ಬಿಗ್ ಬಾಸ್ (Big Boss)ನ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಕಾರು ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯದ ಮಾಹಿತಿಯಂತೆ ಅಪಾರ್ಟ್ ಮೆಂಟ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಕಾರನ್ನು (Car) ಹೊರಗೆ ತೆಗೆಯಲು ಹೋಗಿ ಪಿಲ್ಲರ್ ಗೆ ಗುದ್ದಿದ್ದಾರೆ ಎನ್ನಲಾಗಿದೆ. ಬ್ರೇಕ್ ತುಳಿಯಲು ಹೋಗಿ ಎಕ್ಸಿಲೇಟರ್ ತುಳಿದಿದ್ದರಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅವರು ಇತ್ತೀಚೆಗೆ ಕಾರು ಕಲಿಯರು ಆರಂಭಿಸಿದ್ದರು. ಹೀಗಾಗಿ ಗೊಂದಲವಾಗಿ ಈ ರೀತಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಅವರ ಕೈ ಹಾಗೂ ಕಾಲುಗಲಿಗೆ ಕಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ ಎನ್ನಲಾಗಿದೆ.
ಹಾಟ್ ಫೋಟೋ ಶೂಟ್ ಗಳ ಮೂಲಕ ಪಡ್ಡೆ ಹೈಕಳನ್ನು ತನ್ನತ್ತ ಸೆಳೆದಿದ್ದ ಸೋನುಗೌಡ, ಹೆಸರು ಮಾಡಿದ್ದರು.