ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಟಿಸಿರುವ ಬಡೆ ಮಿಯಾ ಚೋಟೆ ಮಿಯಾ ಚಿತ್ರ ಹೀನಾಯ ಸೋಲು ಕಾಣುತ್ತಿದೆ.
ಈ ಚಿತ್ರ ಈದ್ ಹಬ್ಬದಂದು ತೆರೆಗೆ ಅಪ್ಪಳಿಸಿದೆ. ಆದರೆ, ಇದುವರೆಗೆ ಈ ಚಿತ್ರಕ್ಕೆ 100 ಕೋಟಿ ರೂ. ಗಳಿಸಲು ಆಗಿಲ್ಲ. ಇತ್ತೀಚೆಗೆ ಅಕ್ಷಯ್ ಕುಮಾರ್ ನಟನೆಯ ಚಿತ್ರಗಳು ಸಾಲು ಸಾಲಾಗಿ ಸೋಲು ಕಾಣುತ್ತಿವೆ.
ಈ ಮೊದಲು ಹಾಸ್ಯ ಚಿತ್ರಗಳಲ್ಲಿ ನಟಿಸುತ್ತಿದ್ದ ಅಕ್ಷಯ್ ಕುಮಾರ್, ಈಗ ಆ್ಯಕ್ಷನ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಆದರೆ, ಜನರು ಅವರನ್ನು ಈ ರೀತಿ ನೋಡಲು ಇಷ್ಟ ಪಡುತ್ತಿಲ್ಲ ಅನಿಸುತ್ತಿದೆ. ಹೀಗಾಗಿಯೇ ಇಂತಹ ಚಿತ್ರಗಳು ಸಾಲು ಸಾಲಾಗಿ ಸೋಲುತ್ತಿವೆ. ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೊದಲ ದಿನ 15 ಕೋಟಿ ರೂ. ಗಳಿಸಿದೆ.
ಎರಡನೇ ದಿನ 7.6 ಕೋಟಿ ರೂಪಾಯಿ, ಮೂರನೇ ದಿನ 8.5 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 9.5 ಕೋಟಿ ರೂಪಾಯಿ ಗಳಿಸಿದೆ. ಸೋಮವಾರ ಕೇವಲ 2.5 ಕೋಟಿ ರೂ. ಗಳಿಸಿದೆ. ಈ ಚಿತ್ರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಚಿತ್ರತಂಡವು ಈ ಚಿತ್ರ 1100 ಕೋಟಿ ರೂ. ಗಳಿಸಲಿದೆ ಎಂದು ಹೇಳಿತ್ತು. ಆದರೆ, ಈಗ ಚಿತ್ರ 100 ಕೋಟಿ ರೂ. ಗಳಿಸಲು ಒದ್ದಾಡುತ್ತಿದೆ. ಇಲ್ಲಿಯವರೆಗೆ ಈ ಚಿತ್ರ ಗಳಿಸಿದ್ದು ಕೇವಲ 43 ಕೋಟಿ ರೂ. ಮಾತ್ರ.