ಬಾಲಿವುಡ್ ನಟಿ ಸಾರಾ ಅಲಿ ಖಾನ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರ ನಡೆಗೆ ಯಾವಾಗಲೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿರುತ್ತಾರೆ.
ಈಗ ದೇವಸ್ಥಾನದ ಬಳಿ ಬಡವರಿಗೆ ಸಿಹಿ ಹಂಚಿ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದಾರೆ. ಮುಂಬಯಿಯಲ್ಲಿನ ಜುಹುದಲ್ಲಿರುವ ಶನಿ ದೇವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಾರಾ, ಈ ವೇಳೆ ಅಲ್ಲಿದ್ದ ಬಡವರಿಗೆ ಸಿಹಿ ಹಂಚಿದ್ದಾರೆ. ‘ಮರ್ಡರ್ ಮುಬಾರಕ್’ ಮತ್ತು ‘ಏ ವತನ್ ಮೇರೆ ವತನ್’ ಸಿನಿಮಾಗಳು ರಿಲೀಸ್ ಆಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ನಟಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಆವರಣದ ಹೊರಗೆ ಕುಳಿತಿದ್ದ ಬಡವರಿಗೆ ಸಿಹಿ ಪ್ಯಾಕೆಟ್ಗಳನ್ನು ಹಂಚಿದ್ದಾರೆ.
ಸುತ್ತುವರಿದ ಜನರಿಗೆ ವಿಡಿಯೋ ಮಾಡದಂತೆ ಮನವಿ ಮಾಡಿದರು. ದೇವಸ್ಥಾನದ ಹೊರಗೆ ಕುಳಿತಿದ್ದ ಬಡಜನರ ಯೋಗ ಕ್ಷೇಮವನ್ನು ಸಾರಾ ಅಲಿ ಖಾನ್ ವಿಚಾರಿಸಿದರು. ಆಹಾರದ ಪೊಟ್ಟಣಗಳನ್ನು ಅಲ್ಲಿ ಕುಳಿತಿದ್ದ ಎಲ್ಲರಿಗೂ ವಿತರಿಸಿದರು. ನಟಿಯ ವಿಡಿಯೋಗೆ ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.