ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದುಬಾರಿಯ ಆಡಿ Q7 ಕಾರು ಖರೀದಿಸಿದ್ದಾರೆ.
ಸದ್ಯ ಅಪ್ಪು ಮನೆಗೆ ಎಂಟ್ರಿ ಕೊಟ್ಟಿರುವ ಐಷಾರಾಮಿ ಕಾರಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಪ್ಪು ನಮ್ಮನ್ನು ಅಗಲಿ ಹೋದ ನಂತರ ಉಳಿದ ಹಾಗೂ ಅರ್ಧಕ್ಕೆ ನಿಂತಿರುವ ಕೆಲಸಗಳನ್ನು ಅವರ ಪತ್ನಿ ಅಶ್ವಿನಿ ಪೂರ್ಣಗೊಳಿಸುತ್ತಿದ್ದಾರೆ.
ಪಿಆರ್ ಕೆ ಸಂಸ್ಥೆಯಿಂದ ನಡೆಯಬೇಕಾಗಿರುವ ಎಲ್ಲ ಕಾರ್ಯಗಳನ್ನು ಅವರು ಮಾಡುತ್ತಿದ್ದಾರೆ. ಸದ್ಯ ಐಷಾರಾಮಿ ಕಾರು ಖರೀದಿಸುವ ಮೂಲಕ ಪುನೀತ್ ಪತ್ನಿ ಮತ್ತೆ ಸುದ್ದಿಯಾಗಿದ್ದಾರೆ. ಇದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಮನೆಯಲ್ಲಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಸದ್ಯ ಈ ಸಾಲಿಗೆ ಮತ್ತೊಂದು ವಾಹನ ಬಂದು ನಿಂತಿದೆ. ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಇದು ಕೂಡ ಒಂದು. ವಿನ್ಯಾಸ, ಲುಕ್, ಪರ್ಫಾಮೆನ್ಸ್, ಟೆಕ್ನಾಲಜಿ ಹೀಗೆ ಎಲ್ಲಾ ವಿಚಾರದಲ್ಲೂ ಆಡಿ ಕ್ಯೂ7 ಇತರ ಕಾರಗಳಿಗಿಂತ ಬಹಳ ವಿಭಿನ್ನವಾಗಿದೆ. ಈ ಕಾರು ಸಾಕಷ್ಟು ಸೌಲಭ್ಯಗಳನ್ನು ಹೊಂದಿದೆ. ಆಡಿ Q7 ಕಾರು 90 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಮಾರಾಟವಾಗುತ್ತಿದೆ.