ಕನ್ನಡದಲ್ಲಿ ಮೂಡಿ ಬಂದಿದ್ದ ಹೆಬ್ಬುಲಿಯ ನಾಯಕಿ ಅಮಲಾ ಪೌಲ್ (Amala Paul) ಲಿಪ್ ಲಾಕ್ ಮಾಡುವುದರ ಮೂಲಕ ಮತ್ತೊಂದು ಮದುವೆಗೆ (marriage) ಸಿದ್ಧರಾಗಿದ್ದಾರೆ.
ಮದುವೆಯ ಪ್ರಪೋಸಲ್ ಅನ್ನು ಈ ಬಾರಿ ವಿಭಿನ್ನವಾಗಿ ಸ್ವೀಕರಿಸಿದ್ದಾರೆ. ಅಮಲಾ ಹುಟ್ಟು ಹಬ್ಬದ ದಿನದಂದು ಬಾಯ್ ಫ್ರೆಂಡ್ ವಿಶೇಷವಾದ ಸನ್ನಿವೇಶವೊಂದನ್ನು ಸೃಷ್ಟಿ ಮಾಡಿ ಕೈಗೆ ಉಂಗುರು ತೊಡಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತಿ ನಟಿ ಆಗಿರುವ ಅಮಲಾ ಪೌಲ್, 2014ರಲ್ಲಿ ತಮಿಳು ನಿರ್ದೇಶಕ ವಿಜಯ್ ರನ್ನು ಪ್ರೀತಿಸಿ ಮದುವೆಯಾಗಿದ್ದರು. ಆ ಸಂಬಂಧ ತುಂಬಾ ದಿನ ಉಳಿಯಲಿಲ್ಲ. ಮದುವೆಯಾದ ಮೂರೇ ಮೂರು ವರ್ಷಕ್ಕೆ ಜೀವನ ಮುರಿದು ಬಿತ್ತು.
ಈ ನಟಿಯ ಹೆಸರು ಹಲವಾರು ನಟರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಅನೇಕ ನಿರ್ದೇಶಕರ ಹೆಸರು ಕೂಡ ಕೇಳಿ ಬಂದಿದ್ದವು. ಯಾವತ್ತೂ ಅಮಲಾ ಉತ್ತರಿಸಲಿಲ್ಲ. ಸದ್ಯ ಬಾಯ್ ಫ್ರೆಂಡ್ ಜೊತೆಗಿನ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಬಾಯ್ ಫ್ರೆಂಡ್ ಮಾಡಿರುವ ಪ್ರಪೋಸ್ ಗೆ ಒಪ್ಪಿಕೊಂಡಿದ್ದಾರೆ. ಅಮಲಾ ಕೂಡ ಬಾಯ್ ಫ್ರೆಂಡ್ ತುಟಿಗೆ ಮುತ್ತಿಡುತ್ತಾ (Lip Lock) ಉಂಗುರು ತೊಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.