ಚಂದನವನದ ತಾರೆ ಪೂಜಾ ಹೆಗ್ಡೆ ಮೊದಲ ಬಾರಿಗೆ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾರೆ.
ಗೆಳೆಯನೊಂದಿಗೆ ಕಾರಿನಲ್ಲಿ ಹೋಗುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ. ಕುಡ್ಲದ ಬೆಡಗಿ ಪೂಜಾ ಹೆಗ್ಡೆ ಹೆಸರು ಸಾಕಷ್ಟು ನಟರೊಂದಿಗೆ ಕೇಳಿ ಬಂದಿದೆ. ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬು ಸುದ್ದಿ ಕೂಡ ಹಬ್ಬಿತ್ತು.
ಆನಂತರ ಅದೂ ಸುಳ್ಳು ಎನ್ನಲಾಯಿತು. ಸದ್ಯ ಬಾಲಿವುಡ್ ಹೀರೋ ರೋಹನ್ ಮೆಹ್ರಾ ಜೊತೆ ಪೂಜಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೋಟೆಲ್ನಿಂದ ಹೊರಬಂದು ಕಾರಿನಲ್ಲಿ ರೋಹನ್ ಮೆಹ್ರಾ ಜೊತೆ ಹೋಗುವಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಈ ವೇಳೆ ನಟಿ ನಾಚಿ ನೀರಾಗಿದ್ದು, ಕ್ಯಾಮೆರಾಗೆ ಸರಿಯಾಗಿ ಮುಖ ತೋರಿಸದೇ ಕುಳಿತಿದ್ದಾರೆ. ನಟಿಯ ಈ ನಡೆ ನೋಡಿ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತೆ ಆಗಿದೆ. ಸತತ ಸಿನಿಮಾಗಳ ಸೋಲುಗಳ ನಡುವೆಯೂ ನಟಿಯ ಮದುವೆ ವಿಷಯ ಸುದ್ದಿಯಾಗಿತ್ತು. ಈ ಸುದ್ದಿ ನಿಜನಾ? ಎಂಬುದನ್ನು ಕಾದುನೋಡಬೇಕಿದೆ. ಪೂಜಾ ಹೆಗ್ಡೆ ಈಗ ಸುನೀಲ್ ಶೆಟ್ಟಿ ಪುತ್ರನೊಂದಿಗೆ ಸಿನಿಮಾ ಮಾಡುತ್ತಿದ್ದಾರೆ.