ಸ್ನೇಹಿತರ ಜೊತೆ ಸೇರಿ ಪ್ರೇಯಸಿ ಮೇಲೆ ಸಾಮೂಹಿಕ ಅತ್ಯಾಚಾರ..!
ಉತ್ತರ ಪ್ರದೇಶ: ಪ್ರಿಯಕರನೊಬ್ಬ ಸ್ನೇಹಿತರ ಜೊತೆ ಸೇರಿ ತನ್ನ ಗರ್ಲ್ ಫ್ರೆಂಡ್ ಮೇಲೆಯೇ ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಹೇಯ ಘಟನೆ ಉತ್ತರಪ್ರದೇಶದ ಮಹಾರಾಜ್ ಎಂಬಲ್ಲಿ ನಡೆದಿದೆ.. ರಾತ್ರಿ ವೇಳೆ ಗ್ರಾಮದ ಹೊರಗೆ ಬಂದು ತನ್ನನ್ನು ಭೇಟಿ ಮಾಡುವಂತೆ ಯುವತಿಗೆ ಕಾಲ್ ಮಾಡಿ ಕರೆಸಿಕೊಂಡಿರುವ ಆಕೆಯ ಪ್ರೇಮಿ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಯುವತಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಬಳಿಕ ಅರೆಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದ ಯುವತಿಯನ್ನ ಗ್ರಾಮಸ್ಥರ ಜೊತೆಗೆ ಸೇರಿ ಆಕೆಯ ಕುಟುಂಬಸ್ಥರು ಪತ್ತೆ ಹಚ್ಚಿದ್ದಾಳೆ.. ಬಳಿಕ ಆಕೆ ಘಟನೆ ಬಗ್ಗೆ ವಿವರಿಸುತ್ತಿದ್ದಂತೆ ಪೊಲೀಸ್ಟಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ..
ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಆರೋಪಿಗಳ ಬಂಧನಕ್ಕಾಗಿ ಎರಡು ತಂಡ ರಚನೆ ಮಾಡಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಪ್ತಾ ಅವರು, ಸಂತ್ರಸ್ತೆಯ ಬಾಯ್ ಫ್ರೆಮಡ್ ಹಾಗೂ ಆತನ ಸ್ನೇಹಿತರು ಸೇರಿ ದುಷ್ಕೃತ್ಯವೆಸಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈಗಾಗಲೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಅವರ ಬಂಧನ ಮಾಡಲಾಗುವುದು ಎಂದಿದ್ದಾರೆ.
ಅಕ್ಕನಿಗೆ ಹೆರಿಗೆ – ಸಹೋದರಿ ನೋಡಲು ಹೋದ ತಂಗಿ ಮೇಲೆ ಭಾವನಿಂದ ಅತ್ಯಾಚಾರ..!
12 ವರ್ಷದ ವಿದ್ಯಾರ್ಥಿನಿಗೆ ಲವ್ ಲೆಟರ್ ಬರೆದ ಶಿಕ್ಷಕ , ತಿರಸ್ಕರಿಸಿದ್ರೆ ಆತ್ಮಹತ್ಯೆ ಬೆದರಿಕೆ.!
ಮ್ಯಾನ್ಮಾರ್ ಸಂಘರ್ಷ : ಮಿಜೋರಾಂಗೆ ನುಸುಳಿದ 10,025 ಮ್ಯಾನ್ಮಾರ್ ಪ್ರಜೆಗಳು, ಒಂದೇ ವಾರದಲ್ಲಿ 700 ಮಂದಿ ಆಗಮನ








