‘ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ನಡೆಸಿದ್ದ ನರಮೇಧವನ್ನು ವಿಶ್ವಸಂಸ್ಥೆ ಗುರುತಿಸಬೇಕು’

1 min read

‘ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ನಡೆಸಿದ್ದ ನರಮೇಧವನ್ನು ವಿಶ್ವಸಂಸ್ಥೆ ಗುರುತಿಸಬೇಕು’

ಕಾಶ್ಮೀರದಿಂದ ಗಡಿಪಾರಾಗಿರುವ ನಾಯಕ ಸರ್ದಾರ್‌ ಶೌಕತ್‌ ಅಲಿ ಅವರು 1971ರಲ್ಲಿ ನಡೆದ ಬಾಂಗ್ಲಾದೇಶ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಪಾಕಿಸ್ತಾನ ನಡೆಸಿದ ನರಮೇಧವನ್ನು ವಿಶ್ವಸಂಸ್ಥೆ ಹಾಗೂ ಇತರ ಅಂತರರಾಷ್ಟ್ರೀಯ ಸಂಘಟನೆಗಳು ಗುರುತಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ ಈ ಅಪರಾಧಕ್ಕಾಗಿ ಪಾಕಿಸ್ತಾನವು ಕ್ಷಮೆಯಾಚಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಯುನೈಟೆಡ್‌ ಕಾಶ್ಮೀರ ಪೀಪಲ್ಸ್‌ ನ್ಯಾಷನಲ್‌ ಪಾರ್ಟಿಯ ಮುಖ್ಯಸ್ಥ ಅಲಿ ಬಾಂಗ್ಲಾ ಸಮುದಾಯದವರು ಜಿನಿವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿ ಎದುರು ನಡೆಸಿದ ಪ್ರತಿಭಟನೆ ವೇಳೆ ಈ ಹೇಳಿಕೆ ನೀಡಿದ್ಧಾರೆ.

ಬಾಂಗ್ಲಾದಲ್ಲಿ ದಂಗೆಯನ್ನು ಹತ್ತಿಕ್ಕುವ ಸಲುವಾಗಿ ಪಾಕ್‌ ಸೇನೆಯು ನಾಗರಿಕರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಮೃತಪಟ್ಟವರ ಪರವಾಗಿ ಜಿನಿವಾದಲ್ಲಿ ಒಗ್ಗಟ್ಟು ಪ್ರದರ್ಶಿಸಲಾಯಿತು. ಪಾಕಿಸ್ತಾನ ಸೇನೆಯು ನರಮೇಧದ  ಮೂಲಕ ಸಾಕಷ್ಟು ಜನ ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ಯೆಗೈದಿದೆ  ಎಂದು ಆರೋಪಿಸಿದ್ದಾರೆ.

ಕೋವಿಡ್  3ನೇ ಅಲೆಗೆ ಆಹ್ವಾನ ನೀಡುತ್ತಾ ಯುಪಿ ಸರ್ಕಾರ – ಕನ್ವಾರ್ ಯಾತ್ರೆಗೆ ಅನುಮತಿ..?

ವಿಶ್ವಸಂಸ್ಥೆ ಮತ್ತು ಎಲ್ಲಾ ಅಂತರರಾಷ್ಟ್ರೀಯ ಸಂಘಟನೆಗಳು ಪಾಕ್‌ ನಡೆಸಿದ 1971ರ ಯುದ್ಧಾಪರಾಧ ಮತ್ತು ನರಮೇಧವನ್ನು ಮುಖ್ಯವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ನಾವಿಲ್ಲಿ ಸೇರಿದ್ದೇವೆ. ಜೊತೆಗೆ‌ ಈ ಸಂಬಂಧ ಪಾಕಿಸ್ತಾನವು ಕ್ಷಮೆಯಾಚಿಸಬೇಕು ಹಾಗೂ ಸಂತ್ರಸ್ತರ ಕುಟುಂಬದವರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸುತ್ತೇವೆ  ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಬಾಂಗ್ಲಾ ನರಮೇಧದ ವೇಳೆ 30 ಲಕ್ಷ ಜನರನ್ನು ಹತ್ಯೆಮಾಡಲಾಗಿದೆ. 2 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗಿದೆ.  ಕೋಟಿ ಜನರು ನಿರಾಶ್ರಿತರಾಗಿದ್ದಾರೆ  ಎಂಬ ಫಲಕಗಳನ್ನು ಪ್ರದರ್ಶಿಸಲಾಯಿತು.

ವರದಿಗಳ ಪ್ರಕಾರ ಮೂವತ್ತು ಲಕ್ಷ ಜನರು ಮೃತಪಟ್ಟಿದ್ದರು. ಐದು ಲಕ್ಷ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗಿದ್ದರು. ಹಳ್ಳಿಗಳು ಪಾಳು ಬಿದ್ದಂತಾದವು. ಬಹುತೇಕ ಗಂಡಸರನ್ನು ಗುರಿಯಾಗಿರಿಸಿ ದಾಳಿ ಮಾಡಲಾಗಿತ್ತು. ಪಾಕ್‌ ಸೈನಿಕರಿಂದ ಮಹಿಳೆಯರ ಅಪಹರಣ ಮತ್ತು ಅತ್ಯಾಚಾರಗಳು ಸೇನಾ ಶಿಬಿರಗಳಲ್ಲಿ ತಿಂಗಳುಗಳವರೆಗೆ ನಿರಂತರವಾಗಿ ನಡೆದವು ೀ ಬಗ್ಗೆ ಪ್ರಪಂಚಕ್ಕೆ ಗೊತ್ತಾಗಬೇಕಿದೆ ಎಂದಿದ್ದಾರೆ.

ದೆಹಲಿ-ಟೋಕಿಯೋ ವಿಮಾನ ಸೇವೆಗಳನ್ನು ಪ್ರಾರಂಭಿಸಿದ ವಿಸ್ತಾರ

ಎರೆಡು ಪ್ರತ್ಯೇಕ ಎನ್ ಕೌಂಟರ್‍ ನಲ್ಲಿ ಐವರು ಉಗ್ರರ ಬಲಿ ಪಡೆದ  ಸೈನಿಕರು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd