ಬೆಂಗಳೂರು: ಡಿಸೆಂಬರ್ ರಜೆ ಹಾಗೂ ವರ್ಷಾಂತ್ಯದ ಪ್ರವಾಸಕ್ಕೆ ತೆರಳುವವರಿಗೆ ಟಿಕೆಟ್ ಮತ್ತು ಹೋಟೆಲ್ ದರ ಏರಿಕೆಯ ಆತಂಕ ತಪ್ಪಿಸಲು ಮೇಕ್ಮೈಟ್ರಿಪ್ ಸಂಸ್ಥೆಯು ‘ಟ್ರಾವೆಲ್ ಕಾ ಮುಹೂರ್ತ್ ಸೇಲ್’ನ ಎರಡನೇ ಆವೃತ್ತಿಯನ್ನು ಘೋಷಿಸಿದೆ. ನವೆಂಬರ್ 14ರಿಂದ ಈ ಬೃಹತ್ ಟ್ರಾವೆಲ್ ಸೇಲ್ ಆರಂಭವಾಗಲಿದ್ದು, ದೇಶದ 30,000ಕ್ಕೂ ಹೆಚ್ಚು ಹಾಗೂ ವಿದೇಶದ 3,500ಕ್ಕೂ ಅಧಿಕ ಹೋಟೆಲ್, ರೆಸಾರ್ಟ್, ಹೋಮ್ಸ್ಟೇ ಮತ್ತು ವಿಲ್ಲಾಗಳು ಇದರಲ್ಲಿ ಭಾಗಿಯಾಗಿವೆ.
ಜೊತೆಗೆ 35 ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಮತ್ತು 8 ಪ್ರಮುಖ ಬ್ಯಾಂಕ್ಗಳು ಕೈಜೋಡಿಸಿರುವುದರಿಂದ ಪ್ರಯಾಣಿಕರಿಗೆ ಭರ್ಜರಿ ರಿಯಾಯಿತಿ ಸಿಗಲಿದೆ.
ಈ ಸೇಲ್ ಮೂಲಕ ಪ್ರಯಾಣಿಕರು ಒಂದೇ ವೇದಿಕೆಯಲ್ಲಿ ವಿಮಾನ, ಬಸ್, ರೈಲು, ಕ್ಯಾಬ್, ಹೋಟೆಲ್, ಹೋಮ್ಸ್ಟೇ, ಹಾಲಿಡೇ ಪ್ಯಾಕೇಜ್ಗಳು ಮಾತ್ರವಲ್ಲದೆ ಫಾರೆಕ್ಸ್ (ವಿದೇಶಿ ವಿನಿಮಯ) ಮತ್ತು ವೀಸಾ ಸೇವೆಗಳ ಮೇಲೂ ಆಕರ್ಷಕ ಡೀಲ್ಗಳನ್ನು ಪಡೆಯಬಹುದು.
ದೇಶೀಯ ಪ್ರವಾಸಿ ತಾಣಗಳಾದ ಕರ್ನಾಟಕದ ಕೊಡಗು, ಗೋವಾ, ಕೇರಳ, ರಾಜಸ್ಥಾನ, ಅಂಡಮಾನ್, ಲಕ್ಷದ್ವೀಪ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಂದ ಹಿಡಿದು ವಿದೇಶದ ದುಬೈ, ಸಿಂಗಾಪುರ, ಥಾಯ್ಲೆಂಡ್, ವಿಯೆಟ್ನಾಂ, ಜಪಾನ್, ಮಲೇಷ್ಯಾ, ಶ್ರೀಲಂಕಾ, ಯುಕೆ ಹಾಗೂ ಯುರೋಪ್ ಪ್ರವಾಸಕ್ಕೂ ವಿಶೇಷ ಕೊಡುಗೆಗಳಿವೆ.
ಅಲ್ಲದೆ, ಯುಎಇಯ ಫೆರಾರಿ ವರ್ಲ್ಡ್, ಸಿಂಗಾಪುರದ ಯೂನಿವರ್ಸಲ್ ಸ್ಟುಡಿಯೋಸ್, ಮ್ಯಾಡಮ್ ಟುಸ್ಸಾಡ್ಸ್, ನೈಟ್ ಸಫಾರಿ ಮತ್ತು ಸಿಂಗಾಪುರ ಝೂ ಹಾಗೂ ವಿಯೆಟ್ನಾಂನ ಸನ್ ವರ್ಲ್ಡ್ ಬಾ ನಾ ಹಿಲ್ಸ್ನಂತಹ ವಿಶ್ವಪ್ರಸಿದ್ಧ ತಾಣಗಳ ಟಿಕೆಟ್ ಮೇಲೂ ರಿಯಾಯಿತಿ ಲಭ್ಯವಿದೆ.
ಮೇಕ್ಮೈಟ್ರಿಪ್ನ ಲಾಯಲ್ಟಿ ಸದಸ್ಯರಾದ ‘ಎಂಎಂಟಿ ಬ್ಲ್ಯಾಕ್’ ಬಳಕೆದಾರರಿಗೆ ಒಂದು ದಿನ ಮುಂಚಿತವಾಗಿ ಅಂದರೆ ನವೆಂಬರ್ 13ರಿಂದಲೇ ಸೇಲ್ಗೆ ಅವಕಾಶ ಸಿಗಲಿದ್ದು, ಪ್ರತಿ ಶುಕ್ರವಾರ ವಿಶೇಷ ‘ಬ್ಲ್ಯಾಕ್ ಫ್ರೈಡೇ ಡೀಲ್ಸ್’ ಕೂಡ ಇರಲಿದೆ.
ಇನ್ನು ಎಲ್ಲಾ ಗ್ರಾಹಕರಿಗಾಗಿ ಪ್ರತಿದಿನ ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ಸೀಮಿತ ಅವಧಿಯ ‘ಲೈಟ್ನಿಂಗ್ ಡ್ರಾಪ್ಸ್’ ಆಫರ್ಗಳು ಹಾಗೂ ‘ಒನ್ಸರ್ಕಲ್’ ರಿವಾರ್ಡ್ಸ್ ಸದಸ್ಯರಿಗೆ ಹೆಚ್ಚುವರಿ ಲಾಭ ಸಿಗಲಿದೆ.
ಈ ಅಭಿಯಾನಕ್ಕಾಗಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ‘ಅಬ್ ತೋ ಜಾನಾ ಪಡೇಗಾ’ ಎಂಬ ಆರು ಜಾಹೀರಾತುಗಳನ್ನೂ ‘ಟ್ಯಾಲೆಂಟೆಡ್’ ಸಂಸ್ಥೆ ರೂಪಿಸಿದೆ.
ಹಬ್ಬದ ಶಾಪಿಂಗ್ ಸೇಲ್ಗಳಂತೆಯೇ ಪ್ರವಾಸಕ್ಕೂ ಒಂದು ನಿಗದಿತ ಯೋಜನಾ ಸಮಯ ಇರಬೇಕು ಹಾಗೂ ಗ್ರಾಹಕರು ಡಿಸೆಂಬರ್ ದರ ಏರಿಕೆಯ ಭಯವಿಲ್ಲದೆ ಮುಂಚಿತವಾಗಿಯೇ ಆತ್ಮವಿಶ್ವಾಸದಿಂದ ಬುಕಿಂಗ್ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ಮೇಕ್ಮೈಟ್ರಿಪ್ ಸಿಒಒ ರಾಜ್ ರಿಷಿ ಸಿಂಗ್ ತಿಳಿಸಿದ್ದಾರೆ.
ಈ ಸೇಲ್ನಲ್ಲಿ ಏರ್ ಇಂಡಿಯಾ, ಇಂಡಿಗೋ, ಆಕಾಶ ಏರ್, ಏರ್ ಇಂಡಿಯಾ ಎಕ್ಸ್ಪ್ರೆಸ್, ಎತಿಹಾದ್, ಕತಾರ್ ಏರ್ವೇಸ್, ಸಿಂಗಾಪುರ ಏರ್ಲೈನ್ಸ್, ಬ್ರಿಟಿಷ್ ಏರ್ವೇಸ್, ಲುಫ್ತಾನ್ಸಾ, ಏರ್ ಫ್ರಾನ್ಸ್, ಸ್ವಿಸ್, ಟರ್ಕಿಶ್ ಏರ್ಲೈನ್ಸ್ ಹಾಗೂ ವರ್ಜಿನ್ ಅಟ್ಲಾಂಟಿಕ್ನಂತಹ 35 ಏರ್ಲೈನ್ಸ್ಗಳು ಪಾಲ್ಗೊಂಡಿವೆ.
ಹಾಗೆಯೇ ತಾಜ್, ದಿ ಲೀಲಾ, ಐಟಿಸಿ, ಕ್ಲಬ್ ಮಹೀಂದ್ರಾ, ಲೆಮನ್ ಟ್ರೀ, ಜಿಂಜರ್, ರಾಯಲ್ ಆರ್ಕಿಡ್, ಸರೋವರ್, ಸ್ಟರ್ಲಿಂಗ್, ವಿಂಡ್ಹ್ಯಾಮ್ ಹೋಟೆಲ್ಸ್ ಜೊತೆಗೆ ಸ್ಟೇವಿಸ್ಟಾ, ಜೋಸ್ಟೆಲ್, ಸ್ಯಾಫ್ರನ್ಸ್ಟೇಸ್, ಲೋಹೊನೋ ಸ್ಟೇಸ್, ಅಮಾ ಸ್ಟೇಸ್ ಅಂಡ್ ಟ್ರೇಲ್ಸ್ ಮತ್ತು ಗೋಸ್ಟಾಪ್ಸ್ನಂತಹ ಜನಪ್ರಿಯ ಹೋಮ್ಸ್ಟೇ ಬ್ರ್ಯಾಂಡ್ಗಳೂ ಭಾಗಿಯಾಗಿವೆ.
ಬ್ಯಾಂಕಿಂಗ್ ಕೊಡುಗೆಗಳಿಗಾಗಿ ಎಚ್ಡಿಎಫ್ಸಿ, ಐಸಿಐಸಿಐ, ಆಕ್ಸಿಸ್, ಕೊಟಕ್ ಮಹೀಂದ್ರಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೆಸ್ ಬ್ಯಾಂಕ್, ಡಿಬಿಎಸ್ ಮತ್ತು ಆರ್ಬಿಎಲ್ ಬ್ಯಾಂಕ್ಗಳು ಕೈಜೋಡಿಸಿವೆ.








