ಸಿನಿಮಾ ರಂಗದ ದಿಗ್ಗಜರಾದ ರಜನಿ ಹಾಗೂ ಅಮಿತಾಭ್ ಬಚ್ಚನ್ (Amitabh Bachchan) ಪರಸ್ಪರ ಭೇಟಿಯಾಗಿದ್ದು, ಅಭಿಮಾನಿಗಳು ಸಂತಸಪಡುವಂತಾಗಿದೆ.
ಕೌನ್ ಬನೇಗಾ ಕರೋಡ್ಪತಿ ಶೂಟಿಂಗ್ ಸಂದರ್ಭದಲ್ಲಿ ಬ್ಯುಸಿಯಾಗಿದ್ದ ಅಮಿತಾಭ್ ಈಗ ವೆಟ್ಟೈಯನ್ (Vettaiyan) ಚಿತ್ರದ ಶೂಟಿಂಗ್ (Shooting) ನಲ್ಲಿ ಭಾಗಿಯಾಗಿದ್ದಾರೆ. ಈ ಫೋಟೋವನ್ನು ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದೆ.
ರಜನಿಕಾಂತ್ (Rajanikanth) ನಟನೆಯ ‘ಲಾಲ್ ಸಲಾಂ’ (Lal Salaam) ಸಿನಿಮಾ ರಜನಿ ಅಭಿಮಾನಿಗಳಿಗೆ ಏನೆಲ್ಲ ಬೇಕೊ ಎಲ್ಲವನ್ನೂ ಕೊಟ್ಟಿದ್ದರು. ಅಂದುಕೊಂಡಷ್ಟು ಚಿತ್ರಕ್ಕೆ ಸಿನಿಮಾಗೆ ಉತ್ತಮ ಸ್ಪಂದನೆ ಸಿಕ್ಕಿಲ್ಲ. ಈ ಚಿತ್ರದ ಮೊದಲ ದಿನ ಗಳಿಕೆ ನಾಲ್ಕುವರೆ ಕೋಟಿ ಎಂದು ಅಂದಾಜಿಸಲಾಗಿತ್ತು. ‘ಲಾಲ್ ಸಲಾಂ’ ಸೋಲಿನ ಬೆನ್ನಲ್ಲೇ ಹೊಸ ಸಿನಿಮಾ ತಲೈವ ಘೋಷಿಸಿದ್ದರು. ಈ ಸಿನಿಮಾಗೆ ಶೇ. 80ರಷ್ಟು ಶೂಟಿಂಗ್ ಮುಕ್ತಾಯ ಆಗಿದೆ. ಉಳಿದ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ರಜನಿ ಮಾಹಿತಿ ನೀಡಿದ್ದಾರೆ.