ನಟ, ರಾಜಕಾರಣಿ ಜಗ್ಗೇಶ್ ಹಾಗೂ ಪರಿಮಳಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 40 ವರ್ಷ. ಈ ಖುಷಿಯನ್ನು ಈ ದಂಪತಿ ಅಭಿಮಾನಿಗಳಿಗೆ ಹಂಚಿದ್ದಾರೆ.
ಜಗ್ಗೇಶ್ ಹಾಗೂ ಪರಿಮಳಾ 1984ರ ಮಾರ್ಚ್ 22ರಂದು ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಅವರ ಮದುವೆಯ ಪೋಸ್ಟ್ ವೈರಲ್ ಆಗಿದೆ. ಪತ್ನಿ ಪರಿಮಳಾ ಅವರನ್ನು ಮದುವೆ ಆದ ಕ್ಷಣ ಹೇಗಿತ್ತು ಎಂದು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ. ತಾಳಿ ಕಟ್ಟಿದ ಕ್ಷಣದ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಮದುವೆ ವಾರ್ಷಿಕೋತ್ಸವ. 40 ವರ್ಷ ಸಮಯ ಕ್ಷಣದಂತೆ ಹೋದ ಭಾವನೆ. ತಾಳಿ ಕಟ್ಟೋವಾಗ್ಲು ತಾಳಿ, ಕಟ್ಟಿದ ಮೇಲು ತಾಳಿ’ ಎಂದು ಬರೆದುಕೊಂಡಿದ್ದಾರೆ.
ಜಗ್ಗೇಶ್ ಮದುವೆ ವಿಚಾರ ಸಖತ್ ಸುದ್ದಿ ಆಗಿತ್ತು. ಅದು ಕೋರ್ಟ್ ಮೆಟ್ಟಿಲು ಕೂಡ ಏರಿ, ಅಲ್ಲಿ ಜಗ್ಗೇಶ್ ಗೆ ಜಯ ಸಿಕ್ಕಿತ್ತು.