ಕೊರೊನಾ ಸೋಂಕಿತ ಮಾವನನ್ನು ಹೆಗಲ ಮೇಲೆ ಹೊತ್ತೊಯ್ದ ಸೊಸೆ..! VIRAL

1 min read

ಕೊರೊನಾ ಸೋಂಕಿತ ಮಾವನನ್ನು ಹೆಗಲ ಮೇಲೆ ಹೊತ್ತೊಯ್ದ ಸೊಸೆ..! VIRAL

ಒಡಿಶಾ : ಇತ್ತೀಚೆಗೆ ಸ್ವಂತ ಮಕ್ಕಳು ಸಹ ಸಂಬಂಧಕ್ಕೆ ಬೆಲೆ ಕೊಡದೇ ತಂದೆ ತಾಯಿಯರನ್ನ ಬೀದಿಗೆ ಬಿಡುತ್ತಿರುವುದ, ಅವರನ್ನ ಅಲಕ್ಷ್ಯ ಮಾಡುತ್ತಿರುವುದು ಸಾಮಾನ್ಯವಾಗಿದೆ.. ಇನ್ನೂ ಅತ್ತೆ ಮಾವಂದಿರನ್ನ ಸೊಸೆಯಂದಿರಾಗಲಿ , ಸೊಸೆಯನ್ನ ಅತ್ತೆ ಮಾವ ಪ್ರೀತಿಸುವುದು, ಅವರನ್ನ ಕೇರ್ ಮಾಡೋ ಪ್ರಸಂಗಗಳು ತುಂಬಾನೆ ಕಡಿಮೆ.. ಆದ್ರೆ ಇಲ್ಲೊಬ್ಬ ಸೊಸೆ ಇವುಗಳನ್ನ ಸುಳ್ಳು ಮಾಡಿದ್ದು, ಸಂಬಂಧದ ಮೌಲ್ಯ ಸಾರಿದ್ದಾರೆ.

ಹೌದು ಕೊರೊನಾ ಸೋಂಕಿತ ಮಾವನನ್ನು ಸೊಸೆ ಹೆಗಲ ಮೇಲೆ ಹೋತ್ತು ಆಸ್ಪತ್ರೆಗೆ ಸಾಗಿಸಿರುವ ಘಟನೆ ಒಡಿಶಾದ ಭವನೇಶ್ವರದಲ್ಲಿ ನಡೆದದಿದೆ. ಕೊರೊನಾ ಚಿಕಿತ್ಸೆಗಾಗಿ ತನ್ನ ಮಾವನನ್ನು ಹೊತ್ತು ಸಾಗುವ ಮೂಲಕವಾಗಿ ಮಾನವೀಯತೆ ಮೆರೆದಿದ್ದಾಳೆ.  ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಸೊಸೆಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತುಳೇಶ್ವರ್ ದಾಸ್(75) ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಈತನ ಮಗ ಸೂರಜ್ ಕೆಲಸದ ನಿಮಿತ್ತ ಬೇರೆ ಊರಿನಲ್ಲಿ ವಾಸವಾಗಿದ್ದಾರೆ. ಹೀಗಾಗಿ ಮನೆಯ ಪೂರ್ತಿ ಜವಾಬ್ದಾರಿ ಸೊಸೆ ನಿಹಾರಿಕಾ ಮೇಲೆ ಇದೆ. ಮಾವನ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದಂತೆ ಏನು ಮಾಡುವುದು ಗೊಂದಲಕ್ಕೀಡಾದ ನಿಹಾರಿಕ ಮಾವನನ್ನು ಹೊತ್ತುಕೊಂಡು ಕೋವಿಡ್ ಸೆಂಟರ್​ಗೆ ತೆರೆಳಿದ್ದಾಳೆ.

ಮಾವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ  ಸೊಸೆ ನಿಹಾರಿಕಳನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ವೈದ್ಯರು ಸೂಚನೆ ನೀಡಿದ್ದಾರೆ. ಆದ್ರೆ ಮಾವನೊಬ್ಬನನ್ನೇ ಕೊರೊನಾ ಕೇಂದ್ರಕ್ಕೆ ಕಳುಹಿಸಲು ನಿಹಾರಿಕಾ ನಿರಾಕರಿಸಿದ್ದಾಳೆ. ಇದಕ್ಕೆ ಸ್ಪಂದಿಸಿದ ಆಸ್ಪತ್ರೆ ಸಿಬ್ಬಂದಿ ಅಂಬ್ಯುಲೆನ್ಸ್‌ನಲ್ಲಿ ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ವಿಶ್ವದ 3ನೇ ಅತಿ ಉದ್ದದ ರೈಲ್ವೆ ಫ್ಲಾಟ್ ಫಾರ್ಮ್ ಇರುವುದು ಭಾರತದ ಪಶ್ಚಿಮ ಬಂಗಾಳದಲ್ಲಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd