ಬಿಡುಗಡೆಯಾದ ಮೂರೇ ದಿನಗಳಲ್ಲಿ ಆರ್ಟಿಕಲ್ 370 ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ನಟಿ ಯಾಮಿ ಗೌತಮ್ ಪ್ರಮುಖ ಪಾತ್ರದಲ್ಲಿ ಮೂಡಿ ಬಂದಿರುವ ಚಿತ್ರದಲ್ಲಿ ಪ್ರಿಯಾಮಣಿ ಕೂಡ ನಟಿಸಿದ್ದಾರೆ. ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಘಟನೆಗಳನ್ನೇ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಸದ್ಯ ಈ ಚಿತ್ರ ಜನರ ಮನ ಗೆದ್ದಿದ್ದು, ಉತ್ತಮ ಕಲೆಕ್ಷನ್ ಮಾಡುತ್ತಿದೆ.
ಮೊದಲ ದಿನ ಈ ಚಿತ್ರಕ್ಕೆ 6.12 ಕೋಟಿ ರೂ. ಗಳಿಸಿತ್ತು. ಎರಡನೇ ದಿನ 9.08 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದಿತ್ಯ ಸುಹಾಸ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮೂರನೇ ದಿನ 10.25 ಕೋಟಿ ರೂ. ಗಳಿಸಿದೆ. ಸೋಮವಾರ ಕೂಡ ಹಲವು ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ.
ಈ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾತ್ರಕ್ಕೆ ಹಿರಿಯ ನಟ ಅರುಣ್ ಗೋವಿಲ್ ಬಣ್ಣ ಹಚ್ಚಿದ್ದಾರೆ.