ಕಾರು ಹಾಗೂ ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಖ್ಯಾತ ನಟಿ ಹಾಗೂ ಗಾಯಕ ಸೇರಿದಂತೆ 9 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಭೋಜ್ಪುರಿ ನಟಿ ಆಂಚಲ್ ತಿವಾರಿ ಹಾಗೂ ಗಾಯಕ ಛೋಟು ಪಾಂಡೆ ಸಾವನ್ನಪ್ಪಿರುವ ದುರ್ದೈವಿಗಳು ಎನ್ನಲಾಗಿದೆ. ಬಿಹಾರದ ಕೈಮೂರ್ನ್ ದೇವಕಲಿ ಎಂಬ ಗ್ರಾಮದ ಹತ್ತಿರ ಈ ಘಟನೆ ನಡೆದಿದೆ. ಅಪಘಾತದಲ್ಲಿ ನಟಿ, ಗಾಯಕರು ಹಾಗೂ ಅವರ ಮತ್ತು ಅವರ ಆಪ್ತರು ಇದ್ದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು, ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಕಾರು ಹಾಗೂ ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆ ಹಿಂದಿನಿಂದ ಲಾರಿಯು ಕಾರಿಗೆ ಗುದ್ದಿದೆ. ಪರಿಣಾಮವಾಗಿ ಅಪಘಾತ ಭೀಕರವಾಗಿದೆ ಎನ್ನಲಾಗಿದೆ.