ಬರೋಬ್ಬರಿ 14 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಜಾಕಿ ಸಿನಿಮಾ ಮತ್ತೊಮ್ಮೆ ತೆರೆಗ ಬಂದಿದೆ.
ಜಾಕಿ’ ಸಿನಿಮಾವನ್ನು ಅಭಿಮಾನಿಗಳು ಮತ್ತೆ ದೊಡ್ಡ ಪರದೆ ಮೇಲೆ ನೋಡಿ ಕುಣ್ತುಂಬಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ ಪುನೀತ್ ರನ್ನು ಕಳೆದುಕೊಂಡ ನೋವು ಎಲ್ಲರನ್ನೂ ಕಾಡುತ್ತಿದೆ. ಅಭಿಮಾನಿಗಳ ಜೊತೆ ಅಶ್ವಿನಿ ಪುನೀತ್ ರಾಜ್ಕುಮಾರ್ ಸಿನಿಮಾ ನೋಡಲು ಬಂದಿದ್ದರು. ಈ ವೇಳೆ ‘ಪವರ್ ಸ್ಟಾರ್’ಗೆ ಎಲ್ಲರೂ ಜೈಕಾರ ಹಾಕಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ಕಂಡು ಅಶ್ವಿನಿ ಭಾವುಕರಾಗಿದ್ದಾರೆ. ಪುನೀತ್ ಜನ್ಮ ದಿನದ ಹಿನ್ನೆಲೆಯಲ್ಲಿ ಜಾಕಿ ಚಿತ್ರವನ್ನು ಮತ್ತೊಮ್ಮೆ ರಿಲೀಸ್ ಮಾಡಲಾಗಿದೆ. ಸದ್ಯ ಇದು ಪ್ರದರ್ಶನ ಕಾಣುತ್ತಿದೆ.