ರಾಜ್ಯಕ್ಕೆ ಕೇಂದ್ರದಿಂದ ನಡೆಯುತ್ತಿರುವ ಅನ್ಯಾಯದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, BJP ಮತ್ತು JDS ಪಕ್ಷಗಳು ರಾಜ್ಯದ ಪರವಾಗಿ ನಿಲ್ಲದೇ, ರಾಜ್ಯದ ಜನರ ಮೇಲೆ ದ್ರೋಹ ಎಸಗುತ್ತಿದ್ದಾರೆ, ಎಂದು ತೀವ್ರ ಟೀಕೆ ಮಾಡಿದ್ದಾರೆ.
ರಾಜ್ಯಕ್ಕೆ ಅನ್ಯಾಯ ನಡೆಯುತ್ತಿದೆ – ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ, ಪ್ರತಿ ವರ್ಷ ಕರ್ನಾಟಕದಿಂದ ಕೇಂದ್ರಕ್ಕೆ ತೆರಿಗೆಯಾಗಿ ನಾವು ಕೊಡುವ ಹಣದ ಪೈಕಿ ತುಂಬಾ ಕಡಿಮೆ ಮೊತ್ತವೇ ರಾಜ್ಯಕ್ಕೆ ವಾಪಸ್ ಬರುತ್ತಿದೆ. ಇದು ಕರ್ನಾಟಕದ ಮೇಲೆ ನಡೆದಿರುವ ನೈತಿಕ ಅನ್ಯಾಯ, ಎಂದು ಹೇಳಿದರು.
ಕೇಂದ್ರ ಸಚಿವರು ಆಗಿರುವ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಮತ್ತು ಇತರರಿಗೆ ರಾಜ್ಯದ ಹಿತಕ್ಕಾಗಿ ಪ್ರಧಾನಿ ಮೋದಿಯವರ ಬಳಿ ಧೈರ್ಯದಿಂದ ಕೇಳುವ ಸಾಮರ್ಥ್ಯವಿಲ್ಲ.
ಅವರು ಕೇವಲ ತಮ್ಮ ಪಕ್ಷದ ರಾಜಕೀಯ ಲಾಭಕ್ಕಾಗಿ ಮೌನವಾಗಿದ್ದಾರೆ, ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ..
ಸಿದ್ದರಾಮಯ್ಯ ತಮ್ಮ ವಾಗ್ದಾಳಿಯಲ್ಲಿ,
ರಾಜ್ಯದ ಹಿತ ಕಾಯಬೇಕಾದ ರಾಜಕೀಯ ಪಕ್ಷಗಳೇ ರಾಜ್ಯದ ಜನರಿಗಾಗಿ ಧ್ವನಿ ಎತ್ತದೆ, ಕೇಂದ್ರದ ಮುಂದೆ ಮೌನವಾಗಿರುವುದು ದ್ರೋಹವೇ ಸರಿ, ಎಂದು ಕಿಡಿಕಾರಿದ್ದಾರೆ…








