‘ಮುಸ್ಲಿಮರು, ಕ್ರೈಸ್ತರು ಹಿಂದೂಗಳೇ ಆಗಿದ್ದರು’ : ಹಿಮಂತ ಬಿಸ್ವಾ ಶರ್ಮಾ
ಭಾರತದಲ್ಲಿರುವ ಎಲ್ಲಾ ಮುಸ್ಲಿಮರು , ಕ್ರೈಸ್ತರು ಅನೇಕ ಶತಮಾನಗಳ ಹಿಂದೆ ಹಿಂದೂಗಳೇ ಆಗಿದ್ದರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಪಾದಿಸಿದ್ದಾರೆ. ರಾಜೋರಿ ದಳದ ಶಾಸಕ ಅಖಿಲ್ ಗೊಗೊಯಿ ಜತೆಗಿನ ವಾಗ್ವಾದವನ್ನ ಮುಂದುವರೆಸಿದ್ದಾರೆ..
ಅಂದ್ಹಾಗೆ ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ಅಸ್ಸಾಮಿ ಜನರಿಗೆ ಪ್ರಾತಿನಿಧ್ಯ ಇರಲಿಲ್ಲ. ಬಿಜೆಪಿ ನಾಯಕ ಶ್ಯಾಂ ಪ್ರಸಾದ್ ಮುಖರ್ಜಿ ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಅಸ್ಸಾಮಿ ಭಾಷೆಗೆ ಪ್ರತ್ಯೇಕ ಭಾಷೆಯ ಸ್ಥಾನಮಾನ ನೀಡಿದ್ದರು ಎಂದು ಹಿಮಂತ ಬಿಸ್ವಾ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಖಿಲ್ ಗೊಗೊಯಿ, ಮುಖ್ಯಮಂತ್ರಿ ಹೇಳುತ್ತಿರುವ ಮಾತಿನಲ್ಲಿ ಸತ್ಯ ಇಲ್ಲ. ಅಸ್ಸಾಂ ಜನರ ಅಸ್ಮಿತೆಯನ್ನು ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತಗಳಿಗೆ ಅಡವಿಡಲಾಗುತ್ತಿದೆ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರತಿಕ್ರಿಯೆ ನೀಡಿ ಭಾರತದಲ್ಲಿರುವ ಎಲ್ಲಾ ಮುಸ್ಲಿಮರು , ಕ್ರೈಸ್ತರು ಅನೇಕ ಶತಮಾನಗಳ ಹಿಂದೆ ಹಿಂದೂಗಳೇ ಆಗಿದ್ದರು ಎಂದು ಹೇಳಿಕೊಂಡಿದ್ದಾರೆ.
ಅಮೆರಿಕಾದ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ 6 ಗಂಟೆ ಕಾಲ ಕಾದು ಮತದಾನ ಮಾಡಿದ್ದವ ಅರೆಸ್ಟ್
ದಲಿತ ಕುಟುಂಬದ ಹತ್ಯೆ : ಸಿಬಿಐ ತನಿಖೆಗೆ ಚಂದ್ರಶೇಖರ್ ಆಜಾದ್ ಆಗ್ರಹ
ಕೊರೊನಾ ರಿಪೋರ್ಟ್ : ಕಳೆದ 24 ಗಂಟೆಗಳಲ್ಲಿ 41,506 ಕೇಸ್ ಪತ್ತೆ