ಬೆಂಡೆಕಾಯಿ ಮಸಾಲಾ ಕರಿ ರೆಸಿಪಿ
ಪದಾರ್ಥಗಳು:
ಬೆಂಡೆಕಾಯಿಯನ್ನು ಹುರಿಯಲು:
10 ಬೆಂಡೆಕಾಯಿ (ಚೌಕವಾಗಿ ಕತ್ತರಿಸಿದ)
¼ ಟೀಸ್ಪೂನ್ ಅರಿಶಿನ
½ ಟೀಸ್ಪೂನ್ ಮೆಣಸಿನ ಪುಡಿ
½ ಟೀಸ್ಪೂನ್ ಗರಂ ಮಸಾಲಾ
2 ಟೀಬಲ್ಸ್ಪೂನ್ ಎಣ್ಣೆ
ಕರಿಗಾಗಿ:
2 ಟೇಬಲ್ಸ್ಪೂನ್ ಎಣ್ಣೆ
1 ಟೀಸ್ಪೂನ್ ಕಸೂರಿ ಮೇಥಿ
1 ಟೀಸ್ಪೂನ್ ಜೀರಿಗೆ
1 ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ)
8 ಎಸಳು ಬೆಳ್ಳುಳ್ಳಿ
1 ಟೀಸ್ಪೂನ್ ಶುಂಠಿ ಪೇಸ್ಟ್
½ ಟೀಸ್ಪೂನ್ ಅರಿಶಿನ
1 ಟೀಸ್ಪೂನ್ ಮೆಣಸಿನ ಪುಡಿ
1 ಟೀಸ್ಪೂನ್ ಕೊತ್ತಂಬರಿ ಪುಡಿ
½ ಟೀಸ್ಪೂನ್ ಜೀರಿಗೆ ಪುಡಿ
1½ ಕಪ್ ಟೊಮೆಟೊ ಪ್ಯೂರಿ
¼ ಕಪ್ ಮೊಸರು (ಅಥವಾ ಅಡುಗೆ ಕೆನೆ/ಹಾಲು)
1 ಕಪ್ ನೀರು
1 ಟೀಸ್ಪೂನ್ ಉಪ್ಪು
½ ಈರುಳ್ಳಿ (ದಳಗಳು)
1 ಟೊಮೆಟೊ (ಕಾಲು ಭಾಗ)
¼ ಟೀಸ್ಪೂನ್ ಗರಂ ಮಸಾಲಾ
ಕೊತ್ತಂಬರಿ ಸೊಪ್ಪು (2 ಟೇಬಲ್ಸ್ಪೂನ್, ಚಿಕ್ಕದಾಗಿ ಕತ್ತರಿಸಿದ)
ವಿಧಾನ:
ಹಂತ-1: ಬೆಂಡೆಕಾಯಿಯನ್ನು ತಯಾರಿಸುವುದು
ಮೊದಲಿಗೆ, ಬೆಂಡೆಕಾಯಿಗಳನ್ನು ಸ್ವಚ್ಛವಾಗಿ ತೊಳೆಯಿರಿ ಮತ್ತು ಒಣಗಿಸಿ.
ಅವುಗಳನ್ನು ಚೌಕವಾಗಿ ಅಥವಾ ಮಧ್ಯದಲ್ಲಿ ಸೀಳುವಂತೆ ಕತ್ತರಿಸಿ.
ಒಂದು ಬಟ್ಟಲಿನಲ್ಲಿ, ಬೆಂಡೆಕಾಯಿಗೆ ಅರಿಶಿನ, ಮೆಣಸು ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಲೇಪಿಸಿ.
ಹಂತ-2: ಬೆಂಡೆಕಾಯಿಯನ್ನು ಹುರಿಯುವುದು
ಒಂದು ದೊಡ್ಡ ಕಡಾಯಿಯಲ್ಲಿ ಎರಡು ಚಮಚ ಎಣ್ಣೆಯನ್ನು ಬಿಸಿ ಮಾಡಿ.
ಲೇಪಿಸಿದ ಬೆಂಡೆಕಾಯಿಗಳನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
ಬೆಂಡೆಕಾಯಿ ಬಣ್ಣವನ್ನು ಬದಲಾಯಿಸುವವರೆಗೆ ಮತ್ತು ಬಹುತೇಕ ಬೇಯುವವರೆಗೆ ಹುರಿಯಿರಿ. ನಂತರ ಅದನ್ನು ಬೇರೆ ಪಾತ್ರೆಗೆ ತೆಗೆದು ಇಡಿರಿ.
ಹಂತ-3: ಗ್ರೇವಿ ತಯಾರಿಸುವುದು
ಅದೇ ಕಡಾಯಿಯಲ್ಲಿ ಮತ್ತಷ್ಟು ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
ಜೀರಿಗೆ ಮತ್ತು ಕಸೂರಿ ಮೇಥಿಯನ್ನು ಸೇರಿಸಿ, ಸುಗಂಧ ಹೊರಹೊಮ್ಮುವವರೆಗೆ ಹುರಿಯಿರಿ.
ಈಗ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಸೇರಿಸಿ. ಈರುಳ್ಳಿ ಗೋಲ್ಡನ್ ಬ್ರೌನಾಗುವವರೆಗೆ ಹುರಿಯಿರಿ.
ನಂತರ ಅರಿಶಿನ, ಮೆಣಸು ಪುಡಿ, ಕೊತ್ತಂಬರಿ ಪುಡಿ, ಮತ್ತು ಜೀರಿಗೆ ಪುಡಿಯನ್ನು ಸೇರಿಸಿ. ಮಿಕ್ಸ್ ಮಾಡಿ.
ಇದಕ್ಕೆ ಈಗ ಟೊಮೆಟೊ ಪ್ಯೂರಿ ಸೇರಿಸಿ. ಎಣ್ಣೆಯು ಪ್ಯೂರಿಯಿಂದ ಬೇರ್ಪಡುವವರೆಗೆ ಚೆನ್ನಾಗಿ ಹುರಿಯಿರಿ.
ಹಂತ-4: ಮೊಸರು ಅಥವಾ ಕೆನೆ ಸೇರಿಸುವುದು
ಮೊಸರು ಅಥವಾ ಅಡುಗೆ ಕೆನೆ/ಹಾಲನ್ನು ಸೇರಿಸಿ. ಮತ್ತೆ ಎಣ್ಣೆಯು ಬೇರ್ಪಡುವವರೆಗೆ ಬೇಯಿಸಬೇಕು.
ಹಂತ-5: ನೀರು ಮತ್ತು ಉಪ್ಪು ಸೇರಿಸುವುದು
ಒಂದು ಕಪ್ ನೀರನ್ನು ಕರಿಗೆ ಹಾಕಿ. ಉಪ್ಪನ್ನು ರುಚಿಗೆ ತಕ್ಕಂತೆ ಸೇರಿಸಿ. ಕರಿಯ ಸ್ಥಿರತೆಯನ್ನು ಸರಿಹೊಂದಿಸಲು ಚೆನ್ನಾಗಿ ಕಲಸಿ.
ಹಂತ-6: ಫೈನಲ್ ಸ್ಟೇಜ್
ಈಗ ಹುರಿದ ಬೆಂಡೆಕಾಯಿಗಳನ್ನು ಗ್ರೇವಿಗೆ ಸೇರಿಸಿ.
ಜೊತೆಗೆ ಈರುಳ್ಳಿ ಹಾಗೂ ಟೊಮಟೋಗಳನ್ನು ಹಾಕಿ ಮುಚ್ಚಿದ ಸ್ಥಿತಿಯಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಬೇಯಿಸಬೇಕು
ಹಂತ-7: ಗಾರ್ನಿಷ್ ಮಾಡುವುದು
ಕೊನೆಗೆ ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಮಿಕ್ಸ್ ಮಾಡಿ.
ಸೆರ್ವಿಂಗ್ ಸಲಹೆಗಳು:
ಈ ರುಚಿಕರವಾದ ಬೆಂಡೆಕಾಯಿ ಮಸಾಲಾ ಕರಿಯನ್ನು ರೋಟಿ, ನಾನ್ ಅಥವಾ ಅನ್ನದೊಂದಿಗೆ ಬಡಿಸಬಹುದು.








