ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ ಅವರು ನಟ ವಿಜಯ್ ದೇವರಕೊಂಡ ಅವರ ದೃಷ್ಟಿ ತೆಗೆದಿದ್ದಾರೆ.
ಈ ಜೋಡಿಯ ನಟನೆಯ ‘ಫ್ಯಾಮಿಲಿ ಸ್ಟಾರ್’ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು, ಪ್ರಚಾರ ಕಾರ್ಯದಲ್ಲಿ ನಾಯಕಿ ಮೃಣಾಲ್ ಅವರು ವಿಜಯ್‌ಗೆ ದೃಷ್ಟಿ ತೆಗೆದಿದ್ದಾರೆ. ಈ ನಡೆ ಎಲ್ಲರ ಗಮನ ಸೆಳೆದಿದೆ. ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತ ವೇದಿಕೆಯಲ್ಲಿಯೇ ವಿಜಯ್‌ಗೆ ಮೃಣಾಲ್ ದೃಷ್ಟಿ ತೆಗೆದಿದ್ದಾರೆ
ಮುಂಬೈ ಬೆಡಗಿ ಮೃಣಾಲ್ ‘ಸೀತಾರಾಮಂ’ ಸಿನಿಮಾದಿಂದ ಟಾಲಿವುಡ್ ನತ್ತ ಮುಖ ಮಾಡಿದ್ದರು. ‘ಹಾಯ್ ನಾನಾ’ ಸಿನಿಮಾದಲ್ಲಿ ನಾಯಕಿಯಾದರು. ಈ 2 ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್ ಆಗಿತ್ತು. ಸದ್ಯ 3ನೇ ಚಿತ್ರ ಫ್ಯಾಮಿಲಿ ಸ್ಟಾರ್ ಮೂಲಕ ಮತ್ತೆ ತೆಲುಗಿನಲ್ಲಿ ಸದ್ದು ಮಾಡುತ್ತಿದ್ದಾರೆ.ಸಂದರ್ಶನವೊಂದರಲ್ಲಿ ಮೃಣಾಲ್ ಸೌಂದರ್ಯದ ಬಗ್ಗೆ ವಿಜಯ್ ಬಣ್ಣಿಸಿದ್ದರು. ಮೃಣಾಲ್‌ಗೆ ಚಿಕ್ಕ ವಯಸ್ಸಿನಿಂದಲೂ ನಟನೆ ಎಂದರೆ ತುಂಬಾ ಇಷ್ಟ. ಭಾಷೆ ತಿಳಿಯದಿದ್ದರೂ ಅದನ್ನು ಅರಿತು ಚೆನ್ನಾಗಿ ನಟಿಸುತ್ತಾರೆ ಎಂದು ಹೇಳಿದ್ದರು.
ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕ ಪರಶುರಾಮ್ ಮತ್ತು ಮೃಣಾಲ್ ಠಾಕೂರ್ ನನಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ವಿಜಯ್ ಹೇಳಿದ್ದಾರೆ.