ಗಗನಸಖಿಯರ ವೃತ್ತಿ , ಕಠಿಣ ಟ್ರೈನಿಂಗ್ ನ ಬಗ್ಗೆ ನಿಮಗೆ ಗೊತ್ತಿರದ ರೋಚಕ  ಸತ್ಯ..! INTERESTING FACTS

1 min read

ಗಗನಸಖಿಯರ ವೃತ್ತಿ , ಕಠಿಣ ಟ್ರೈನಿಂಗ್ ನ ಬಗ್ಗೆ ನಿಮಗೆ ಗೊತ್ತಿರದ ರೋಚಕ  ಸತ್ಯ..! INTERESTING FACTS

ಏರ್ ಹಾಸ್ಟೆಸ್ ಜೀವನ ತುಂಬಾನೆ ಕಲರ್ ಫುಲ್.. ದೇಶ ವಿದೇಶ ಸುತ್ತುವ ರೋಮಾಂಚನಕಾರಿ ಕೆಲಸ. ಅವರಿಗೆ ಅತಿ ಹೆಚ್ಚು ಸ್ಯಾಲರಿ ಕೊಡ್ತಾರೆ. ಹೀಗೆಲ್ಲಾ ಜನರು ಈ ಫ್ಲೈಟ್ ಅಟೆಂಡರ್ ಕೆಲಸದ ಬಗ್ಗೆ ವೃತ್ತಿಯ ತಮ್ಮದೇ ಕಲ್ಪನೆಗಳನ್ನ ಹೊಂದಿರುತ್ತಾರೆ. ಆದ್ರೆ ಅಸಲಿಯತ್ತಲ್ಲಿ ಹೀಗೇನು ಇರೋದಿಲ್ಲ.  ನಿಜ ಹೇಳಬೇಕೆಂದ್ರೆ ಓರ್ವ ಗಗನಸಖಿಯ ಕೆಲಸ ಅಷ್ಟು ಸುಲಭವಾಗಿರೋದಿಲ್ಲ. ಇಂದು ಗಗನಸಖಿಯರ ಕೆಲ ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ನಾವು ತಿಳಿದುಕೊಳ್ಳೋಣ.

ಫ್ಲೈಟ್ ಅಟೆಂಡರ್ ಅಥವ ಗಗನಸಖಿಯರಾಗಬೇಕೆಂದ್ರೆ  ಮೊದಲಿಗೆ ಅತ್ಯಂತ ಕಠಿಣವಾದ ಟ್ರೈನಿಂಗ್ ಪಡೆದು ಅದರಲ್ಲಿ ಪಾಸ್ ಆಗಬೇಕು. ಈ ಟ್ರೈನಿಂಗ್ ಕೂಡ ಅಷ್ಟು ಸುಲಭವಾಗಿರುವುದಿಲ್ಲ.   ಟ್ರೈನಿಂಗ್ ವೇಳೆ , ಭಾಷೆ, ಮಾತು, ಬಾಡಿ ಲಾಂಗ್ವೇಜ್, ಮಾತನಾಡುವ ಶೈಲಿ, ನಗುವ ರೀತಿ , ನಡೆದಾಡುವ ಶೈಲಿ , ಹೀಗೆ ಪ್ರತಿಯೊಂದು ಚಿಕ್ಕ ಚಿಕ್ಕ ವಿಚಾರಗಳ ಬಗ್ಗೆ ಹೇಳಿಕೊಡಲಾಗುತ್ತೆ.

ಗಗನಸಖಿಯರು ತಮ್ಮ ಮುಂದೆ ಇರುವವರು ಏನನ್ನ ಬಯಸುತ್ತಿದ್ದಾರೆ. ಅವರಿಗೇನು ಬೇಕು. ಅವರು ಯಾವ ರೀತಿ ಆಲೋಚನೆ ಮಾಡ್ತಿದ್ಧಾರೆ ಎನ್ನುವುದನ್ನೂ ಸಹ ಅರ್ಥಮಾಡಿಕೊಳ್ಳುವ  ಕಲೆಯನ್ನ ತಮ್ಮ ಟ್ರೈನಿಂಗ್ ದಿನಗಳಲ್ಲಿ ಕಲಿತಿರುತ್ತಾರೆ. ಎಂತಹದ್ದೇ ವ್ಯಕ್ತಿ ಆಗಿರಬಹುದು. ಅವರ ನಡವಳಿಕೆ ಎಷ್ಟೇ ಕೆಟ್ಟದಾಗಿರಬಹುದು ಅಂತವರನ್ನ ಹೇಗೆ ಹತೋಟಿಗೆ ತರಬೇಕೆಂಬ ಕಲೆಯನ್ನ  ಟ್ರೈನಿಂಗ್ ವೇಳೆ ಫ್ಲೈಟ್ ಅಟೆಂಡ್ ರ್ಸ್ ಅಥವ ಗಗನಸಖಿಯರಿಗೆ  ಹೇಳಿಕೊಡಲಾಗಿರುತ್ತೆ. ಅದರಂತೆ ಎಂಥಹ ಬಿಗಡಾಯಿತ ವ್ಯಕ್ತಿಗಳನ್ನ ಕೂಡ ಗಗನಸಖಿಯರು ತುಂಬಾನೆ ಆರಾಮಾಗಿ ಹ್ಯಾಂಡಲ್ ಮಾಡ್ತಾರೆ. ಆದ್ರೂ ಸಹ ಪ್ರಯಾಣಿಕರ ಮೇಲೆ ಕೋಪವನ್ನ ತೋರಿಸುವುದಿಲ್ಲ. ಅಷ್ಟು  ತಾಳ್ಮೆಯನ್ನೂ ಅವರಿಗೆ ಕಲಿಸಲಾಗಿರುತ್ತೆ.

ಗಗನಸಖಿಯರು ಪ್ರಯಾಣಿಕರನ್ನು ವಿಮಾನದೊಳಗೆ ವೆಲ್ ಕಮ್ ಮಾಡುವಾಗ ಯಾಕೆ ಕೈಗಳನ್ನ ಹಿಂದೆ ಕಟ್ಟಿರುತ್ತಾರೆ. ಆದ್ರೆ ಅಸಲಿಗೆ ಏರ್ ಹಾಸ್ಟೆಸ್ ಪ್ರಯಾಣಿಕರ ಸ್ವಾಗತಕ್ಕೆ ನಿಂತಿರುವುದಿಲ್ಲ ಬದಲಾಗಿ ಕೈಗಳನ್ನ ಹಿಂದೆ ಕಟ್ಟಿ ಅವರು ಪ್ರಯಾಣಿಕರ ಸಂಖ್ಯೆಯನ್ನ ಎಣಿಸಿಕೊಳ್ಳುತ್ತಿರುತ್ತಾರೆ. ಈ ಟೆಕ್ನಿಕ್ ಅನ್ನು ಟ್ರೈನಿಂಗ್ ವೇಳೆಯೇ ಹೇಳಿಕೊಡಲಾಗುತ್ತೆ.

ಸಹಜವಾಗಿ ಏರ್ ಹಾಸ್ಟೆಸ್ ವೃತ್ತಿಯ ಅವಧಿ ಅತಿ ಕಡಿಮೆಯಿರುತ್ತದೆ. 18- 26 ವಯಸ್ಸಿನವರೆಗೂ ಏರ್ ಹಾಸ್ಟೆಸ್ ವೃತ್ತಿಯ ಅವಧಿ ಇರುತ್ತದೆ. ಆದ್ರೆ ಕೆಲ ಏಜೆನ್ಸಿಗಳಲ್ಲಿ ಮಾತ್ರ ಈ ಅವಧಿ ವಿಸ್ತರಣೆ ಆಗಬಹುದು.  

OMG : ಒಂದು ಪ್ಲೇಟ್ ಬಿರಿಯಾನಿಗೆ 20 ಸಾವಿರ ರೂಪಾಯಿನಾ..!

ಇನ್ನೂ ದೂರದ ಪ್ರಯಾಣದ ವೇಳೆ ವಿಮಾನದ ಪ್ರಯಾಣಿಕರೆಲ್ಲರೂ ನಿದ್ರೆ ಮಾಡ್ತಾರೆ. ಆದ್ರೆ ಗಗನಸಖಿಯರು ನಿದ್ರಿಸೋದಿಲ್ವಾ. ಈ ಪ್ರಶ್ನೆಗೆ ಉತ್ತರ ಅನೇಕರಿಗೆ ಗೊತ್ತಿರೋದಿಲ್ಲ. ಆದ್ರೆ ಅವರಿಗಾಗಿಯೇ ಪ್ರತ್ಯೇಕವಾಗಿ ಮಲಗುವುದಕ್ಕೆ ಜಾಗ ಕಾಯ್ದಿರಿಸಲಾಗಿರುತ್ತೆ. ಆದ್ರೆ ಅದು ಎಲ್ಲಿ ಎನ್ನುವುದು ಬಹುತೇಕ ಜನರಿಗೆ ಗೊತ್ತಿರುವುದಿಲ್ಲ.  ಗಗನಸಖಿಯರು ಆಗಾಗ ತೆರಳಿ ಸ್ವಲ್ಪ ಸಮಯದ ವರೆಗೂ ನಿದ್ರೆ ಮಾಡ್ತಾರೆ.

ಇನ್ನೂ ಗಗನಸಖಿಯರು ವಿಮಾನದ ಪ್ರತಿಯೊಬ್ಬರ ಮೇಲೂ ನಿಗಾ ವಹಿಸಿರುತ್ತಾರೆ. ಪ್ರತಿ ಸಣ್ಣ ವಿಚಾರದ ಮೇಲೂ ಗಮನವಿಟ್ಟಿರುತ್ತಾರೆ. ಇನ್ನೂ ಶೌಚಾಲಯದ ಮೇಲೆ ಪ್ರಮುಖವಾಗಿ ಗಗನಸಖಿಯರು ನಿಗಾ ವಹಿಸಿರುತ್ತಾರೆ. ಇದಕ್ಕೆ ಕಾರಣ ಇಬ್ಬರು ವ್ಯಕ್ತಿಗಳು ಒಟ್ಟಾಗಿ ತೆರಳಿ ಪ್ರಚೋದನಕಾರಿಯಾಗಿ ವರ್ತಿಸಬಹುದು. ಹೀಗಾಗಿ ಯಾರಾದರೂ ಇಬ್ಬರು ಒಟ್ಟಾಗಿ ವಾಷರೂಮ್ ಗೆ ತೆರಳುತ್ತಿದ್ದಾರಾ ಎನ್ನುವುದನ್ನ ಗಮನದಲ್ಲಿ ಇಟ್ಟುಕೊಂಡಿರುತ್ತಾರೆ. ಒಂದು ವೇಳೆ ಒಂತಹ ಬೆಳವಣಿಗೆಗಳು ಕಂಡು ಬಂದರೆ ಅಂತಹ ವ್ಯಕ್ತಿಗಳು ಸಿಕ್ಕಿಬಿದ್ದರೆ  ಅವರನ್ನ ಅರೆಸ್ಟ್ ಮಾಡಲಾಗುತ್ತೆ. ಅಷ್ಟೇ ಅಲ್ಲ ಶಾಸ್ವತವಾಗಿ ಅವರನ್ನ ವಿಮಾನಯಾತ್ರೆಯಿಂದಲೇ ಬ್ಯಾನ್ ಕೂಡ ಮಾಡಬಹುದು.

ಇನ್ನೂ ಫ್ಲೈಟ್ ನಲ್ಲಿ ಯಾರಾದ್ರೂ ಪ್ಯಾಸೆಂಜರ್ಸ್ ಶೂಗಳನ್ನ ಬಿಚ್ಚಿರುವುದು ಕಂಡು ಬಂದರೆ ಅಂತವರಿಗೆ ಶೂ ವಾಪಸ್ ಧರಿಸುವಂತೆ ಹೇಳುವುದು ಗಗನ ಸಖಿಯರ ಕೆಲಸವಾಗಿರುತ್ತೆ. ಫ್ಲೈಟ್ ಗಳ ನೆಲಗಳು ಬೇಗನೇ ಗಲೀಜಾಗುವ ಕಾರಣ , ಶೂಗಳನ್ನ ಬಿಚ್ಚಿರುವ ಪ್ರಯಾಣಿಕರಿಗೆ ವಾಪಸ್ ಧರಿಸುವಂತೆ ಒತ್ತಾಯ ಮಾಡಲಾಗುತ್ತೆ.

ಇನ್ನೂ ಅನೇಕರು ತಿಳಿದುಕೊಂಡಿರುವಂತೆ ಗಗನಸಖಿಯರು ಯಾರನ್ನೂ ಪ್ರೀತಿ ಮಾಡುವಂತಿಲ್ಲ. ಆದ್ರೆ ಆ ರೀತಿ ಯಾವುದೇ ನಿರ್ಬಂಧನೆಗಳು ಇಲ್ಲ. ಈ ವಿಚಾರದಲ್ಲಿ ಗಗನಸಖಿಯರಿಗೆ ಸ್ವಾತಂತ್ರ್ಯ ಇರುತ್ತೆ. ಇದೇ ಕಾರಣಕ್ಕೆ ಅನೇಕ ಬಾರಿ ಹಲವು ಜೋಡಿಗಳ ಪ್ರೀತಿ ವಿಮಾನಗಳಲ್ಲಿಯೇ ಶುರುವಾಗಿರುತ್ತೆ.

ಇನ್ನೂ   ಏರ್ ಹಾಸ್ಟೀಸ್ ಪ್ರಯಾಣಿಕರಿಗೆ ತಮ್ಮ ಮೊಬೈಲ್ ಗಳನ್ನ ಬಳಸದಂತೆ ಸೂಚನೆ ನೀಡ್ತಾರೆ. ಆದ್ರೆ ಗಗನಸಖಿಯರು ತಮ್ಮ ಫೋನ್ ಗಳನ್ನ ಬಳಸಬಹುದು. ಇನ್ನೂ ವಿಮಾನದಲ್ಲಿ ಉಪಟಳ  ನೀಡುವ ಇತರೇ ಪ್ರಯಾಣಿಕರಿಗೆ ತೊಂದರೆ ನೀಡುವಂತಹ ವ್ಯಕ್ತಿಗಳನ್ನ ಹೇಗೆ ನಿಯಂತ್ರಿಸಬೇಕೆಂಬುದನ್ನೂ ಸಹ ಗಗನಸಖಿಯರಿಗೆ ಟ್ರೈನಿಂಗ್ ವೇಳೆ ಹೇಳಿಕೊಡಲಾಗಿರುತ್ತೆ. ಇದೇ ಕಾರಣಕ್ಕೆ ಏರ್ ಹಾಸ್ಟೆಸ್ ಬಳಿ ಸದಾ ಝಿಪ್ ಟೈ ಗಳು ಲಭ್ಯವಿರುತ್ತೆ. ಈ ಮೂಲಕ ಅಂತಹ ಪ್ರಯಾಣಿಕರ ಕೈಗಳನ್ನೂ ಸಹ ಕಟ್ಟಿಹಾಕುವುದನ್ನ ಗಗನಸಖಿಯರು ಕಲಿತಿರುತ್ತಾರೆ. ಅಷ್ಟೇ ಅಲ್ಲ ಸೀಟ್ ಬೆಲ್ಟ್ ನ ಮೂಲಕ ಹೇಗೆ ಅಂತಹ ಪ್ರಯಾಣಿಕರನ್ನ ಕಟ್ಟಿಹಾಕಬೇಕೆಂಬುದನ್ನೂ ಹೇಳಿಕೊಡಲಾಗಿರುತ್ತೆ.

ಇನ್ನೂ ವಿಮಾನಗಳಲ್ಲಿ ಗಗನಸಖಿಯರು ಮತ್ತೋರ್ವ ಸಿಬ್ಬಂದಿ ದೂರದಲ್ಲಿದ್ದರೆ ಅಂತವರ ಜೊತೆ ಮಾತನಾಡಲು ಕಿರುಚಾಡುವುದಾಗಲಿ ಜೋರಾಗಿ ಮಾತನಾಡುವುದಾಗಲಿ ಮಾಡುವುದಿಲ್ಲ. ಬದಲಾಗಿ ಅವರಿಗೆ ಸಿಗ್ನಲ್ ಲಾಂಗ್ವೇಜ್ ಹೇಳಿಕೊಡಲಾಗಿರುತ್ತೆ. ಒಬ್ಬರಿಗೊಬ್ಬರು ಕೈಗಳ ಮೂಲಕ ಸಿಗ್ನಲ್ ಗಳನ್ನ ಮಾಡುವ ಮೂಲಕ ಮಾತನಾಡಿಕೊಳ್ತಾರೆ.

ಇನ್ನೂ ಪ್ರಯಾಣಿಕರನ್ನ ನೋಡಿದ ತಕ್ಷಣ ಅವರೆಂಥವರೂ, ಅವರು ಸಮಸ್ಯೆಗಳನ್ನ ತಂದಿಡುತ್ತಾರಾ ಇಲ್ವಾ, ಆಪತ್ ಕಾಲದಲ್ಲಿ ಯಾರು ಯಾವ ರೀತಿ ನೆರವಾಗುತ್ತಾರೆ ಇವೆಲ್ಲವನ್ನ ತಿಳಿದುಕೊಳ್ಳುವುದನ್ನ ಟ್ರೈನಿಂಗ್ ನಲ್ಲಿ ಕಲಿತಿರುತ್ತಾರೆ.

ಇನ್ನೂ  ಗಗನಸಖಿಯರಿಗೆ ಅತಿ ಹೆಚ್ಚು ಸ್ಯಾಲರಿ ನೀಡಲಾಗುತ್ತೆ ಅಂತ ಎಷ್ಟೋ ಜನರು ತಪ್ಪು ಕಲ್ಪನೆಯನ್ನ ಹೊಂದಿರುತ್ತಾರೆ. ಆದ್ರೆ  ಆ ರೀತಿ ಏನೂ ಇಲ್ಲ.  ಗಗನಸಖಿಯರ ಸ್ಯಾಲರಿ ಗಂಟೆಗಳ ಲೆಕ್ಕದಲ್ಲಿ ನೀಡಲಾಗುತ್ತೆ. ಪ್ಲೈಟ್ ಹತ್ತುವುದರಿಂದ ಪೇಯಿಂಹ್ ಹವರ್ ಶುರುವಾಗಿ ಫ್ಲೈಟ್ ಲ್ಯಾಂಡ್ ಆಗ್ತಿದ್ದಂತೆ ಮುಕ್ತಾಯಗೊಂಡಿರುತ್ತೆ. ಅದೇ ಲೆಕ್ಕಾಚಾರದಲ್ಲಿ ಸ್ಯಾಲರಿ ನೀಡಲಾಗುತ್ತೆ.

ಓರ್ವ ಗಗನಸಖಿ ಮುಂಜಾನೆ 4 ಗಂಟೆಗೆ ಎದ್ದು ಕೆಲಸಕ್ಕೆ ತೆರಳಬೇಕಾಗುತ್ತೆ. ಅನೇಕ ಬಾರಿ ಏರ್ ಹಾಸ್ಟೆಸ್ ಜೆಟ್ ಲ್ಯಾಗ್ ಗೂ ಒಳಗಾಗುತ್ತಾರೆ. ರಜಾ ದಿನಗಳಲ್ಲೂ ಕೆಲಸ ಮಾಡಬೇಕಾಗುತ್ತೆ. ಧೀರ್ಘ ಸಮಯದವರೆಗೂ ತಮ್ಮ ಪರಿವಾರದಿಂದ ದೂರ ಇರಬೇಕಾಗುತ್ತೆ. ಒಟ್ನಲ್ಲಿ ಎಲ್ಲರೂ ಅಂದುಕೊಂಡಂತೆ ಓರ್ವ ಗಗನಸಖಿಯ ವೃತ್ತಿ, ಜೀವನ ಅಷ್ಟು ಕಲರ್ ಫುಲ್ ಆಗಲಿ ಸುಲಭವಾಗಿ ಇರುವುದಿಲ್ಲ. ಇದಕ್ಕೆ ಕಠಿಣ ಟ್ರೈನಿಂಗ್, ತಾಳ್ಮೆ ಎಲ್ಲವನ್ನ ಸಹಿಸಿಕೊಳ್ಳುವ  ಶಕ್ತಿಯನ್ನೂ  ಹೊಂದಿರಬೇಕಾಗಿರುತ್ತೆ. 

ಪೊಲೀಸರ ಸಮವಸ್ತ್ರ ಯಾಕೆ ಖಾಕಿ ಬಣ್ಣದಲ್ಲೇ ಇರುತ್ತೆ, ಭಾನುವಾರದಂದೇ ರಜೆ ಯಾಕೆ..? : 4 ಕುತೂಹಲಕಾರಿ ವಿಚಾರಗಳು..!

ನಂದ ವಂಶದ ವಿರುದ್ದ ಯುದ್ಧದಲ್ಲಿ ಗೆಲ್ಲಲು ಚಾಣಕ್ಯ ಅನುಸರಿಸಿದ 7 ಯುದ್ಧ ನೀತಿಗಳು ..!

ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd