ಬೆಂಗಳೂರು: ಯುವತಿಯೊಬ್ಬರು ಕ್ರಿಕೆಟಿಗ ಕೆ.ಸಿ ಕಾರಿಯಪ್ಪ (KC Cariappa) ವಿರುದ್ಧ ಮೋಸ ಮಾಡಿದ ಆರೋಪ ದಾಖಲಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂದು ಯುವತಿ (Young Woman) ನೀಡಿದ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ನಾವಿಬ್ಬರೂ ಇನ್‍ಸ್ಟಾದಲ್ಲಿ (Instagram) ಪರಿಚಯವಾಗಿದ್ದು, ಒಂದೇ ಕಮ್ಯೂನಿಟಿ ಹಾಗೂ ಒಂದೇ ಊರಿನವರು. ಮೊದ ಮೊದಲು ನಾನು ಲವರ್ ಇರುವ ಕುರಿತು ತಿಳಿಸಿದ್ದೆ. ಹೀಗಾಗಿ ಫ್ರೆಂಡ್ ಆಗಿ ಇರುವ ಕುರಿತು ಮಾತನಾಡಿದೇವು. ನನಗೆ ಮೊದಲ ಲವ್ವರ್ ಗಿಂತ ನಿವೇ ಇಷ್ಟ ಅಂತ ನಂಬಿಸಿ ನನ್ನನ್ನು ದೈಹಿಕವಾಗಿ ಬಳಸಿಕೊಂಡರು. ಹೀಗಾಗಿ ನಾನು ಪ್ರಗ್ನೆಂಟ್ ಆಗಿದ್ದೆ. ಅಬಾರ್ಷನ್ ಮಾಡಿಸಿಕೊಳ್ಳುವಂತೆ ಹೇಳಿದ್ದ. ಆದರೆ ಅದಕ್ಕೆ ನಾನು ಒಪ್ಪಿಕೊಳ್ಳಲಿಲ್ಲ. ಆದರೂ ಐಪಿಎಲ್ (IPL) ಇದೆ. ನಂತರ ಮದುವೆ ಆಗೋಣ ಎಂದು ಅಬಾರ್ಷನ್ (Abortion) ಮಾಡಿಸಿದ ಎಂದು ಆರೋಪಿಸಿದ್ದಾರೆ.
ಹಿಂದೆ ನಾನು ಕೇಸ್ ಕೊಡ್ತೀನಿ ಅಂತ ಹೇಳಿದ್ದೆ. ಆಗ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ (Bagalgunte Police Station) ದೂರು ಕೊಟ್ಟೆ. ಆ ಬಳಿಕ ನೀನು ಆತುರಪಡಬೇಡ ನಾನು ಮದುವೆ ಆಗುತ್ತೇನೆ ಅಂತ ಹೇಳಿದ. ಅವರ ಪೋಷಕರು ಮದುವೆ ನೀವೇ ಮಾಡುವಂತೆ ಡಿಮಾಂಡ್ ಮಾಡಿದ್ರು. ಅದರಂತೆ ಒಪ್ಪಿಕೊಂಡು ಮದುವೆಗೆ ಮುಂದಾಗಿದ್ದೇವು ಎಂದು ಯುವತಿ ಆರೋಪಿಸಿದ್ದಾರೆ.
ಒಮ್ಮೆ ಎರಡು ಟೂರ್ನಮೆಂಟ್ ನಲ್ಲಿ ಮಿಸಸ್ ಕಾರ್ಯಪ್ಪ ಅಂತ ಬರೆಸಿ ನನ್ನ ಬೇರೆ ಬೇರೆ ರಾಜ್ಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಸದ್ಯ ಆರ್ ಟಿ ನಗರ ಠಾಣೆಯಲ್ಲಿ ದೂರು ದಾಖಲಾದರೆ, ಕಾರಿಯಪ್ಪ ಅವರು ಬಗಲಗುಂಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.