ಒಂಟಿಯಾಗಿ ವಾಸ ಮಾಡ್ತಿದ್ದ ವೃದ್ಧೆ ಮನೆಗೆ ನುಗ್ಗಿದ ಖದೀಮರು..!
ಬೆಂಗಳೂರು ವ್ಯಾಪ್ತಿ ನಲ್ಲಿ ಒಂಟಿ ವೃದ್ಧೆಯ ಮನೆಗೆ ನುಗ್ಗಿದ ಇಬ್ಬರು ಐನಾತಿ ಕಳ್ಳರು ಮನೆಯಲ್ಲಿ ವಸ್ತುಗಳನ್ನು ದೋಚಲು ಯತ್ನಿಸಿ ಏನೂ ಸಿಗದೆ ನಿರಾಶ್ರಿತರಾಗಿ ವೃದ್ದೆಯ ಮೈಮೇಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ. ಕಾಡುಗೋಡಿ ಪೊಲಿಸ್ ಠಾಣಾ ವ್ಯಾಪ್ತಿಯ ಚನ್ನಸಂದ್ರ ಗ್ರಾಮದ ಕಮಲಮ್ಮ ಮನೆಯಲ್ಲಿ ಸುಮಾರು ತಿಂಗಳುಗಳಿಂದ ಒಂಟಿಯಾಗಿ ವಾಸಿಸುತ್ತಿದ್ದು ಮೂರಂತಸ್ತಿನ ಕಟ್ಟಡದಲ್ಲಿ ಎರಡನೆ ಅಂತಸ್ತಿನ ಕಟ್ಟಡದಲ್ಲಿ ಕಮಲಮ್ಮ ಒಂಟಿಯಾಗಿ ವಾಸಿಸುತ್ತಿದ್ದರು. ಇಬ್ಬರು ಕಿಡಿಗೇಡಿಗಳು ಮನೆಯ ಹಿಂಬದಿ ಬಾಗಿಲನ್ನು ಗಡಪಾರಿಯಿಂದ ಒಡೆದು ಒಳ ನುಗ್ಗಿ ವೃದ್ಧೆಯನ್ನು ಸೀರೆಯಿಂದ ಕೈಕಾಲುಗಳನ್ನು ಕಟ್ಟಿ ಬಾಯಿಗೆ ಬಟ್ಟೆಯನ್ನು ತುರುಕಿ .ಮನೆಯಲ್ಲಿದ ಕಬ್ಬಿಣದ ಪೆಟ್ಟಿಗೆಯ ಲಾಕರ್ ಕೀ ಪಡೆದು ಓಪನ್ ಮಾಡಲು ಯತ್ನಿಸಿದ್ದಾರೆ. ಆದರೆ ಲಾಕರ್ ನ ಕೋಡ್ ಇಲ್ಲದ ಕಾರಣ ಪೆಟ್ಟಿಗೆ ಒಪನ್ ಆಗಲಿಲ್ಲ , ಆಗ ವೃದ್ದೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ನಂತರ ವೃದ್ದೆ ಕಮಲಮ್ಮ ಕಟ್ಟಿದ್ದ ಕಟ್ಟನ್ನು ಬಿಚ್ಚಿಕೊಂಡು ಮಗನಿಗೆ ಪೋನ್ ಮೂಲಕ ವಿಚಾರ ತಿಳಿಸಿದ್ದಾರೆ. ಈ ಬಗ್ಗೆ ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
ಚೀನಿಯರ ಪ್ರಾಚೀನ ಉಗಿಬಂಡಿ ಕಥೆ:
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







