ADVERTISEMENT
Friday, August 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Bollywood – ಬಿಗ್ ಬಾಸ್ ಸೀಜನ್ 15 ರ ಕಿರೀಟ ತೊಟ್ಟ  ತೇಜಸ್ವಿ ಪ್ರಕಾಶ್

Naveen Kumar B C by Naveen Kumar B C
January 31, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಬಿಗ್ ಬಾಸ್ ಸೀಜನ್ 15 ರ ಕಿರೀಟ ತೊಟ್ಟ  ತೇಜಸ್ವಿ ಪ್ರಕಾಶ್

ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 15  ಈ ರಿಯಾಲಿಟಿ ಶೋನ ವಿಜೇತರಾಗಿ  ನಟಿ ತೇಜಸ್ವಿ ಪ್ರಕಾಶ್  ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಸೀಜನ್  15 ರಲ್ಲಿ, ಕರಣ್ ಕುಂದ್ರಾ ಮತ್ತು ಪ್ರತೀಕ್ ಸಹಜ್ಪಾಲ್ ತೇಜಸ್ವಿ ಪ್ರಕಾಶ್ ಜೊತೆಗೆ ಮೊದಲ ಮೂರು ಸ್ಥಾನಗಳನ್ನು ಪೈಪೋಟಿ ನಡೆಸಿದರು. ಆದರೆ ನಟಿ ತೇಜಸ್ವಿ ಇಬ್ಬರನ್ನೂ ಸೋಲಿಸಿ ಸೀಸನ್ 15 ಟ್ರೋಫಿಯನ್ನು ವಶಪಡಿಸಿಕೊಂಡಿದ್ದಾರೆ.  ಪ್ರತೀಕ್ ಸಹಜಪಾಲ್ ಅವರೊಂದಿಗೆ ತೇಜಸ್ವಿ ಪ್ರಕಾಶ್ ನೇರವಾಗಿ ಸ್ಪರ್ಧೆ ಮಾಡಿ ಟಾಪ್ 2 ಸೆಲೆಕ್ಟ್ ಆಗಿದ್ದರು. ಆದರೆ ಪ್ರತೀಕ್ ಮತಗಳ ಕೊರತೆಯಿಂದ ಹಿನ್ನಡೆ ಅನುಭವಿಸಿದರು. ಪ್ರತೀಕ್ ಈ ಶೋನ ಮೊದಲ ರನ್ನರ್ ಅಪ್ ಆಗಿದ್ದಾರೆ.

Related posts

ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್

ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್

August 20, 2026
ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

August 20, 2026

ಗ್ರ್ಯಾಂಡ್ ಫಿನಾಲೆಯಲ್ಲಿ ಸಲ್ಮಾನ್ ಖಾನ್ ಇಬ್ಬರು ಫೈನಲಿಸ್ಟ್‌ಗಳ ಕೈ ಹಿಡಿದು ವಿಜೇತರನ್ನು ಹೆಸರಿಸಿದರು. ತೇಜಸ್ವಿ ಗೆಲುವಿಗೆ ಅಭಿಮಾನಿಗಳು ನಿರಂತರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ತೇಜಸ್ವಿ ಪ್ರಕಾಶ್ ಅವರು ಸೌದಿ ಅರೇಬಿಯಾದ ಜೆಡ್ಡಾದಲ್ಲಿ 10 ಜೂನ್ 1992 ರಂದು ಜನಿಸಿದರು. ಅವರ ತಂದೆ ಪ್ರಕಾಶ ವಯಂಗಾಣಕರ್ ಮತ್ತು ಸಹೋದರ ಪ್ರತೀಕ್ ವಯಾಂಗಣಕರ್ ಎಂಜಿನಿಯರ್ ಆಗಿದ್ದರು.  ತೇಜಸ್ವಿ ಸಹ ಶಾಲಾ ಶಿಕ್ಷಣ ಮುಗಿಸಿ ಇಂಜಿನಿಯರಿಂಗ್ ಸಾಲಿಗೆ ಸೇರಿದಳು. ಬಾಲ್ಯದಿಂದಲೂ ಇಂಜಿನಿಯರ್ ಆಗಬೇಕೆಂದು ಬಯಸಿದ ಆಕೆ ಕಾಲಕ್ರಮೇಣ ಇಂಜಿನಿಯರ್ ಕೂಡ ಆದಳು. ಮುಂಬೈ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಆದರೆ ಪದವಿ ನಂತರ  ವೃತ್ತಿಜೀವನವನ್ನು ಬದಲಾಯಿಸಿ  ಸಿನಿಮಾ ರಂಗಕ್ಕೆ ಕಾಲಿಟ್ಟಳು.

ಮೊದಲ ಬಾರಿ ಟಿವಿಯಲ್ಲಿ ಕಾಣಿಸಿಕೊಂಡಾಗ ಆಕೆಗೆ ಕೇವಲ 18 ವರ್ಷ. ತೇಜಸ್ವಿಯವರ ಮೊದಲ ಧಾರಾವಾಹಿ ‘2612’, ಇದು 2012 ರಲ್ಲಿ ಪ್ರಸಾರವಾಯಿತು. ಇದರ ನಂತರ ಅವರು ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಇದರಲ್ಲಿ ‘ಸ್ವರಗಿಣಿ-ಜೋಡೆ ರಿಷ್ಟೆ ಕಾ ಸುರ್’, ‘ಪೆರ್ಹೆದರ್ ಪಿಯಾ ಕಿ’, ‘ಸಿಲ್ಸಿಲಾ ಬದಲ್ತೆ ರಿಶ್ಟನ್ ಕಾ’ ನಂತಹ ಟಿವಿ ಧಾರಾವಾಹಿಗಳು ಸೇರಿವೆ.

ತೇಜಸ್ವಿ ಪ್ರಕಾಶ್ ಟಿವಿ ಜೊತೆಗೆ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಪ್ರತಿ ಕಾರ್ಯಕ್ರಮದಲ್ಲೂ ನಟಿಯ ಮುದ್ದಾದ ಸ್ಟೈಲ್ ಕಂಡುಬಂದಿದ್ದು, ಅಭಿಮಾನಿಗಳು ಇದನ್ನು ಮೆಚ್ಚಿಕೊಂಡಿದ್ದಾರೆ. ತೇಜಸ್ವಿ ಅವರು ‘ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಕಿಲಾಡಿ’, ‘ಕಿಚನ್ ಚಾಂಪಿಯನ್ 5’, ‘ಕಾಮಿಡಿ ನೈಟ್ಸ್ ಲೈವ್’ ನಂತಹ ಅನೇಕ ರಿಯಾಲಿಟಿ ಶೋಗಳನ್ನು ಮಾಡಿದ್ದಾರೆ. ಇದೀಗ ಬಿಗ್ ಬಾಸ್ 15ರ ರಾಣಿಯೂ ಆಗಿದ್ದಾರೆ.

Tags: big bossPrateek SahajpalsalmankhanTejasswi Prakash
ShareTweetSendShare
Join us on:

Related Posts

ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್

ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್

by Shwetha
August 20, 2026
0

ಮುಂಬೈ: ಕನ್ನಡದ 'ಸೂರ್ಯವಂಶ' ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಸಾಮಾಜಿಕ ಜಾಲತಾಣದ ವೀಡಿಯೊ ಮೂಲಕ ಭಾರಿ...

ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

by Shwetha
August 20, 2026
0

ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ರೈತರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS)...

ಇರಾನ್ ವಿರುದ್ಧ UAE ಕಠಿಣ ಕ್ರಮ; ಎಲ್ಲಾ ವ್ಯಾಪಾರ, ಹಣಕಾಸು ವಹಿವಾಟು ಸ್ಥಗಿತ

ಇರಾನ್ ವಿರುದ್ಧ UAE ಕಠಿಣ ಕ್ರಮ; ಎಲ್ಲಾ ವ್ಯಾಪಾರ, ಹಣಕಾಸು ವಹಿವಾಟು ಸ್ಥಗಿತ

by Shwetha
August 20, 2026
0

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ನಡುವೆಯೇ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಇರಾನ್ ಜೊತೆಗಿನ ಎಲ್ಲಾ ವ್ಯಾಪಾರ, ವಾಣಿಜ್ಯ ವಿನಿಮಯ ಹಾಗೂ ಹಣಕಾಸು ವಹಿವಾಟುಗಳನ್ನು ಮುಂದಿನ ಸೂಚನೆ...

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

by Shwetha
August 20, 2026
0

ಹೊಸದೆಹಲಿ: ಭಾರತದ ಚುನಾವಣಾ ವ್ಯವಸ್ಥೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರವಾಗಿ...

ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್  ತಿರುಗೇಟು

ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತಿರುಗೇಟು

by Shwetha
August 20, 2026
0

ಹೊಸದೆಹಲಿ: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಮತ್ತು ಯೋಗ ಗುರು ಬಾಬಾ ರಾಮ್‌ದೇವ್ ನಡುವಿನ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿನ್ ಝಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram