ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್ ವಿಶ್ವಕಪ್ 2023

AUS v SL: ಇಂದು ಸೋತವರ ಸಮರ: ಕಾಂಗರೂಗಳಿಗೆ ಸಿಂಹಳೀಯರ ಸವಾಲು

ಮೊದಲ ಗೆಲುವಿನ ಹುಡುಕಾಟದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ

C Dinesh by C Dinesh
October 16, 2023
in ಕ್ರಿಕೆಟ್ ವಿಶ್ವಕಪ್ 2023
Australia vs Sri Lanka

Australia vs Sri Lanka

Share on FacebookShare on TwitterShare on WhatsappShare on Telegram

ಏಕದಿನ ವಿಶ್ವಕಪ್‌ನಲ್ಲಿ ಸತತ ಎರಡು ಪಂದ್ಯಗಳನ್ನ ಸೋತು ನೀರಸ ಆರಂಭ ಪಡೆದಿರುವ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಇಂದು ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳ ನಡುವಿನ ಈ ಪಂದ್ಯಕ್ಕಾಗಿ ಲಕ್ನೋದ ಏಕನಾ ಮೈದಾನ ಸಜ್ಜಾಗಿದೆ.

ಏಕದಿನ ವಿಶ್ವಕಪ್‌ನಲ್ಲಿ ಐದು ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮದೇ ಪ್ರಾಬಲ್ಯ ಹೊಂದಿರುವ ಆಸೀಸ್‌ ಪಡೆ ಈ ಬಾರಿಯ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿದ್ದ ಕಾಂಗರೂಗಳು, ಎರಡನೇ ಪಂದ್ಯದಲ್ಲಿ ಸೌತ್‌ ಆಫ್ರಿಕಾ ವಿರುದ್ದ ಕೂಡ ಸೋಲಿನ ಆಘಾತ ಕಂಡಿದೆ. ಹೀಗಾಗಿ ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಆಸೀಸ್‌ ತಂಡಕ್ಕೆ ಲಂಕಾ ವಿರುದ್ಧದ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

Australia

ಪ್ಯಾಟ್‌ ಕಮ್ಮಿನ್ಸ್‌ ಸಾರಥ್ಯದಲ್ಲಿ ಕಣಕ್ಕಿಳಿದಿರುವ ಆಸೀಸ್‌, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಬಲಿಷ್ಠ ಆಟಗಾರರ ಪಡೆಯನ್ನೇ ಹೊಂದಿದ್ದರು ನಿರೀಸ ಪ್ರದರ್ಶನದಿಂದ ಸೋಲಿನ ಸುಳಿಗೆ ಸಿಲುಕಿಕೊಂಡಿದೆ. ಟೂರ್ನಿಯ ಸೆಮೀಸ್‌ ಪ್ರವೇಶಿಸುವ ಅವಕಾಶ ಜೀವಂತ ಇರಬೇಕಾದರೆ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಒಂದೊಮ್ಮೆ ಲಂಕಾ ವಿರುದ್ಧದ ಈ ಪಂದ್ಯದಲ್ಲೂ ಕಾಂಗರೂಗಳಿಗೆ ಸೋಲು ಎದುರಾದಲ್ಲಿ, ಬಹುತೇಕ ಲೀಗ್‌ ಹಂತದಲ್ಲೇ ಹೊರಬೀಳಬೇಕಾಗುತ್ತದೆ ದುಸ್ಥಿತಿ ಎದುರಾಗಲಿದೆ. ಈ ಕಾರಣದಿಂದಾಗಿ ಆಸೀಸ್‌ ಆಟಗಾರರು ಕಳಪೆ ಪ್ರದರ್ಶನದಿಂದ ಹೊರ ಬರಬೇಕಾದ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ.

Related posts

IND v AUS: ವಿಶ್ವಕಪ್‌ 2023ರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದ ವಿರಾಟ್‌ ಕೊಹ್ಲಿ

IND v AUS: ವಿಶ್ವಕಪ್‌ 2023ರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದ ವಿರಾಟ್‌ ಕೊಹ್ಲಿ

November 19, 2023
IND v AUS: ಟ್ರಾವಿಸ್‌ ಹೆಡ್‌ ಬೊಂಬಾಟ್‌ ಶತಕ: 6ನೇ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ

IND v AUS: ವಿಶ್ವಕಪ್‌ ಫೈನಲ್‌ನಲ್ಲಿ ಆಸೀಸ್‌ ಪರ ಶತಕದ ಸಿಡಿಸಿದ 3ನೇ ಆಟಗಾರ ಟ್ರಾವಿಸ್‌ ಹೆಡ್‌

November 19, 2023

ಲಂಕಾಗೂ ಗೆಲುವು ಅನಿವಾರ್ಯ:
ಆಸೀಸ್‌ ತಂಡಕ್ಕೆ ಸವಾಲು ನೀಡಲು ಸಜ್ಜಾಗಿರುವ ಶ್ರೀಲಂಕಾ ತಂಡದ ಸ್ಥಿತಿ ಕೂಡ ಇದೇ ರೀತಿಯಲ್ಲಿದೆ. ಟೂರ್ನಿಯಲ್ಲಿ ಸದ್ಯ ಆಡಿರುವ ಎರಡು ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿರುವ ಲಂಕನ್ನರಿಗೂ ಗೆಲುವು ಅನಿವಾರ್ಯವಾಗಿದೆ. ಮೊದಲ ಪಂದ್ಯದಲ್ಲಿ ಸೌತ್‌ ಆಫ್ರಿಕಾ ವಿರುದ್ಧ 102 ರನ್‌ಗಳ ಭಾರೀ ಅಂತರದ ಸೋಲು ಕಂಡಿದ್ದ ಶ್ರೀಲಂಕಾ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ಸೋಲು ಕಂಡಿದೆ. ಹೀಗಾಗಿ ವಿಶ್ವಕಪ್‌ ಗೆಲ್ಲುವ ರೇಸ್‌ನಲ್ಲಿ ಜೀವಂತ ಇರಬೇಕಾದರೆ ಲಂಕಾ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ.

Sri Lanka

ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿರುವ ಶ್ರೀಲಂಕಾ, ತನ್ನ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕಿದೆ. ತಂಡ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು, ಬೌಲಿಂಗ್‌ನಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಸಾಧ್ಯವಾಗಿಲ್ಲ. ತಂಡದ ಬ್ಯಾಟಿಂಗ್‌ನಲ್ಲಿ ಕುಸಲ್​ ಮೆಂಡೀಸ್​, ಪತುಮ್‌ ನಿಸ್ಸಾಂಕ, ಚರಿತ್ ಅಸಲಂಕ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಪ್ರಮುಖ ಬೌಲರ್‌ಗಳಾದ ಮಹೀಶ ತೀಕ್ಷಣ, ಮತೀಶ ಪತಿರಾಣ, ಕಸುನ್‌ ರಜಿತ ಅವರುಗಳಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಇದು ಶ್ರೀಲಂಕಾ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ನಡುವೆ ತಂಡದ ನಾಯಕ ದಸುನ್ ಶನಕ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದು ಸೋಲಿನ ಸುಳಿಗೆ ಸಿಲುಕಿರುವ ಲಂಕಾ ಪಡೆಗೆ ಮತ್ತೊಂದು ಆಘಾತ ನೀಡಿದೆ.

ತಂಡಗಳ ಮುಖಾಮುಖಿ:
ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ 103 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 63 ಪಂದ್ಯಗಳಲ್ಲಿ ಗೆದ್ದು ಬೀಗಿದ್ದರೆ. ಶ್ರೀಲಂಕಾ 36 ಪಂದ್ಯಗಳಲ್ಲಿ ಜಯದ ನಗೆ ಬೀರಿದೆ. 4 ಪಂದ್ಯಗಳು ಯಾವುದೇ ಫಲಿತಾಂಶ ಕಂಡಿಲ್ಲ. ಇನ್ನೂ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳು 10 ಪಂದ್ಯಗಳಲ್ಲಿ ಹಣಾಹಣಿ ನಡೆಸಿದ್ದು, 8 ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದರೆ. 1 ಬಾರಿ ಶ್ರೀಲಂಕಾ ಜಯ ಸಾಧಿಸಿದೆ. 1 ಪಂದ್ಯ ಫಲಿತಾಂಶ ಕಂಡಿಲ್ಲ.

ಸಂಭಾವ್ಯ ತಂಡಗಳು:
ಶ್ರೀಲಂಕಾ:
ಕುಸಾಲ್ ಪೆರೇರಾ, ಪತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿಸಿಲ್ವ, ದುನಿತ್ ವೆಲ್ಲಲಗೆ, ದಿಲ್ಶನ್ ಮಧುಶಂಕ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತ, ಮಥೀಶ ಪತಿರಣ.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್​, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೋಯ್ನಿಸ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಜೋಶ್ ಹೇಜಲ್​ವುಡ್.

AUS v SL, Australia, Sri Lanka, World Cup, ODI Cricket

Tags: AUS v SLAustraliaODI cricketSri LankaWorld Cup
ShareTweetSendShare
Join us on:

Related Posts

IND v AUS: ವಿಶ್ವಕಪ್‌ 2023ರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದ ವಿರಾಟ್‌ ಕೊಹ್ಲಿ

IND v AUS: ವಿಶ್ವಕಪ್‌ 2023ರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದ ವಿರಾಟ್‌ ಕೊಹ್ಲಿ

by C Dinesh
November 19, 2023
0

ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸರ್ವಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಮಿಂಚಿದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ, 2023ರ ವಿಶ್ವಕಪ್‌ನ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರಸಕ್ತ...

IND v AUS: ಟ್ರಾವಿಸ್‌ ಹೆಡ್‌ ಬೊಂಬಾಟ್‌ ಶತಕ: 6ನೇ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ

IND v AUS: ವಿಶ್ವಕಪ್‌ ಫೈನಲ್‌ನಲ್ಲಿ ಆಸೀಸ್‌ ಪರ ಶತಕದ ಸಿಡಿಸಿದ 3ನೇ ಆಟಗಾರ ಟ್ರಾವಿಸ್‌ ಹೆಡ್‌

by C Dinesh
November 19, 2023
0

ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ನಿಂದ ಮಿಂಚಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಟ್ರಾವಿಸ್‌ ಹೆಡ್‌(137) ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು. ಅಲ್ಲದೇ ತಮ್ಮ ಈ ಪ್ರದರ್ಶನದ...

IND v AUS: ವಿಶ್ವಕಪ್‌ ಫೈನಲ್‌ ಸೋಲು: ಮೈದಾನದಲ್ಲೇ ಕಣ್ಣೀರಿಟ್ಟ ಆಟಗಾರರು

IND v AUS: ವಿಶ್ವಕಪ್‌ ಫೈನಲ್‌ ಸೋಲು: ಮೈದಾನದಲ್ಲೇ ಕಣ್ಣೀರಿಟ್ಟ ಆಟಗಾರರು

by C Dinesh
November 19, 2023
0

ಕೋಟ್ಯಾಂತರ ಕ್ರಿಕೆಟ್‌ ಪ್ರೇಮಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದ್ದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಸೋಲಿನ ಆಘಾತದೊಂದಿಗೆ ಟೀಂ ಇಂಡಿಯಾದ ಪ್ರಶಸ್ತಿ ಗೆಲುವಿನ ಕನಸು...

IND v AUS: ಟ್ರಾವಿಸ್‌ ಹೆಡ್‌ ಬೊಂಬಾಟ್‌ ಶತಕ: 6ನೇ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ

IND v AUS: ಟ್ರಾವಿಸ್‌ ಹೆಡ್‌ ಬೊಂಬಾಟ್‌ ಶತಕ: 6ನೇ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ

by C Dinesh
November 19, 2023
0

ಆರಂಭಿಕ ಬ್ಯಾಟರ್‌ ಟ್ರಾವಿಸ್‌ ಹೆಡ್‌(137) ಬೊಂಬಾಟ್‌ ಶತಕ ಹಾಗೂ ಮಾರ್ನಸ್‌ ಲಬುಶೇನ್‌(58*) ಜವಾಬ್ದಾರಿಯ ಬ್ಯಾಟಿಂಗ್‌ನಿಂದ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವನ್ನ 6 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ...

IND v AUS: ವಿಶ್ವಕಪ್‌ ಸೆಮೀಸ್‌/ಫೈನಲ್‌ನಲ್ಲಿ ಅರ್ಧಶತಕ: ಭಾರತದ ಪರ ದಾಖಲೆ ಬರೆದ ಕೊಹ್ಲಿ

IND v AUS: ವಿಶ್ವಕಪ್‌ ಸೆಮೀಸ್‌/ಫೈನಲ್‌ನಲ್ಲಿ ಅರ್ಧಶತಕ: ಭಾರತದ ಪರ ದಾಖಲೆ ಬರೆದ ಕೊಹ್ಲಿ

by C Dinesh
November 19, 2023
0

ವಿಶ್ವ ಕ್ರಿಕೆಟ್‌ನ ದಾಖಲೆಗಳ ಸರದಾರ ಎನಿಸಿರುವ ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ, ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಮತ್ತೊಂದು ದಾಖಲೆ ಬರೆದಿದ್ದಾರೆ. ಅಹ್ಮದಾಬಾದ್‌ನಲ್ಲಿ ನಡೆದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram