ಕರೊನಾ ತವರು ಚೀನಾದಲ್ಲಿ ಮತ್ತೊಂದು ಭಯಾನಕ ಸೋಂಕು ಪತ್ತೆ : ವೈದ್ಯ ಬಲಿ – “ಮಂಕಿ ಬಿ ವೈರಸ್ “ ನಿಂದ ಸಾವಿನ ಸಂಭವ ಹೆಚ್ಚು..!
ಚೀನಾ : ಇಡೀ ವಿಶ್ವಕ್ಕೆ ಕೊರೊನಾ ಹರಡಿ ಕೋಟ್ಯಾಂತರ ಜನರ ಜೀವ ತೆಗೆದ ಕೊರೊನಾ ಹೆಮ್ಮಾರಿಯ ತವರು ಚೀನಾದಲ್ಲಿ ಇದೀಗ ಮತ್ತೊಂದು ಹೊಸ ವೈರಸ್ ನ ಜನನವಾಗಿದೆ… ಹೌದು ಚೀನಾದಲ್ಲಿ ಮತ್ತೊಂದು ಭಯಾನಕ ಸೋಂಕು ಕಾಣಿಸಿಕೊಂಡಿದೆ. ಚೀನಾದ ಬೀಜಿಂಗ್ ನಲ್ಲಿ ಕೆಲಸ ಮಾಡುತ್ತಿರುವ ಪಶು ವೈದ್ಯರೊಬ್ಬರಲ್ಲಿ ಮಂಕಿ ಬಿ ವೈರಸ್ ಪತ್ತೆಯಾಗಿದೆ. ಅವರು ಮೃತರಾಗಿ ಬರೋಬ್ಬರಿ ಒಂದೂವರೆ ತಿಂಗಳ ನಂತರ ಈ ವಿಚಾರವನ್ನು ಚೀನಾ ಬಾಯಿ ಬಿಟ್ಟಿದೆ. ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಲ್ಲ ಈ ಸೋಂಕಿನ ಮರಣ ಪ್ರಮಾಣ ಶೇ. 70 % ರಿಂದ 80 % ಎನ್ನಲಾಗ್ತಿದೆ..,
“ಕಾಶ್ಮೀರದ ಜನರಿಗೆ ನಾನೇ ಬ್ರಾಂಡ್ ಅಂಬಾಸಿಡರ್” – ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್..!
ಸಂಸ್ಥೆಯೊಂದರಲ್ಲಿ ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಪಶು ವೈದ್ಯರಿಗೆ ಏಪ್ರಿಲ್ ತಿಂಗಳಲ್ಲೇ ಸೋಂಕು ಹರಡಿದೆ. ಎರಡು ಮೃತ ಮಂಗಗಳ ಶಸ್ತ್ರಚಿಕಿತ್ಸೆ ಮಾಡಿದ್ದ ಅವರಿಗೆ ಅದಾದ ಕೆಲವೇ ದಿನಗಳಲ್ಲಿ ವಾಂತಿ, ವಾಕರಿಕೆಯಂತಹ ಪ್ರಾರಂಭಿಕ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು. ಅದನ್ನು ಪರೀಕ್ಷೆ ಮಾಡಿದಾಗ ಅವರಲ್ಲಿ ಮಂಕಿ ಬಿ ವೈರಸ್ ಇರುವುದು ದೃಢವಾಗಿತ್ತು. ಎಷ್ಟೇ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗದೆ, ಅವರು ಮೇ 27ರಂದು ಕೊನೆಯುಸಿರೆಳೆದಿದ್ದಾರೆ. ಈ ವಿಚಾರ ಚೀನಾದ ಸಿಡಿಸಿ ಪತ್ರಿಕೆಯಲ್ಲಿ ಜುಲೈ 17ರಂದು ಪ್ರಕಟವಾಗಿದೆ. ಮಂಕಿ ಬಿ ವೈರಸ್ ಈ ಹಿಂದೆ 1932ರಲ್ಲಿ ಕಾಣಿಸಿಕೊಂಡಿತ್ತು. ಆದರೆ ಚೀನಾದಲ್ಲಿ ಇದೇ ಮೊದಲು ಸೋಂಕು ಕಾಣಿಸಿಕೊಂಡಿದೆ. ಸೋಂಕಿಗೆ ತುತ್ತಾದ ಮೊದಲನೇ ವ್ಯಕ್ತಿಯೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಆತನ ಪ್ರಾರ್ಥಮಿಕ ಸಂಪರ್ಕದಲ್ಲಿದ್ದವರಲ್ಲಿ ಸೋಂಕು ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಆದರೆ ಪ್ರಾಣಿಗಳಲ್ಲಿ ಸೋಂಕಿರುವ ಭಯವಿದ್ದು, ಅದರಿಂದ ಮನುಷ್ಯರಿಗೂ ಹರಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..
ಚೀನಾ ವುಹಾನ್ ಮಾರುಕಟ್ಟೆಯಿಂದ ಕೋವಿಡ್ ಹರಡಿರೋದಾಗಿ ಹೇಳಿದೆ.. ಆದ್ರೆ ಅಮೆರಿಕಾ ಅಷ್ಟೇ ಯಾಕೆ ಇಡೀ ವಿಶ್ವ ಇದನ್ನ ಒಪ್ಪೋದಕ್ಕೆ ತಯಾರಿಲ್ಲ. ಅಮೆರಿಕಾ ಕೂಡ ವುಹಾನ್ ನ ಲ್ಯಾಬ್ ನಿಂದಲೇ ವೈರಸ್ ಹರಡಿರೋದಾಗಿ ವಾದಿಸುತ್ತಾ ಬಂದಿದೆ.. ಅಲ್ಲದೇ ಚೀನಾ ಕೊರೊನಾ ಹರಡಿಸುವ ಮೂಲಕ ವಿಶ್ವದ ವಿರುದ್ಧ ಜೈವಿಕ ಅಸ್ತ್ರದ ಪ್ರಯೋಗ ಮಾಡಿರೋ ಅನುಮಾನಗಳು ಮೂಡಿವೆ..