ನಿರ್ದೇಶಕ ರಾಜಮೌಳಿ ಅವರ ಆಪ್ತ ಸಿನಿಮಾಟೊಗ್ರಾಫರ್ ಕೆ.ಕೆ. ಸೆಂಥಿಲ್ ಕುಮಾರ್ ಅವರ ಪತ್ನಿ ನಿಧನರಾಗಿದ್ದಾರೆ.
ಪತ್ನಿ ರೂಹಿ ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಸಿಖಂದರಾಬಾದ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸೆಂಥಿಲ್ ಕುಮಾರ್ ಹಾಗೂ ರೂಹಿ 2009 ರಲ್ಲಿ ವಿವಾಹವಾಗಿದ್ದರು. ರೂಹಿ ಯೋಗ ಶಿಕ್ಷಕಿಯಾಗಿ ಕೆಲವು ಟಾಲಿವುಡ್ ನಟಿಯರಿಗೂ ಯೋಗ ತರಬೇತಿ ನೀಡುತ್ತಿದ್ದರು.
ಟಾಲಿವುಡ್ನ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಜೊತೆಗೆ ಹಲವು ವರ್ಷಗಳ ಕಾಲ ರೂಹಿ ಕೆಲಸ ಮಾಡಿದ್ದರು. ರೂಹಿಗೆ 2019ರಲ್ಲಿ ಕೋವಿಡ್ ಕಂಡು ಬಂದಿತ್ತು. ಆಗಿನಿಂದಲೂ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಇತ್ತೀಚೆಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.