ವಿಜಯೇಂದ್ರ ಮೊನ್ನೆ ಮೊನ್ನೆ ಹುಟ್ಟಿದ ಹುಡುಗ : ಯತ್ನಾಳ್
ವಿಜಯಪುರ : ವಿಜಯೇಂದ್ರ ಮೊನ್ನೆ ಮೊನ್ನೆ ಹುಟ್ಟಿದ ಹುಡುಗ, ಹೈಕಮಾಂಡ್ ಹೆಂಥಿವರನ್ನೇ ಮನಯಲ್ಲೇ ಕೂಡಿಸಿದೆ. ಬಿಜೆಪಿಯಲ್ಲಿ ವಂಶಪಾರಂಪರ್ಯಕ್ಕೆ ಅವಕಾಶವಿಲ್ಲ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಿಮ್ಮ ಸಚಿವ ಸ್ಥಾನಕ್ಕೆ ಬಿ. ವೈ ವಿಜಯೇಂದ್ರ ಅಡ್ಡಗಾಲು ಹಾಕುತ್ತಿದ್ದಾರಾ ಎಂಬ ಮಾದ್ಯಮದವರ ಪ್ರಶ್ನೆಗೆ ವಿಜಯಪುರದ ಇಂಚಗೇರಿಯಲ್ಲಿ ಪ್ರತಿಕ್ರಿಯಿಸಿದ ಅವರು ಸಚಿವ ಸಂಪುಟ ಪುನರ್ ರಚನೆ, ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ಅಂತಿಮ. ಅವರು ಏನ ನಿರ್ಧಾರ ಕೈಗೊಳ್ಳುತ್ತಾರೆ ಗೊತ್ತಿಲ್ಲ ಎಂದರು.
ಅಲ್ಲದೇ ಈ ಬಗ್ಗೆ ನಾವು ಏನೇ ಮಾತನಾಡಿದರು ಅದು ಊಹಾಪೋಹ. ಹಾಗೇ ಈ ಕುರಿತು ಸ್ಪಷ್ಟ ಸಂದೇಶ ಕೇಂದ್ರದಿಂದ ಬಂದಿಲ್ಲ. ಪಕ್ಷದ ಕಾರ್ಯಕಾರಣಿ ಸಭೆ ಬಳಿಕ ನಿರ್ಧಾರವಾಗಿ, ಉತ್ತಮ ಸಂದೇಶ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಗೇ ಯತ್ನಾಳ್ ದೆಹಲಿ ಪ್ರವಾಸದ ಕುರಿತು, ನಾನು ಸಚಿವ ಸ್ಥಾನದ ಲಾಭಿಗಾಗಿ ದೆಹಲಿಗೆ ಹೋಗಿಲ್ಲ. ನನ್ನ ವೈಯಕ್ತಿಕ ಕಾರ್ಯ ಮತ್ತು ಕಾರ್ಯಕಾರಿಣಿ ಸಭೆ ನಿಮಿತ್ತ ದೆಹಲಿಗೆ ಹೋಗಿದ್ದೆ ಎಂದು ಸ್ಪಷ್ಟಪಡಿಸಿದರು.
ಇನ್ನೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ನಾವು ಸರಕಾರಕ್ಕೆ ಗಡುವು ನೀಡಿದ್ದೇವು. ಸಿಎಂ ಅವರು ಸದನದಲ್ಲಿ ಸ್ಪಷ್ಟ ಭರವಸೆ ನೀಡಿದ ಕಾರಣ ನಾವು ಕಾಯುತ್ತಿದ್ದೇವೆ. ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮಾಜಗಳ ಸಮಗ್ರ ಪುನಾರಚನೆ ಆಗಬೇಕು ಎಂದು ಸಿಎಂ ಹೇಳಿದ್ದಾರೆ. ಆದಷ್ಟು ಬೇಗ ನಮ್ಮ ಬೇಡಿಕೆ ಈಡೇರಲಿದೆ ಎಂದು ಮಾತನಾಡಿದರು.








