ಇಂದಿನ ಹಣಾಹಣಿ ವಾರಿಯರ್ಸ್ ಪ್ಯಾಂಥರ್ಸ ಮಧ್ಯೆ

1 min read
ProKabaddi Saakasha TV

ಇಂದಿನ ಹಣಾಣಿ ವಾರಿಯರ್ಸ್ ಪ್ಯಾಂಥರ್ಸ ಮಧ್ಯೆ

ಪ್ರೊ ಕಬಡ್ಡಿ ಟೂರ್ನಿಯಲ್ಲಿ ಇಂದು ಸಮಾನ ಮನಸ್ಕರ ನಡುವೆ ಕಾದಾಟ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ 30ನೇ ಪಂದ್ಯದಲ್ಲಿ ಬೆಂಗಾಳ ವಾರಿಯರ್ಸ್ ಹಾಗೂ ಜೈಪುರ್ ಪಿಂಕ್ ಪ್ಯಾಥರ್ಸ್ ತಂಡಗಳು ಕಾದಾಟ ನಡೆಸಲಿವೆ.

ಉಭಯ ತಂಡಗಳು ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಹೊಂದಿವೆ. ಜೈಪುರ್ ಆಡಿದ 4 ಪಂದ್ಯಗಳಲ್ಲಿ 2 ಜಯ, 2 ಸೋಲು ಕಂಡಿದ್ದು 11 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಬೆಂಗಾಳ ವಾರಿಯರ್ಸ್ ಹ್ಯಾಟ್ರಿಕ್ ಸೋಲಿನ ಕಹಿಯನ್ನು ಕಂಡಿದ್ದು ಗೆಲುವಿನ ಟ್ರ್ಯಾಕ್ ಗೆ ಮರಳಲು ಪ್ಲಾನ್ ಮಾಡಿಕೊಂಡಿದೆ. ಸದ್ಯ ಬೆಂಗಾಳ 11 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಉಭಯ ತಂಡಗಳು ಒಟ್ಟಾರೆ 12 ಬಾರಿ ಮುಖಾಮುಖಿಯಾಗಿದ್ದು, ಬೆಂಗಾಳ ಎಂಟು ಬಾರಿ ಜಯ ಸಾಧಿಸಿದೆ. ಜೈಪುರ್ ನಾಲ್ಕರಲ್ಲಿ ಗೆಲುವು ದಾಖಲಿಸಿದೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಿಷ್ಠವಾಗಿವೆ. ಸ್ಟಾರ್ ರೈಡರ್ ಮಣೀಂದರ್ ಸಿಂಗ್ ಬೆಂಗಾಳ ಪರ ಗರಿಷ್ಠ ಅಂಕ ಸೇರಿಸಿದ್ದಾರೆ. ಇವರು ಐದು ಪಂದ್ಯಗಳಲ್ಲಿ 46 ಅಂಕ ಸೇರಿಸಿದ್ದಾರೆ. ಇನ್ನು ಜೈಪುರ ಪರ ಅರ್ಜುನ್ ದೆಶ್ವಾಲ್ ಆಡಿದ 4 ಪಂದ್ಯಗಳಲ್ಲಿ 41 ಅಂಕ ಸೇರಿಸಿದ್ದಾರೆ. ಬೆಂಗಾಳ ಆಡಿದ ಐದು ಪಂದ್ಯಗಳಲ್ಲಿ 169 ಅಂಕ ಕಲೆಹಾಕಿಕೊಂಡಿದೆ. ಜೈಪುರ್ ಆಡಿದ ನಾಲ್ಕು ಪಂದ್ಯಗಳಲ್ಲಿ 127 ಅಂಕ ಕಲೆ ಹಾಕಿದೆ. ಟ್ಯಾಕಲ್ ನಲ್ಲೂ ಬೆಂಗಳಾ ಉತ್ತಮವಾಗಿದೆ. ವಾರಿಯರ್ಸ್ ಐದು ಪಂದ್ಯಗಳಲ್ಲಿ 37 ಅಂಕ ಸೇರಿಸಿದ್ದು, ಜೈಪುರ್ ಈ ವಿಭಾಗದಲ್ಲಿ 30 ಅಂಕ ಸೇರಿಸಿದೆ.

ಬೆಂಗಾಳ ವಾರಿಯರ್ಸ್ ತಂಡದ ದರ್ಶನ್ 9 ಬಾರಿ ಎದುರಾಳಿಗಳನ್ನು ಕಟ್ಟಿಹಾಕಿದ್ದಾರೆ. ಇವರು ಒಟ್ಟಾರೆ ಟೂರ್ನಿಯಲ್ಲಿ 53 ಅಂಕಗಳನ್ನು ಕಲೆ ಹಾಕಿದ್ದಾರೆ. ಉಳಿದಂತೆ ದೀಪಕ್ ಹೂಡಾ 27 ಅಂಕ ಸೇರಿಸಿದರೆ, ಟ್ಯಾಕಲ್ ನಲ್ಲಿ ವಿಶಾಲ್ ಏಳು ಅಂಕ ಪಡೆದುಕೊಂಡಿದ್ದಾರೆ. ಬೆಂಗಾಲ್ ತಂಡದ ಪರ ಕನ್ನಡಿಗ ಸುಖೇಶ್ ಹೆಗಡ್ ಸಹ ಮನಮೋಹಕ ಫಾರ್ಮ್ ನಲ್ಲಿದ್ದು 21 ಅಂಕ ತಮ್ಮದಾಗಿಸಿಕೊಂಡಿದ್ದಾರೆ.

ಜೈಪುರ್ ಕಳೆದ ಪಂದ್ಯದಲ್ಲಿ ಯು-ಮುಂಬಾ ವಿರುದ್ಧ ನಿರಾಸೆ ಕಂಡಿತ್ತು. ಈ ಸೋಲಿನ ಕಹಿಯನ್ನು ಕಳೆಯಲು ಪಿಂಕ್ ಪ್ಯಾಂಥರ್ಸ್ ಪ್ಲಾನ್ ಮಾಡಿಕೊಂಡಿದೆ. ಇನ್ನು ಮಾಜಿ ಚಾಂಪಿಯನ್ ಬೆಂಗಾಳ, ಪಾಟ್ನಾ ಪೈರೇಟ್ಸ್ ವಿರುದ್ಧ ಸೋಲು ಕಂಡಿದ್ದು ಜಯದ ಹುಡುಕಾಟ ನಡೆಸಿದೆ.

ಜೈಪುರ ಪಿಂಕ್ ಪ್ಯಾಂಥರ್ಸ್ ಅರ್ಜುನ್ ದೇಶ್ವಾಲ, ದೀಪಕ ನಿವಾಸ ಹೂಡಾ, ಸಂದೀಪ ಕುಮಾರ ಧುಲ, ನವೀನ, ಧರ್ಮರಾಜ್ ಚೇರಲಾಥನ, ಅಮಿತ ಹೂಡಾ, ಅಮೀರ್ ಹುಸೇನ್ ಮೊಹಮ್ಮದ ಮಾಲೆಕಿ, ಮೊಹಮ್ಮದ ಅಮೀನ್ ನೊಸ್ರತಿ, ಅಮಿತ, ಶಾವುಲ ಕುಮಾರ, ಅಮಿತ ನಗರ, ಅಶೋಕ್ ವಿಶಾಲ, ನಿತಿನ ರಾವಲ, ಪವನ ನರ, ಪವನ ಟಿ.ಆರ, ಸಚಿನ್ ನರ್. ಸುಶೀಲ್ ಗುಲಿಯಾ, ಇಳವರಸನ ಎ. ಗಟಾನುಗಟಿಗಳನ್ನು ಹೊಂದಿದೆ

ಇನ್ನೂ ಬೆಂಗಾಲ್ ವಾರಿಯರ್ಸ್ ನಲ್ಲಿ ಮಣಿಂದರ್ ಸಿಂಗ್, ರವೀಂದ್ರ ಕುಮಾವತ್, ಸುಕೇಶ್ ಹೆಗ್ಡೆ, ಸುಮಿತ್ ಸಿಂಗ್, ಆಕಾಶ್ ಪಿಕಾಲ್ಮುಂಡೆ, ರಿಶಾಂಕ್ ದೇವಾಡಿಗ, ರಿಂಕು ನರ್ವಾಲ್, ಅಬೋಜರ್ ಮೊಹಜರ್ ಮಿಘಾನಿ, ವಿಜಿನ್ ತಂಗದುರೈ, ಪರ್ವೀನ್, ರೋಹಿತ್ ಬನ್ನೆ, ದರ್ಶನ್ ಜೆ, ಸಚಿನ್ ವಿಟ್ಟಲಾ, ಮನ್ಬಿಹಮ್ಮದ್, ಮೊಹಮ್ಮದ್ ಇಶ್ಮೇಲ್, ರೋಹಿತ್ ಆಟಗಾರರು ಇಂದಿನ ಪಂದ್ಯದಲ್ಲಿ ಮಿಂಚಲಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd