ಮದ್ದೂರು ವಡೆ
ಬೇಕಾಗುವ ಸಾಮಗ್ರಿಗಳು
ಅಕ್ಕಿಹಿಟ್ಟು – 1 ಕಪ್
ಗೋಧಿಹಿಟ್ಟು – 1 ಕಪ್
ಮೈದಾಹಿಟ್ಟು – 2 ಟೇಬಲ್ ಸ್ಪೂನ್
ಸಣ್ಣರವೆ – 1/2 ಕಪ್
ಸಣ್ಣದಾಗಿ ಹೆಚ್ಚಿರುವ ಈರುಳ್ಳಿ – 1 ಕಪ್
ಹಸಿಮೆಣಸಿನಕಾಯಿ – 2
ಕರಿಬೇವಿನ ಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಬಿಸಿ ಎಣ್ಣೆ – 4 ಚಮಚ
ಅಗತ್ಯವಿರುವಷ್ಟು ನೀರು
ಹುರಿಯಲು ಎಣ್ಣೆ

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಅಕ್ಕಿಹಿಟ್ಟು, ಗೋಧಿಹಿಟ್ಟು, ಮೈದಾಹಿಟ್ಟು, ಸಣ್ಣರವೆಯನ್ನು ಮಿಶ್ರ ಮಾಡಿ. ಅದಕ್ಕೆ ಚಿಕ್ಕದಾಗಿ ಹೆಚ್ಚಿರುವ ಈರುಳ್ಳಿ, ಹಸಿಮೆಣಸಿನಕಾಯಿ, ಕತ್ತರಿಸಿದ ಕರಿಬೇವಿನ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಅದಕ್ಕೆ ನಾಲ್ಕು ಚಮಚ ಬಿಸಿ ಮಾಡಿದ ಎಣ್ಣೆ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ಬಳಿಕ ಪ್ಲಾಸ್ಟಿಕ್ ಗೆ ಎಣ್ಣೆ ಸವರಿ, ವಡೆ ತಟ್ಟಿ. ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ವಡೆಯನ್ನು ಎರಡೂ ಬದಿ ಚೆನ್ನಾಗಿ ಕಾಯಿಸಿ.
ಈಗ ಸವಿಯಲು ಬಿಸಿ ಬಿಸಿ ಮದ್ದೂರು ವಡೆ ಸಿದ್ಧವಾಗಿದೆ.

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1395946259505205250?s=19
https://twitter.com/SaakshaTv/status/1397349965853347847?s=19
https://twitter.com/SaakshaTv/status/1397044841792655363?s=19
https://twitter.com/SaakshaTv/status/1397017733850611712?s=19
#Saakshatv #cookingrecipe #madduruvade








