ದೊಣ್ಣೆ ಮೆಣಸಿನ ವಾಂಗಿಬಾತ್ Saakshatv cooking recipes Capsicum vangibhath
ಬೇಕಾಗುವ ಸಾಮಗ್ರಿಗಳು
ಹೆಚ್ಚಿದ ದೊಣ್ಣೆ ಮೆಣಸು 2
ಸಣ್ಣಗೆ ಹೆಚ್ಚಿದ ಈರುಳ್ಳಿ 2
ಕರಿಬೇವಿನ ಸೊಪ್ಪು – ಸ್ವಲ್ಪ
ಹುಣಸೆ ರಸ 1/4 ಕಪ್
ಬೇಯಿಸಿದ ಬಟಾಣಿ – 1/2 ಕಪ್
ಗೋಡಂಬಿ – ಸ್ವಲ್ಪ
ಕಡಲೆ ಕಾಯಿ ಬೀಜ – ಸ್ವಲ್ಪ
ಕಡಲೆ ಬೇಳೆ – 1 ಚಮಚ
ಉದ್ದಿನ ಬೇಳೆ – 1 ಚಮಚ
ವಾಂಗೀಬಾತ್ ಪುಡಿ – 2 ಚಮಚ
ಮೆಣಸಿನ ಪುಡಿ – ಅಗತ್ಯ
ಬೆಲ್ಲ – 1 ತುಂಡು
ಎಣ್ಣೆ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಇಂಗು – 1/4 ಚಮಚ
ನೀರು
Saakshatv cooking recipes Capsicum vangibhath

ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ. ಸಾಸಿವೆ ಸಿಡಿದ ಬಳಿಕ ಇಂಗು, ಅರಿಶಿನ ಪುಡಿ, ಕಡಲೆ ಕಾಯಿ ಬೀಜ ಹಾಕಿ ಸ್ವಲ್ಪ ಹುರಿಯಿರಿ. ಈಗ ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಗೋಡಂಬಿ ಹಾಕಿ ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ.

ನಂತರ ಈರುಳ್ಳಿ, ದೊಣ್ಣೆ ಮೆಣಸು, ಕರಿಬೇವು ಸೇರಿಸಿ ಚೆನ್ನಾಗಿ ಬಾಡಿಸಿ. ಅದಕ್ಕೆ ಬೇಯಿಸಿದ ಬಟಾಣಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈಗ ವಾಂಗೀಬಾತ್ ಪುಡಿ, ಮೆಣಸಿನ ಪುಡಿ, ಉಪ್ಪು, ಬೆಲ್ಲ, ಹುಣಸೆ ರಸ ಸೇರಿಸಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ. 10 ನಿಮಿಷ ಕೈಯಾಡಿಸಿ ಕುದಿಸಿ. ಕತ್ತರಿಸಿದ ಕೊತಂಬರಿ ಸೊಪ್ಪು ಸೇರಿಸಿ. ಈಗ ಆರಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ರುಚಿಕರವಾದ ದೊಣ್ಣೆ ಮೆಣಸಿನ ವಾಂಗಿಬಾತ್ ಸವಿಯಲು ಸಿದ್ಧ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ..
ಮಧುಮೇಹಿಗಳಿಗೆ ನೆಲ್ಲಿಕಾಯಿಯ ಪ್ರಯೋಜನಗಳು ಮತ್ತು ನೆಲ್ಲಿಕಾಯಿಯ ಜ್ಯೂಸ್ ರೆಸಿಪಿ https://t.co/MpKKk99eHY
— Saaksha TV (@SaakshaTv) March 14, 2021
ಸಾಲವನ್ನು ತಕ್ಷಣ ಹಿಂದಿರುಗಿಸುವಂತೆ ಪಾಕಿಸ್ತಾನಕ್ಕೆ ಯುಎಇ ಒತ್ತಾಯ https://t.co/37bKBSwUeV
— Saaksha TV (@SaakshaTv) March 14, 2021
ರುಚಿಯಾದ ಆರೋಗ್ಯಕರವಾದ ಮೊಸರನ್ನ https://t.co/hgpbqe9p9D
— Saaksha TV (@SaakshaTv) March 14, 2021








