ಪ್ರಗ್ನೆನ್ಸಿ ಟರ್ಮಿನೇಷನ್ ಮಾತ್ರೆ ಮಾರಾಟ – ಅಮೆಜಾನ್, ಫ್ಲಿಪ್ ಕಾರ್ಟ್ಗೆ ನೋಟಿಸ್
ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆಗಳಾಗಿರುವ ಅಮೆಜಾನ್ ಮತ್ತು ಫ್ಲಿಕ್ ಕಾರ್ಟ್ ಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಪ್ರಗ್ನೆನ್ಸಿ ಟರ್ಮಿನೇಷನ್ ಕಿಟ್ ಗಳು ಮತ್ತು ಮಾತ್ರೆಗಳನ್ನ ಮಾರಾಟ ಮಾಡ್ತಿರುವ ಹಿನ್ನೆಲೆ ಸಂಬಂಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಪ್ರಾಧಿಕಾರವು ಈ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿದೆ.
ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್, 1940 ಪ್ರಕಾರ ಇಂತಹ ಔಷಧಿಗಳನ್ನು ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೆ ಆನ್ಲೈನ್ನಲ್ಲಿ ಮಾರಾಟ ಮಾಡುವಂತಿಲ್ಲ. ಖಚಿತ ಮಾಹಿತಿ ಮೇರೆಗೆ ಎಫ್ಡಿಎ ಪ್ರಗ್ನೆನ್ಸಿ ಟರ್ಮಿನೇಷನ್ ಕಿಟ್ ಗಾಗಿ ಅಮೆಜಾನ್ನಲ್ಲಿ ಅರ್ಡರ್ ನೀಡಿತು. ಉತ್ತರಪ್ರದೇಶ ಮತ್ತು ಒಡಿಶಾ ಮೂಲದ ಕೆಲವು ಪೂರೈಕೆದಾರರು ಈ ಆರ್ಡರ್ ಸ್ವೀಕರಿಸಿದ್ದಾರೆ. ಬಳಿಕ ಈ ವಿಚಾರ ಖಚಿತವಾಗಿದೆ.. ಅಲ್ಲದೇ ಫ್ಲಿಪ್ ಕಾರ್ಟ್ನಲ್ಲಿ ಇದೇ ರೀತಿಯ ಪ್ರಕರಣ ಕಂಡುಬಂದಿದೆ. ಹೀಗಾಗಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಪ್ರಾಧಿಕಾರವು ಕ್ರಮ ತೆಗೆದುಕೊಂಡಿದ್ದು ನೋಟೀಸ್ ನೀಡಿದೆ.