ ಮುಂದೇನ್ ಆಗುತ್ತೆ…?
@@@@@@@@@@@@@@@@@@@@@@@
ಕೆಂಪು ಸೀರೆಯುಟ್ಟ… ಉದ್ದ ಜಡೆಗೆ ಜಡೆ ಬಿಲ್ಲೆ ಹಾಕಿಕೊಂಡು… ತಲೆ ತುಂಬ ಹೂ ಮುಡಿದು… ಮೈತುಂಬ ಒಡವೆಗಳನ್ನ ಹಾಕಿಕೊಂಡು.. ಕೈತುಂಬ ಬಳೆ ತೊಟ್ಟು ಕುಳಿತಿದ್ದ ಅವಳ ಸೌಂದರ್ಯ ಅವರ್ಣನೀಯ.. ದೇವರು ಬಹುಷಹ ಪುರುಸೊತ್ತಿನಲ್ಲಿದ್ದಾಗಲೇ ಅವಳನ್ನ ಸೃಷ್ಟಿಸಿರಬಹುದು.. ಪರಿಪೂರ್ಣ ಅವಳು. ಪರಮ ಸುಂದರಿ… ದುಂಡು, ಹಾಲ್ಗೆನ್ನೆಯ ಮುಖ ಹೊಳೆಯುವ ದೊಡ್ಡ ದೊಡ್ಡ ಕಣ್ಗಳು.. ಕಣ್ಣಗಳೇ ಎಲ್ಲ ಭಾವನೆಯನ್ನ ಬಿಚ್ಚಿವಂತಿದ್ದವು.. ಅದ್ರಲ್ಲೂ ಕಣ್ಣಿನ ಕಾಡಿಗೆ ಆಕರ್ಷಕ ಕಣ್ಣುಗಳ ಸೌಂದರ್ಯ ನೂರು ಪಟ್ಟು ಹೆಚ್ಚಿಸಿತ್ತು..
ಪರಿಪೂರ್ಣ ಆಕಾರದ ಉಬ್ಬುಗಳ ನಟ್ಟ ನಡುವೆ ಇಡಲಾಗಿದ್ದ ಕೆಂಪು ಬೊಟ್ಟು ಗಿಳಿಯಂತಹ ಮೂಗಿಗೆ ಮೂಗುತ್ತಿ ಮತ್ತಷ್ಟು ಆಕರ್ಷಕವಾಗಿದ್ರೆ, ಹಣೆ ಮೇಲಿನ ಬಾಸಿಂಗ ಬೈತಲೆ ಬೊಟ್ಟು.. ಅಲಂಕಾರದಲ್ಲಿ ಥೇಟ್ ಬೊಂಬೆಯಂತೆ ಕಾಣುತ್ತಿದ್ದಳು..
ಅದ್ರಲ್ಲೂ ತುಟಿ ಕೆಳಗೆ ಇದ್ದ ಹುಟ್ಟು ಮಚ್ಚೆ ಅವಳ ಅಂದ ದುಪ್ಪಟ್ಟಾಗಿಸಿತ್ತು.. ಕೆನ್ನೆ ಮೇಲೆ ಕಪ್ಪು ದೃಷ್ಟಿ ಬೊಟ್ಟು ಅವಳಂದಕ್ಕೆ ಮತ್ತಷ್ಟು ಮೆರಗು…
ಕಿವಿಯಲ್ಲಿ ಸೀರೆಗೆ ಮ್ಯಾಚಿಂಗ್ ಲಕ್ಷ್ಮಿ ಓಲೆ ಜಿಮುಕಿ ಜೊತೆಗೆ ಮಾಟಿ… ಕತ್ತಿಗೆ ಲಕ್ಷ್ಮಿ ಚೋಕರ್ , ಲಾಂಗ್ ನೆಕ್ ಲೆಸ್ , ಮತ್ತೊಂದು ಎದೆ ಭಾಗಕ್ಕೆ ಬರುತ್ತಿದ್ದ ನೆಕ್ ಲೆಸ್ ಹಾಕಿದ್ದಳು..
ತೋಳಿನ ಬಂಕಿಗಳು , ಕೈಗಳಲ್ಲಿ ಉಂಗುರಗಳು, ಗಾಢವಾದ ಬಣ್ಣದಲ್ಲಿ ಅದ್ಭುತವಾ ಡಿಸೈನ್ ನಲ್ಲಿ ಬಿಡಿಸಲಾಗಿದ್ದ ಮೆಹಂದಿ… ಅದೇ ಮೆಹಂದಿಯಲ್ಲಿ ಸಣ್ಣದಾಗಿ ಬರೆಯಲಾಗಿದ್ದ ವರನ ಹೆಸರು…
ಪರಿಪೂರ್ಣವಾಗಿ ಉಟ್ಟಿದ್ದ ಸೀರಿಗೆ ಹೊಟ್ಟೆಯಿಂದ ಸ್ವಲ್ಪ ಮೇಲ್ಭಾಗದಲ್ಲಿ ಕಟ್ಟಲಾಗಿದ್ದ ಡಾಬು ಸೌಂದರ್ಯ ಹೆಚ್ಚಿಸಿತ್ತು… ಕಾಲಿಗೆ ಅಲ್ಕದಲ್ಲಿ ಬಿಡಿಸಲಾಗಿದ್ದ ಚಿತ್ರ, ಕಾಲ್ಗೆಜ್ಜೆಗಳು ಹಾಲ್ಬಣ್ಣದ ಸುಂದರ ಕಾಲುಗಳ ಅಂದವನ್ನ ನೂರು ಪಟ್ಟು ಹೆಚ್ಚಾಗಿಸಿತ್ತು..
ಹೀಗೆ ಪೂರ್ತಿ ಸಿಂಗಾರಗೊಂಡಿದ್ದ ಮಧುಮಗಳು ಒಬ್ಬಳೇ ಕನ್ನಡಿಯನ್ನೇ ದಿಟ್ಟಿಸುತ್ತಾ ಗಾಢವಾಗಿ ಏನೋ ಯೋಚಿಸುತ್ತಾ ಕಾದು ಕುಳಿತಿದ್ದಳು.. ಇಷ್ಟೆಲ್ಲಾ ಅಂದವಾಗಿ ಶೃಂಗಾರಗೊಂಡಿದ್ರೂ ಅವಳ ಮೊಗದಲ್ಲಿ ಕಿಂಚಿತ್ತೂ ನಗುವಾಲಿ, ಸಾಮಾನ್ಯ ಹುಡುಗಿರಂತೆ ತನ್ನ ಮದುವೆಗೆ ಉತ್ಸಾಹ , ಖುಷಿಯಾಗ್ಲಿ ಕಾಣಿಸುತ್ತಾ ಇರಲಿಲ್ಲ..
ಬದಲಾಗಿ ಬೇಸರ, ಹತಾಶೆ, ಜಿಗುಪ್ಸೆ , ಜೀವನವೇ ನಶ್ವರ, ಬದುಕು ಮುಗಿದೇ ಹೊಯಿತು ಅನ್ನೊ ಭಾವನೆ ಎದ್ದು ಕಾಣುತಿತ್ತು.. ಎಷ್ಟೇ ಸುಂದರವಾದ್ರೂ ಹೆಣ್ಣಿಗೆ ನಗುವೆ ಮುಖ್ಯವಾದ ಒಡವೆ… ಆದ್ರೆ ಅದು ಆ ವಧುವಿನಲ್ಲಿ ಕಾಣಿಸುತ್ತಾ ಇರಲಿಲ್ಲ.. ಸಾಮಾನ್ಯ ಮಧುಮಕ್ಕಳಂತೆ ಮದುವೆಯ ಖುಷಿ ಇರಲಿಲ್ಲ… ಸಂಕಟವಿತ್ತು.
ಆದ್ರು ಅಚ್ಚುಕಟ್ಟಾಗಿ ಶೃಂಗಾರಗೊಂಡು ಕೆಲವೇ ಕ್ಷಣಗಳಲ್ಲಿ ಮಂಗಳ ವಾದ್ಯದೊಂದಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಹಸೆಮಣೆ ಏರಲು, ಪಂಡಿತರಿಂದ “ವಧುವನ್ನ ಕರೆದುಕೊಂಡು ಬನ್ನಿ” ಬುಲಾವ್ ಗಾಗಿ ಕಾಯುತ್ತಾ ಒಂದೇ ಸಮನೇ ಕನ್ನಡಿಯನ್ನೇ ದಿಟ್ಟಿಸುತ್ತಾ ನಿರ್ಭಾವಿತಳಾಗಿ ಕುಳಿತಿದ್ದಳು ವಧುವಿನ ಕೋಣೆಯಲ್ಲಿ…
ಹೊರಗಡೆ ಸಂಗೀತ , ಜನರ ಗದ್ದಲ , ಮದುವೆ ಮನೆ ಗಲಾಟೆ , ಚಿಣ್ಣರ ಓಡಾಟ , ಯುವಕ ಯುವತಿಯರ ಕಲರವ , ಬಣ್ಣ ಬಣ್ಣದ ಬಟ್ಟೆಯಲ್ಲಿ ಸಿಂಗಾರಗೊಂಡು ಮದುವೆಗೆ ಉಡುಗರೆಗಳ ಜೊತೆ ಬಂದಿದ್ದ ಅತಿಥಿಗಳು , ಆಗಮಿಸುತ್ತಿದ್ದ ಅತಿಥಿಗಳನ್ನ ದ್ವಾರದಲ್ಲಿ ಹೂ , ತಂಪು ಪಾನೀಯ ನೀಡಿ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದ ವಧು ವರನ ಸಂಬಂಧಿಕರು..
ಮದುವೆ ನೋಡಲು ಆಗಮಿಸುವವರಿಗೆ ಸಾವಿರಾರು ಚೇರ್ ಗಳ ಹಾಕಲಾಗಿತ್ತು.. ಮುಂದೆ ಎರೆಡು ರೋಗಳನ್ನ ವಿಐಪಿಗಳಿಗಾಗಿ ವ್ಯವಸ್ಥೆ ಮಾಡಲಾಗಿತ್ತು. ದೊಡ್ಡ ದೊಡ್ಡ ಗಣ್ಯರು ಮದುವೆಗೆ ಆಗಮಿಸುವವರಿದ್ದರು.
ಒಂದೆಡೆ ವರನ ಸ್ನೇಹಿತರ ಹರಟೆ , ಸಂತೋಷ ಉತ್ಸಾಹ , ವಧುವಿನ ಸ್ನೇಹಿತರಲ್ಲಿ ಕೆಲವರಲ್ಲಿ ಬೇಸರ , ಕೆಲವರಲ್ಲಿ ಖುಷಿ ಇತ್ತು.. ಮಂಟಪದ ಬಳಿ ವರನ ಅತ್ಯಾಪ್ತ ಗೆಳೆಯ ಮಧುವಿನ ಅತ್ಯಾಪ್ತ ಗೆಳತಿಯರು ಮದುವೆ ಕಾರ್ಯಗಳಲ್ಲಿ ತೊಡಗಿದ್ದರು.
ಮಂಗಳ ವಾದ್ಯದವರ ಹಡಬಡಿ, ಜನಜಂಗುಳಿ, ಅದ್ಧೂರಿಯಾಗಿ ಸಜಾವಣೆಗೊಂಡೊದ್ದ ಮದುವೆ, ವೇಯ್ ಟರ್ ಗಳು ಕ್ಷಣಕ್ಣಣಕ್ಕೂ ಬಂದು ಅತಿಥಿಗಳಿಗೆ ಬೇಕಾದ ಜ್ಯೂಸ್ ಇತರೇಗಳ ಬಗ್ಗೆ ಗಮನ ವಹಿಸಿದ್ರು.. ಇಡೀ ಚೌಟರಿ ಅರಮನೆಯಂತೆ ಕಂಗೊಳಿಸಿತ್ತಿತ್ತು.
ಇದೆಲ್ಲದ್ರ ನಡುವೆ ಹಸೆಮಣೆ ಮಂಟಪ ಅದ್ಧೂರಿಯಾಗಿ ಅಲಂಕೃತ ಗೊಂಡಿತ್ತು… ಸುತ್ತಲೂ ಜನರಿದ್ರೂ… ನಡುವಲ್ಲಿ ಪಂಡಿತರು ಶಾಸ್ತ್ರಗಳನ್ನ ನೆರವೇರಿಸುತ್ತಿದ್ದರು.. ಅವರ ಎದುರಿಗೆ ಕೂತಿದ್ದ ವರ… ಚಂದ್ರನಂತಹ ಹೊಳೆಯುತ್ತಿದ್ದ ಮುಖದಲ್ಲಿ ಮುಖ್ಯ ಆಕರ್ಷಣೆ ನಕ್ಷತ್ರದಂತೆ ಹೊಳೆಯುತ್ತಿದ್ದ ದೊಡ್ಡ ದೊಡ್ಡ ಸಂದರ ಕಣ್ಗಳು… ಎಡಗಡೆಯ ಕಿವಿಯ ಮೇಲೆ ಇದ್ದ ಆಕರ್ಷಕ ಹುಟ್ಟು ಮಚ್ಚೆ.. ಇದೆಲ್ಲಕ್ಕಿಂತ ಆ ಸುಂದರನ ಅಂದ ಹೆಚ್ಚಿಸುತ್ತಿದ್ದದ್ದು ಅವನ ಹೊಳೆಯುವ ಆಕರ್ಷಕ ನಗು… ಆತ ಮದುವೆಗೆ ಎಷ್ಟು ಉತ್ಸುಕನಾಗಿದ್ದ… ಎಷ್ಟು ಖುಷಿಯಾಗಿದ್ದ.. ಇದೇ ಅವನ ಜೀವನದ ಬಹುದೊಡ್ಡ ಆಸೆ ಅನ್ನುವಂತಹ ಭಾವನೆ ಅವನ ಮೊಗದಲ್ಲಿ ಎದ್ದು ಕಾಣ್ತಿತ್ತು.. ಅವನ ಸ್ನೇಹಿತರು ಅವನನ್ನ ರೇಗಿಸುತ್ತಿದ್ದದ್ದೂ ಸಡಗರ ದುಪ್ಪಟ್ಟಾಗಿಸಿತ್ತು..
ಅದು ಬಿಡಿ ಮಧುಮಗನ ವಸ್ತ್ರದಲ್ಲಿ ಅವನ ಕಟ್ಟುಮಸ್ತಾದ ದೇಹದ ಭಾಗಗಳು , ನಿತ್ಯ ವ್ಯಾಯಾಮದ ಫಲವನ್ನ ತೋರಿಸುತ್ತಿತ್ತು.. ಗಟ್ಟಿ ಮುಟ್ಟಾದ ಬಲವಾದ ಭುಜಗಳು , ಸಿಕ್ಸ್ ಪ್ಯಾಕ್ ಅಲ್ಲಿದ್ದ ಯುವತಿಯರ ದೃಷ್ಠಿ ತನ್ನತ್ತ ಸೆಳೆಯಲು ಸಾಕಾಗಿತ್ತು..
ಹೊಳೆಯುವ ಚಂದ್ರನಂತಿದ್ದ ಅವನ ತುಟಿ ಪಕ್ಕದಲ್ಲಿ ಇಡಲಾಗಿದ್ದ ದೃಷ್ಟಿ ಬೊಟ್ಟು ಹಣೆಯ ಬಾಸಿಂಗ , ನೂರು ಪಟ್ಟು ಅವನ ಅಂದ ಹೆಚ್ಚಿಸಿತ್ತು… ಹೀಗಾಗಿ ಬೇಡ ಬೇಡ ಅಂದ್ರು ಜನ ಪದೇ ಪದೇ ಚೌಟರಿ ಹೊರಗೆ ಒಳಗೆ ಹಾಕಲಾಗಿದ್ದ ದೊಡ್ಡ ಸ್ಕ್ರೀನ್ ಗಳ ಮೇಲೆ ಅವನ ಮುಖ ನೋಡಬೇಕು ಅಂತ ಬಯಸುತ್ತಿದ್ದರು…
ಮತ್ತೊಂದು ಕಡೆ ಭರ್ಜರಿ ಭೋಜನದ ತಯಾರಿ ನಡೆಸುತ್ತಿದ್ದರು ಅಡುಗೆ ಭಟ್ಟರು.. ಚೌಟರಿ ಮತ್ತೊಂದು ಭಾಗದಲ್ಲಿ ಅಂದ್ರೆ ಹೊರಗೆ ವಿಷಾಲ ಮೈದಾನದಲ್ಲಿ ಚೇರ್‌ಗಳನ್ನ ಊಟಕ್ಕಾಗಿಯೇ ಅದ್ಧೂರಿಯಾಗಿ ಜೋಡಿಸಲಾಗಿತ್ತು.. ಬಫೇಟ್ ಜವಾಬ್ದಾರಿ ಹೊತ್ತಿದ್ದವರು ತಯಾರಿಯಲ್ಲಿ ಬ್ಯುಸಿಯಾಗಿದ್ರು.. ಚೌಟರಿ ಪೂರ ಕೆಂಪು ಬಿಳಿ ಬಣ್ಣದ ಅಲಂಕಾರದಿಂದಲೇ ಕಂಗೊಳಿಸುತ್ತಿತ್ತು…
ಈ ಮಂಟಪ ಬೆಂಗಳೂರಿನಲ್ಲೆ ಬಹುದೊಡ್ಡ ಐಷಾರಾಮಿ ಮಂಟಪವಾಗಿತ್ತು.. ಧಾಮ್ ಧೂಮ್ ಆಗಿ ಗಟ್ಟಿಮೇಳ ಮೊಳಗಿಸಲು ತಯಾರಿ ನಡೆದಿತ್ತು. ಪ್ರತಿ ಆಗುಹೋಗುಗಳನ್ನೂ ಕೂಡ ಫೋಟೋಗ್ರಫರ್ ಗಳು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾ ವಿಡಿಯೋವನ್ನ ಸ್ಕ್ರೀನ್ ಗಳ ಮೇಲೆ ಪ್ರಸಾರ ಮಾಡುವ ಕೆಲಸವನ್ನೂ ಮಾಡ್ತಾ ಇದ್ದರು..
ಈ ಆಡಂಬರ ನೋಡಿದ್ರೆನೆ ಹೇಳಬಹುದು ಅಲ್ಲಿ ನಡೆಯುತ್ತಿದ್ದ ಮದುವೆ ಸಾಮಾನ್ಯರದ್ದಂತೂ ಅಲ್ಲ… ಅದು ನಿಜಾನೆ.. ಯಾಕಂದ್ರೆ ಅದು ಸಾಮಾನ್ಯ ಜನರ ಮದುವೆಯಲ್ಲ.. ಇಬ್ಬರು ಪವರ್ ಫುಲ್ ವ್ಯಕ್ತಿಗಳ ಮಕ್ಕಳ ಮದುವೆ…
ಬೆಂಗಳೂರಿನ ಟಾಪ್ ಉದ್ಯಮಿಗಳು , ಬ್ಯುಸಿನೆಸ್ ಪಾರ್ಟನರ್ ಗಳು.. ಅಂತಿಂತ ಬ್ಯುಸಿನೆಸ್ ಅಲ್ಲ ವಿಶ್ವಾದ್ಯಂತ ನೂರಾರು ಬ್ರಾಂಚ್ ಗಳನ್ನ ಹೊಂದಿದ್ದ, ಭಾರತದ ಟಾಪ್ ಉದ್ಯಮಿಗಳಾಗಿ ಡಿಜಿಟಲ್ ಕ್ಷೇತ್ರ , ಸಾಫ್ಟ್ ವೇರ್ ಕ್ಷೇತ್ರದಲ್ಲಿ ತಮ್ನದೇ ಛಾಪು ಮೂಡಿಸಿ , ಹೆಸರು ಮಾಡಿರುವ , ಲಕ್ಷಾಂತರ ಜನರಿಗೆ ಕೆಲಸ ನೀಡಿ, ಸಾವಿರಾರರು ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡ್ತಾ ಜನ ಮನ್ನಣೆ ಪಡೆದಿದ್ದ ಆಚಾರ್ಯ ದಿಗಂತಾಸ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಬ್ಯುಸಿನೆಸ್ ಪಾರ್ಟ್ ನರ್ ಗಳ ಮಕ್ಕಳ ಮದುವೆ ಅದು..
ಬಿಲೇನಿಯರ್ ಗಳ ಮುದ್ದು ಮಕ್ಕಳ ಮದುವೆ ಅಂದ್ಮೇಲೆ ಸಂಭ್ರಮಕ್ಕೆ ಕೊರತೆ ಇರೋದಿಲ್ಲ..
ಅಜಂತ್ ದಿಗಂತಾಸ್ ಅವರ ಏಕೈಕ ಪುತ್ರ , ದಿಗಂತಾಸ್ ಕುಂಟುಂಬದ ವಾರಸುದಾರ ಮುದ್ದು ರಾಜಕುಮಾರ ರಾಯ್ ದಿಗಂತಾಸ್ ಮತ್ತು ವಾಲೀಶ್ ಆಚಾರ್ಯರ ಏಕೈಕ ಪುತ್ರಿ ದೀಪಾಲಿ ಆಚಾರ್ಯ ಕುಟುಂಬದ ಮುದ್ದು ರಾಜಕುಮಾರಿ , ತಂದೆಯ ಇಡೀ ಆಸ್ತಿಯ ಏಕೈಕ ಹಕ್ಕುದಾರಳು…
ರಾಯ್ 26 ವರ್ಷ… ರಾಯ್ ಕೂಡ ಪ್ರಭಾವಿ ಯುವ ಉದ್ಯಮಿ ಆಗಿ ಗುರುತಿಸಿಕೊಂಡಿದ್ದಾನೆ.. ಕೋಟ್ಯಾಂತರ ಹುಡುಗಿರ ಹಾರ್ಟ್ ಬೀಟ್ , ಕನಸಿನ ರಾಜ.. ಮೋಸ್ಟ್ ಡಿಸೈರೆಬಲ್ ಮ್ಯಾನ್.. ಜವಾಬ್ದಾರಿ ವಹಿಸಿಕೊಂಡ ಕೆಲವೇ ವರ್ಷಗಳಲ್ಲಿ ಅಪ್ಪನ ಕಂಪನಿಯನ್ನ ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ದ , ಇನ್ನಷ್ಟು ಅಭಿವೃದ್ಧಿ ಪಡಿಸಲು ಶ್ರಮ ಪಡುತ್ತಿರುವ ರಾಯ್ ಆಚಾರ್ಯ ದಿಗಂತಾಸ್ ಗ್ರೂಪ್ಸ್ ನ ವೈಸ್ ಪ್ರೆಸಿಡೆಂಟ್ ಕೂಡ..
ದೀಪಾಲಿ 24 ವರ್ಷ… ಅಪ್ಪನ ಬ್ಯುಸಿನೆಸ್ ನಲ್ಲಿ ಆಸಕ್ತಿ ಇಲ್ಲ.. ಆಸ್ತಿಯಲ್ಲೀ ಮೊದಲೇ ಆಸಕ್ತಿ ಇಲ್ಲ. ಆದ್ರೆ ಫ್ಯಾಷನ್ ಜಗತ್ತಿನಲ್ಲಿ ತನ್ನ ಛಾಪುಮೂಡಿಸಿದ್ದಾಳೆ.. ತನ್ನದೇ ಆದ ಫ್ಯಾಷನ್ ಡಿಸೈನಿಂಗ್ ಕಂಪನಿ ನಡೆಸುತ್ತಿದ್ದಾಳೆ.. ಎರೆಡೇ ವರ್ಷ ಕಂಪನಿ ಶುರು ಮಾಡಿ ಆಗಿದ್ರೂ ಯಶಸ್ಸಿನ ಹಾದಿಯಲ್ಲಿ ವೇಗವಾಗಿ ಸಾಗುತ್ತಿದ್ದಾಳೆ.. ದೊಡ್ಡ ದೊಡ್ಡ ಸೆಲೆಬ್ರಿಟಿಗಳು , ಸ್ಟಾರ್ ಗಳು ಬ್ಯುಸಿನೆಸ್ ಮೆನ್ ಗಳಿಗೂ ಡಿಸೈನರ್ ಆಗಿದ್ದಾಳೆ.. ಇದೆಲ್ಲಾ ತನ್ನ ಸ್ವಂತ ಟ್ಯಾಲೆಂಟ್ ನಿಂದ ಮಾಡುತ್ತಿರುವ ದೀಪಾಲಿ ಅನೇಕು ಹುಡುಗಿರಿಗೆ ಸ್ಪೂರ್ತಿ.. ಅಷ್ಟೇ ಅಲ್ಲ ಅನೇಕ ಯುವ ಮಾಡೆಲ್ ಗಳಿಗೂ ಟ್ರೈನಿಂಗ್ ಕೊಟ್ಟು ಅವರಿಗೆ ಪ್ಲಾಟ್ ಫಾರ್ಮ್ ಗಳನ್ನ ಒದಗಿಸಿ ಕೊಡುವ ಕೆಲಸವನ್ನ ದೀಪಾಲಿ ಮಾಡ್ತಾಯಿದ್ದಾಳೆ.
ಹೀಗಾಗಿ ಇಬ್ರೂ ಅಪ್ಪನ ಹೆಸರು ಬಿಟ್ಟು ತಮ್ಮ ತಮ್ಮ ಕ್ಷೇತ್ರದಲ್ಲಿ ತಮ್ನದೇ ಸಾಧನೆ ಮಾಡಿ ಸೆಲೆಬ್ರಿಟಿಗಳಾಗಿ ಗುರುತಿಸಿಕೊಂಡಿದ್ದಾರೆ.
ಇವರಿಬ್ಬರ ಮದುವೆ ಅಂದ್ಮೇಲೆ ಮೀಡಿಯಾದವರು ಹಾಜರಾಗದೇ ಇರೋಕೆ ಚಾನ್ಸೇ ಇಲ್ಲ.. ಮಾಧ್ಯಮದವರಿಗೇ ವಿಶೇಷ ಸೌಲಭ್ಯಗಳನ್ನೂ ಏರ್ಪಾಡು ಮಾಡಲಾಗಿತ್ತು.. ಮಾಧ್ಯಮದವರು ಮದುವೆಯ ಬಗ್ಗೆ ಸುದ್ದಿ ಸಂಗ್ರಹಿಸುವುದ್ರಲ್ಲಿ ನಿರತರಾಗಿದ್ದರು..
ಇನ್ನೂ ದೀಪಾಲಿ ಹಾಗೂ ರಾಯ್ ತಂದೆ ಕೇವಲ ಬ್ಯುಸಿನೆಸ್ ಪಾರ್ಟ್ ನರ್ ಗಳು ಮಾತ್ರ ಅಲ್ಲ.. ಬಾಲ್ಯದಿಂದಲೇ ಕುಚುಕು ಗೆಳೆಯರು. ಜೀವಕ್ಕೆ ಜೀವ ಕೊಡೋ ದೋಸ್ತ್ ಗಳು.. ಇವರಿಂದ ಇವರ ಪತ್ನಿಯರು ಕೂಡ ಅತ್ಯಾಪ್ತ ಗೆಳತಿಯರು.. ಅವರ ಮಕ್ಕಳ ಮದುವೆಯಿಂದ ಸಂಬಂಧಿಕರಾಗೋ ಖುಷಿಗಿಂತ ಅವರಿಗೆ ಇನ್ನೇನ್ ಬೇಕು…
ವರನ ಕಣ್ಣಲ್ಲಿ ಜಗತ್ತು ಗೆದ್ದ ಖುಷಿ… ವಧುವಿನ ಕಣ್ಣಲ್ಲಿ ಜೀವನವೇ ಮುಗಿದು ಹೋದ ದುಃಖ ಕಾರಣ…..?
ಲೇಖಕರ ಮಾತು..!!
ಹಾಯ್ ಎಲ್ಲರಿಗೂ ಇದು ನನ್ನ ಮೂರನೇ ಕಥೆ ಆಯ್ತಾ… ಹೇಗಿದೆ ಕಥೆ…
ಹೇಗನ್ನಿಸಿತು ಮೊದಲನೇ ಅಧ್ಯಾಯ ಕಾಮೆಂಟ್ ಮಾಡಿ ತಿಳಿಸಬಹುದು… ( ಸಾಧ್ಯವಾದಲ್ಲಿ ಈ ಲೇಖನದ ಲೇಖಕಿಯಾದ ನಾನು ನಿಹಾರಿಕಾ ಅಲ್ಲಿ ನಿಮ್ಮ ಕಾಮೆಂಟ್ ಗೆ ಪ್ರತಿಕ್ರಿಯಿಸುವ ಪ್ರಯತ್ನ ಮಾಡುವೆ… )
– ನಿಹಾರಿಕಾ ರಾವ್ –
( ಇದನ್ನ ಈ ಹಿಂದೆ ಎಲ್ಲಾದ್ರೂ ಓದಿದ್ದೀರಾ ಎಂದಾದರೆ ಅದು ನನ್ನದೇ ರಚನೆಯಾಗಿರುತ್ತೆ – ಪ್ರತಿಲಿಪಿಯಲ್ಲಿ ನಾನು ‘Niharika Rao Nammu’ ಅಲ್ಲಿಯೇ ನನ್ನ ಈ ಬರಹವನ್ನ ನೀವು ಓದಿರುತ್ತೀರಿ ಎಂದರ್ಥ.. ಹಾಗೆಯೇ ಇನ್ನಷ್ಟು ನನ್ನ ಧಾರಾವಾಹಿಗಳು ಬೇಕೆನಿಸಿದರೆ ಕಾಮೆಂಟ್ ಮಾಡಿ ನಾನು ಇಲ್ಲಿ ಇನ್ನು ಒಂದಷ್ಟು ಕಥೆಗಳನ್ನ ಹಾಕುತ್ತಾ ಹೋಗುವೆ.. ಹಾಗೆಯೇ ನೀವು ಪ್ರತಿಲಿಪಿಯಲ್ಲಿದ್ದರೆ ಅಲ್ಲಿ ಬೇಕಿದ್ದರೂ ನನ್ನ ಕಥೆಗಳನ್ನ ಓದಬಹುದು,, )
ಈ ರೀತಿಯಾದ ಇಂಟರೆಸ್ಟಿಂಗ್ ಕಂಟೆಂಟ್ ಗಾಗಿ ನಮ್ಮ Saakshatv.com ಫಾಲೋ ಮಾಡಿ…
ಈ ಧಾರಾವಾಹಿಯನ್ನೂ ಓದಬಹುದು…!! ( 1 -15 ಅಧ್ಯಾಯಗಳ ಎಲ್ಲಾ ಲಿಂಕ್ ಗಳೂ ಕೆಳಗಿವೆ)
Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)
Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 3 ( ಅದ್ಭುತ ಫ್ಯಾಂಟಸಿ ಜಗತ್ತು)
ಅಧ್ಯಾಯ – 5
ಅಧ್ಯಾಯ – 6
ಅಧ್ಯಾಯ – 7
ಅಧ್ಯಾಯ – 8
Saakshatv Special Series : ನಿಗೂಢ ಟಿವಿ ಜಗತ್ತು – ಅಧ್ಯಾಯ 15 ( ಕೊನೆಯ ಅಧ್ಯಾಯ )








