ನಟ ಪ್ರಭಾಸ್ (Prabhas) ಹಾಗೂ ಅನುಷ್ಕಾ ಶೆಟ್ಟಿ (Anushka Shetty) ಒಂದಾಗುತ್ತಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
6 ವರ್ಷಗಳ ನಂತರ ಡಾರ್ಲಿಂಗ್ ಹಾಗೂ ಸ್ವೀಟಿ ತೆರೆಯ ಮೇಲೆ ಜೋಡಿಯಾಗುತ್ತಿದ್ದು, ಒಡಿಶಾದಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ ಎನ್ನಲಾಗುತ್ತಿದೆ. ರಮ್ಯಾಕೃಷ್ಣ (Ramyakrishna) ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ಹೋಂ ಬ್ಯಾನರ್ ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ಸದ್ಯದಲ್ಲಿಯೇ ಈ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. 10 ದಿನಗಳ ಕಾಲ ಅನುಷ್ಕಾ ಶೆಟ್ಟಿ ಹಾಗೂ ರಮ್ಯಾಕೃಷ್ಣ ಭಾಗದ ಚಿತ್ರೀಕರಣ ಒಡಿಶಾದಲ್ಲಿ ಶೂಟಿಂಗ್ ನಡೆಯಲಿದೆ.
ಚಿತ್ರೀಕರಣಕ್ಕೆ ಹೋಗುವಾಗ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ವೀಟಿಯನ್ನು ನೋಡಲು ಹೋಟೆಲ್ ಬಳಿ ಜಮಾಯಿಸಿದ್ದರು. 2017ರಲ್ಲಿ ಬಾಹುಬಲಿ- 2ನಲ್ಲಿ ಪ್ರಭಾಸ್- ಅನುಷ್ಕಾ ಶೆಟ್ಟಿ ಕಡೆಯದಾಗಿ ಕಾಣಿಸಿಕೊಂಡಿದ್ದರು. ನಂತರ ಈ ಜೋಡಿ ಒಂದಾಗಿರಲಿಲ್ಲ.