ಮಗಳ ಮದುವೆಗೆ ಹಣ ಹೊಂದಿಸಲು ಮಾಲೀಕನ ಮಕ್ಕಳನ್ನೇ ಕಿಡ್ನಾಪ್ ಮಾಡಿದ..!
ಮುಂಬೈನ ಬಿಲ್ಡರ್ ಒಬ್ಬರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಮಗಳ ಮದುವೆಗೆ ಹಣ ಹೊಂದಿಸಲಾಗದೇ ಪರದಾಡುತ್ತಿದ್ದ. ಆಗಲೇ ಆತನಿಗೆ ಪ್ಲಾನ್ ಒಂದು ಹೊಳೆದಿತ್ತು. ಅದೇ ಕಿಡ್ನಾಪಿಂಗ್. ಈತ ತನ್ನ ಮಗಳ ಮದುವೆಗೆ ಹೇಗಾದ್ರೂ ಹಣ ಹೊಂದಿಸಲು ಮಾಲೀಕನ ಇಬ್ಬರು ಮಕ್ಕಳನ್ನೇ ಅಪಹರಿಸಿದ್ದ. ಈ ಕೃತ್ಯದಲ್ಲಿ ಆತನ ಸಂಬಂಧಿ ಕೂಡ ಸಾಥ್ ನೀಡಿದ್ದ. ಆದ್ರೆ ಇದೀಗ ಜೈಲುಪಾಲಾಗಿದ್ದಾನೆ.
ಅತ್ತೆಯ ಕಣ್ಣು ಕಿತ್ತು ಹೊರಹಾಕಿ , ಭೀಕರವಾಗಿ ಹತ್ಯೆ ಮಾಡಿದ ಸೊಸೆ : ಕಾರಣ..!
ಮುಂಬೈ ಉಪನಗರವಾದ ಅಂಧೇರಿಯಲ್ಲಿ ಈ ಘಟನೆ ನಡೆದಿದೆ. ಬಿಲ್ಡರ್ ಬಳಿ ಕೆಲಸ ಮಾಡುತ್ತಿದ್ದ ಚಾಲಕ ಮಕ್ಕಳನ್ನ ಅಪಹರಿಸಿ 1 ಕೋಟಿ ರೂಪಾಯಿ ಪಡೆಯುವ ಹುನ್ನಾರ ಮಾಡಿದ್ದ ಎನ್ನಲಾಗಿದೆ. ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜುಹುವಿನಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಂದ ಅಪಹರಣಕಾರರು ಚಾಲಕನನ್ನ ಥಳಿಸಿ ಮಕ್ಕಳಿಗೆ ಬೆದರಿಕೆ ಹಾಕಿ ಬಲವಂತದಿಂದ ಕಾರು ಬಾಗಿಲನ್ನ ತೆರೆದು ಪಿವಿಆರ್ ಪ್ರದೇಶದ ಬಳಿ ಕಾರನ್ನ ತೆಗೆದುಕೊಂಡು ಹೋಗಿದ್ದಾರೆ.
ತಾಯಿಯಾದ ಬಳಿಕ ಅಪ್ರಾಪ್ತೆಯನ್ನ ಮದುವೆಯಾಗಲು ಒಪ್ಪಿದ ವಿವಾಹಿತ ಆರೋಪಿಗೆ ಜಾಮೀನು..!
ಪಿವಿಆರ್ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಚಾಲಕ ಹಾಗೂ ಮಕ್ಕಳಿಗೆ ನಿದ್ರೆ ಮಾತ್ರೆ ನೀಡಲಾಗಿತ್ತು. ಬಳಿಕ ಒಂದು ಮಗು ಹಾಗೂ ಚಾಲಕನನ್ನ ಶಾಲೆಯ ಬಸ್ನಲ್ಲಿ ಕಿಡ್ನಾಪರ್ ಕೂರಿಸಿದ್ದಾನೆ. ಇನ್ನೊಂದು ಮಗು ಕಾರಿನಲ್ಲೇ ಇತ್ತು. ಇದಾದ ಬಳಿಕ ಇನ್ನೂ ಆರು ಮಂದಿ ಅಪಹರಣಕಾರರು ಸ್ಥಳಕ್ಕೆ ಆಗಮಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಹೇಗೋ ಒಂದು ಮಗು ಕಿಡ್ನಾಪರ್ ಕೈಯಿಂದ ತಪ್ಪಿಸಿಕೊಂಡಿದೆ. ಇದಾದ ಬಳಿಕ ಬರೋಬ್ಬರಿ 18 ತಾಸುಗಳ ಕಾಲ ಚಾಲಕನ ವಿಚಾರಣೆ ನಡೆಸಿದ್ದಾರೆ. ಬಳಿಕ ಆತನೇ ಅಸಲಿ ಕಿಡ್ನಾಪರ್ ಅನ್ನೋ ವಿಚಾರ ಬಯಲಾಗಿದ್ದು, ಆತನನ್ನ ಅರೆಸ್ಟ್ ಮಾಡಲಾಗಿದೆ. ಬಳಿಕ ಮಗಳ ಮದುವೆಗೆ ಹಣ ಹೊಂದಿಸಲಿಕ್ಕಾಗಿ ನಾನು ನನ್ನ ಮಾಲೀಕನ ಅವಳಿ ಮಕ್ಕಳನ್ನ ಅಪಹರಣ ಮಾಡಿದ್ದು ನಿಜ ಎಂದು ಆರೋಪಿ ಚಾಲಕ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಪ್ರೀತಿಗೆ ಒಪ್ಪದ ಯುವತಿಯನ್ನ ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಪಾಗಲ್ ಪ್ರೇಮಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel