17 ವರ್ಷದಿಂದ ತನ್ನ ಮೆದುಳಿನೊಳಗೆ 5 ಇಂಚು ಉದ್ದದ ಹುಳದ ಜೊತೆ ವಾಸಿಸುತ್ತಿದ್ದ ಚೀನೀ ಮನುಷ್ಯ
ಬೀಜಿಂಗ್, ಅಗಸ್ಟ್30: 17 ವರ್ಷಗಳ ಕಾಲ ಚೀನಾದ ವ್ಯಕ್ತಿಯ ಮೆದುಳಿನಲ್ಲಿದ್ದ ಐದು ಇಂಚಿನ ಹುಳುವನ್ನು ಯಶಸ್ವಿಯಾಗಿ ತೆಗೆಯಲಾಗಿದೆ. 23 ವರ್ಷದ ಈತ ಆರು ವರ್ಷದವನಾಗಿದ್ದಾಗಿನಿಂದ ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ.
ದೇಹದ ಮೇಲಿನ ಅರ್ಧಭಾಗದಲ್ಲಿ ಸಂವೇದನೆಯನ್ನು ಕಳೆದುಕೊಂಡ ನಂತರ ಆತ ವೈದ್ಯಕೀಯ ನೆರವನ್ನು ಕೋರಿದ. ಕಪ್ಪೆ ಅಥವಾ ಹಾವುಗಳಂತಹ ಕಚ್ಚಾ ಅಥವಾ ಅರ್ಧ ಬೇಯಿಸಿದ ಮಾಂಸವನ್ನು ಸೇವಿಸಿದ್ದರಿಂದ ರೋಗಿಗೆ ಸೋಂಕು ಉಂಟಾಗಿರಬಹುದು ಎಂದು ವೈದ್ಯರು ಸೂಚಿಸಿದ್ದಾರೆ. ಪೂರ್ವ ಚೀನಾದ ಪ್ರಾಂತ್ಯದ ಜಿಯಾಂಗ್ಸುನ ವುಚಾಂಗ್ ವಿಶ್ವವಿದ್ಯಾಲಯದ ಮೊದಲ ಅಂಗಸಂಸ್ಥೆ ಆಸ್ಪತ್ರೆಯಲ್ಲಿ ಮಂಗಳವಾರ ಹುಳವನ್ನು ಅವನ ಮೆದುಳಿನಿಂದ ಸರ್ಜರಿ ಮೂಲಕ ತೆಗೆದುಹಾಕಲಾಗಿದೆ.
ಸಿಟಿ ಸ್ಕ್ಯಾನ್ ನಡೆಸಿದಾಗ, ವೈದ್ಯರು ರೋಗಿಯ ಮೆದುಳಿನೊಳಗೆ ಪರಾವಲಂಬಿ ಹುಳುವನ್ನು ಕಂಡರು. ಸುಮಾರು 17 ವರ್ಷಗಳ ಹಿಂದೆ ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಅನುಭವಿಸಲು ಪ್ರಾರಂಭಿಸಿದೆ ಎಂದು ವ್ಯಕ್ತಿ ವೈದ್ಯರಿಗೆ ತಿಳಿಸಿದರು. ಅವನಿಗೆ ಕೆಲವೊಮ್ಮೆ ತಲೆನೋವು ಮತ್ತು ವಾಕರಿಕೆ ಕೂಡ ಇತ್ತು. ಅವನ ಹೆತ್ತವರಿಗೆ ಅದೇ ಸಮಸ್ಯೆ ಇರುವುದರಿಂದ ಇದೊಂದು ಅನುವಂಶೀಯ ಸಮಸ್ಯೆ ಇರಬಹುದು ಎಂದು ಚೆನ್ ಭಾವಿಸಿದ್ದ.
2015 ರಲ್ಲಿ, ಚೀನಾದ ಈ ವ್ಯಕ್ತಿ ಅಂತಿಮವಾಗಿ ವೈದ್ಯಕೀಯ ಚಿಕಿತ್ಸೆ ಪಡೆದನು. ಅಷ್ಟೊತ್ತಿಗೆ ಅವನು ತನ್ನ ದೇಹದ ಮೇಲಿನ ಅರ್ಧಭಾಗದಲ್ಲಿ ಸಂವೇದನೆಯನ್ನು ಕಳೆದುಕೊಂಡಿದ್ದ. ನನ್ನ ದೇಹದ ಅರ್ಧದಷ್ಟು ಭಾಗವು ಸಂಪೂರ್ಣವಾಗಿ ನಿಶ್ಚೇಷ್ಟಿತವಾಯಿತು. ನನ್ನ ಕೈಯನ್ನು ಎತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ವೈದ್ಯರ ಬಳಿ ಈ ಸ್ಥಿತಿಯ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಿದೆ.
ಕಲುಷಿತ ಕುಡಿಯುವ ನೀರು ಅಥವಾ ಹಾವುಗಳು ಅಥವಾ ಕಪ್ಪೆಗಳಂತಹ ಕಾಡು ಪ್ರಾಣಿಗಳ ಮಾಂಸವನ್ನು ಸೇವಿಸುವುದರಿಂದ ಸೋಂಕು ಉಂಟಾಗುತ್ತದೆ ಎಂದು ಅವರು ಹೇಳಿದರು. ಎಂದು ಚೆನ್ ತಿಳಿಸಿದ್ದಾನೆ.
ಬಳಿಕ ಚೆನ್ ಅನ್ನು ವೈದ್ಯರ ನಿಗಾದಲ್ಲಿ ಇಡಲಾಯಿತು. ಚೆನ್‌ಗೆ 18 ವರ್ಷ ವಯಸ್ಸಾಗಿದ್ದಾಗ ಮೊದಲ ಸರ್ಜರಿ ನಡೆಸಲಾಯಿತು. ಪರಾವಲಂಬಿ ಹುಳು ಮೆದುಳಿನಲ್ಲಿ ಇದ್ದುದ್ದರಿಂದ ಸೂಕ್ಷ್ಮವಾಗಿ ಆಪರೇಷನ್ ಮಾಡಬೇಕಾಗಿದ್ದು, ಅನೇಕ ಪ್ರಕ್ರಿಯೆಗಳ ಬಳಿಕ ಆಗಸ್ಟ್ 25ರಂದು ಸರ್ಜರಿ ನಡೆಸಿ ಐದು ಇಂಚಿನ ಹುಳುವನ್ನು ಹೊರ ತೆಗೆದಿದ್ದಾರೆ. ಚೆನ್ ಸಹ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.
ಚೆನ್‌ಗೆ ಮೊದಲ ಬಾರಿಗೆ 18 ನೇ ವಯಸ್ಸಿನಲ್ಲಿ ರೋಗನಿರ್ಣಯ ಮಾಡಿದಾಗ, ಪರಾವಲಂಬಿ ಹುಳವು ಮೆದುಳಿನಲ್ಲಿ ಇದ್ದುದ್ದರಿಂದ ಸೂಕ್ಷ್ಮವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗಿದೆ ಎಂದು ವೈದ್ಯರು ಹೇಳಿದರು. ಅನೇಕ ಪ್ರಕ್ರಿಯೆಗಳ ಬಳಿಕ ಆಗಸ್ಟ್ 25ರಂದು ಸರ್ಜರಿ ನಡೆಸಿ ಐದು ಇಂಚಿನ ಹುಳುವನ್ನು ಹೊರ ತೆಗೆದಿದ್ದು, ಶಸ್ತ್ರಚಿಕಿತ್ಸೆಯ ನಂತರ, ಆತ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ.