ವಿವಾಹಕ್ಕೆ ಉಡುಗೊರೆಯಾಗಿ ನೀಡಿದ್ದ ಹೋಂ ಥಿಯೇಟರ್ ಸ್ಫೋಟಗೊಂಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.. ಹೋಂ ಥಿಯೇಟರ್ ಸಿಸ್ಟಂನಲ್ಲಿ ಬಾಂಬ್ ಇಟ್ಟಿದ್ದಾಗಿ ನವ ವಿವಾಹಿತೆಯ ಮಾಜಿ ಪ್ರಿಯಕರ ಒಪ್ಪಿಕೊಂಡಿದ್ದಾನೆ.
ಮ್ಯೂಸಿಕ್ ಸಿಸ್ಟಂ ಪ್ಲೇ ಮಾಡುತ್ತಿದ್ದಂತೆ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂದ್ದು, ನವ ವಿವಾಹಿತ ಹಾಗೂ ಆತನ ಸಹೋದರ ಸಾವನ್ನಪ್ಪಿದ್ದರು. ಆದರೆ, ಈ ಹೋಂ ಥಿಯೇಟರ್ನಲ್ಲಿ ಸ್ಫೋಟಕ ಅಳವಡಿಸಲಾಗಿತ್ತು. ಅದನ್ನು ವಧುವಿನ ಮಾಜಿ ಪ್ರಿಯಕರ ನೀಡಿದ್ದ ಉಡುಗೊರೆಯಾಗಿತ್ತು ಎಂದು ಪೊಲೀಸರಿಂದ ತಿಳಿದುಬಂದಿದೆ. ಛತ್ತೀಸ್‌ಗಢದ ಕಬೀರ್ಧಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ವ್ಯವಸ್ಥೆ ಇರಿಸಲಾಗಿದ್ದ ಕೊಠಡಿಯ ಗೋಡೆಗಳು ಮತ್ತು ಛಾವಣಿ ಕುಸಿದು ಬಿದ್ದಿದೆ. 22 ವರ್ಷದ ಹೇಮೇಂದ್ರ ಮೆರಾವಿ ಸವನ್ನಪ್ಪಿದ ದುರ್ದೈವಿ. ವೈರ್ ಅನ್ನು ಎಲೆಕ್ಟ್ರಿಕ್ ಬ್ಯಾಂಡ್‌ಗೆ ಜೋಡಿಸಿದ ನಂತರ ಹೋಮ್ ಥಿಯೇಟರ್ ಸಿಸ್ಟಂ ಅನ್ನು ಸ್ವಿಚ್ ಆನ್ ಮಾಡಿದಾಗ, ಭಾರಿ ಸ್ಫೋಟ ಸಂಭವಿಸಿದೆ.
ಆರೋಪಿಯನ್ನು ಸರ್ಜು ಎಂದು ಗುರುತಿಸಲಾಗಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪೊಲೀಸರು ಮದುವೆಯ ಸಮಯದಲ್ಲಿ ಪಡೆದ ಉಡುಗೊರೆಗಳ ಪಟ್ಟಿಯನ್ನು ತನಿಖೆ ಮಾಡಲು ಪ್ರಾರಂಭಿಸಿದಾಗ, ಮ್ಯೂಸಿಕ್ ಸಿಸ್ಟಮ್ ವಧುವಿನ ಮಾಜಿ ಪ್ರೇಮಿಯ ಉಡುಗೊರೆ ಎಂಬುವುದು ಗೊತ್ತಾಗಿದೆ. ಪ್ರೇಯಸಿ ಬೇರೊಬ್ಬನನ್ನು ಮದುವೆಯಾಗುತ್ತಿದ್ದಾಳೆ ಎನ್ನುವ ಕೋಪದಿಂದ ಆತ ಈ ಕೆಲಸ ಮಾಡಿದ್ದ ಎನ್ನಲಾಗಿದೆ.








