cinema
ಟಾಪ್ 5 ಸಿನಿಮಾ ನ್ಯೂಸ್ ..!
ಕೊರೊನಾ ಪರೀಕ್ಷೆ ಎಡವಟ್ಟು: ಚಿರಂಜೀವಿಗೆ ಕೊರೊನಾ ನೆಗೆಟಿವ್..!
ಟಾಲಿವುಡ್ ಮೆಘಾಸ್ಟಾರ್ ಚಿರಂಜೀವಿಗೆ ಕೊರೊನಾ ಪಾಸಿಟಿವ್ ಇದ್ದದ್ದು, ಇತ್ತೀಚೆಗಷ್ಟೇ ಗೊತ್ತಾಗಿತ್ತು. ಹೀಗಾಗಿ ಚಿರಂಜೀವಿ ಅವರು ಮನೆಯಲ್ಲಿಯೇ ಹೋ ಕ್ವಾರಂಟೈನಲ್ಲಿದ್ದು ರೆಸ್ಟ್ ಮಾಡ್ತಿದ್ರು. ಆದರೆ ಇದೀಗ ಅವರಿಗೆ ಕೋವಿಡ್ ನೆಗೆಟಿವ್ ಬಂದಿದೆ. ಗುರುವಾರ ನಡೆಸಲಾದ ಕೋವಿಡ್-19 ಪರೀಕ್ಷೆಯ ರಿಪೋರ್ಟ್ ನಲ್ಲಿ ನೆಗೆಟಿವ್ ಇರುವುದು ದೃಢವಾಗಿದೆ. ಈ ವಿಚಾರವನ್ನ ನಟ ಚಿರಂಜೀವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ಮೆಗಾ ಸ್ಟಾರ್ ಗೆ ಕೊರೊನಾ ಪಾಸಿಟಿವ್ ಅಂತ ವರದಿ ನೀಡಲಾಗಿತ್ತು. RT PCR ಕಿಟ್ ದೋಷದಿಂದ ಕೊರೊನಾ ಪಾಸಿಟಿವ್ ಎಂದು ಬಂದಿತ್ತು. ಆದರೆ ಕೊರೊನಾ ಸೋಂಕು ಇಲ್ಲದೇ ಇರುವುದಾಗಿ ಇದೀಗ ಚಿರಂಜೀವಿ ಅವರು ಸ್ಪಷ್ಟನೆ ನೀಡಿದ್ದು, ಅಬಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ರವಿ ಬೆಳಗೆರೆ ನಿಧನದಿಂದ ಆಘಾತಕ್ಕೆ ಒಳಗಾದ ಹಿರಿಯ ನಟಿ ಲೀಲಾವತಿ ಕಣ್ಣೀರು
ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರು, ಹಿರಿಯ ಪ್ರತ್ರಕರ್ತರು , ಲೇಖಕರು ಆಗಿದ್ದ ರವಿ ಬೆಳಗೆರೆ ನಿಧನಕ್ಕೆ ಸಿನಿಮಾರಂಗದ ಗಣ್ಯರು, ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ. ಇತ್ತ ರವಿ ಬೆಳಗೆರೆ ಅವರ ನಿಧನದ ಸುದ್ದಿ ತಿಳಿದು ಹಿರಿಯ ನಟಿ ಲೀಲಾವತಿ ಅವರು ಕಣ್ಣೀರಿಟ್ಟಿದ್ದಾರೆ. ”ಸಾವಿರಾರು ಜನರ ಸಾಕ್ಷಿಯಾಗಿ ವೇದಿಕೆಯಲ್ಲಿ ಪ್ರೀತಿಯಿಂದ ಅಮ್ಮಾ ಎಂದು ಕರೆದಿದ್ದರು. ಯಾವಾಗಲೂ ಅಮ್ಮ ಎಂದೇ ಕರೆಯುತ್ತಿದ್ದರು. ಆ ದೇವರು ರವಿ ಆತ್ಮಕ್ಕೆ ಶಾಂತಿ ನೀಡಲಿ. ಸದಾ ಬೆಳಗುತ್ತಿರಲಿ” ಎಂದು ಲೀಲಾವತಿ ಅವರು ರವಿ ಅವರನ್ನ ನೆನೆದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಂದ್ಹಾಗೆ ರವಿ ಬೆಳಗೆರೆ ಅವರು ಲೀಲಾವತಿ ಅವರ ಜೀವನ ಕುರಿತು ‘ರಾಜ್ ಲೀಲಾ ವಿನೋದ’ ಎಂಬ ಪುಸ್ತಕ ಬರೆದಿದ್ದರು. ಜೊತೆಗೆ ರವಿ ಬೆಳಗೆರೆ ಅವರು ಲೀಲಾವತಿ ಅವರೊಡನೆ ಉತ್ತಮ ಒಡನಾಟ ಹೊಂದಿದ್ದರು.
‘ಇದು ರವಿ ಅವರ ‘ಸಾವಲ್ಲ’, ‘ಹುಟ್ಟು’ : ಯೋಗರಾಜ್ ಭಟ್
ರವಿ ಬೆಳಗೆರೆ ಅವರ ನಿಧನಕ್ಕೆ ವಿಕಟಕವಿ ಯೋಗರಾಜ್ ಭಟ್ ಅವರು ಸಂತಾಪ ಸೂಚಿಸಿದ್ದಾರೆ. ಇಂದು ಬೆಳಿಗ್ಗೆ ಪ್ರಾರ್ಥನಾ ಶಾಲೆಯ ಬಳಿ ಭಟ್ಟರು ರವಿ ಬೆಳಗೆರೆ ಅವರ ಅಂತಿಮ ದರ್ಶನ ಪಡೆದಿದರು. ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ರವಿ ಅವರ ಸಾವಲ್ಲ, ಹುಟ್ಟು ಎಂದಿದ್ದಾರೆ. ಅಲ್ಲದೇ ಫೊನಿನಲ್ಲಿ ನಾವಿಬ್ಬರು ಸದಾ ಮಾತನಾಡುತ್ತಿದ್ದೆವು. ಕೆಲವು ದಿನಗಳ ಹಿಂದಷ್ಟೆ ಸಹ ಪರಸ್ಪರ ಚರ್ಚೆ ಮಾಡಿದ್ದೆವು. ಅವರ ಆರೋಗ್ಯದ ಬಗ್ಗೆ ನಮಗೆ ಆತಂಕವೂ ಇತ್ತು. ಕಾವ್ಯಾತ್ಮಕ ಆತ್ಮ ಅವರದ್ದು, ಸಂಗೀತವನ್ನು ಬಹಳವಾಗಿ ಮೋಹಿಸುತ್ತಿದ್ದರು. ಮೊನ್ನೆಯವರೆಗೂ ನಮ್ಮ ಸಿನಿಮಾದ ಹಾಡುಗಳ ಬಗ್ಗೆ ಮಾತನಾಡುತ್ತಿದ್ವಿ. ಒಬ್ಬ ಕನ್ನಡಾಭಿಮಾನಿಯಾಗಿ ಇದು ಅವರ ಸಾವಲ್ಲ, ಹುಟ್ಟು ಎಂದಿದ್ದಾರೆ.
‘ಅಕ್ಷರ ಮಾಂತ್ರಿಕ’ನ ನಿಧನಕ್ಕೆ ಸಂತಾಪ ಸೂಚಿಸಿದ ‘ನವರಸ ನಾಯಕ’
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ನಿಧನಕ್ಕೆ ಜಗ್ಗೇಶ್ ಅವರು ಕಂಬನಿ ಮಿಡಿದಿದ್ದಾರೆ. ನಟ ಜಗ್ಗೇಶ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಬೆಳಗೆರೆ ಅವರಿಗೆ ಸಂತಾಪ ಸೂಚಿಸಿದ್ದಾರೆ. ಟ್ವಿಟ್ಟರ್ ನಲ್ಲಿ ‘ಯಾರಿಗೂ ಅರ್ಥವಾಗದ ಮನುಷ್ಯ. ಒಮ್ಮೆ ಈತನ ಮಾತು ಸರಿ ಅನಿಸುತ್ತದೆ. ಕೆಲವೊಮ್ಮೆ ಬೇಕಿತ್ತಾ ಈ ಮಾತು ಅನಿಸುತ್ತದೆ. 30 ವರ್ಷದಿಂದ ಬಲ್ಲೆ ಆದರೂ ನನಗೆ ಅರ್ಥವಾಗದ ಮನುಷ್ಯ. ಸಾಮಾನ್ಯ ಅಸಮಾನ್ಯ ಆದದ್ದು ಮಾತ್ರ ಅನುಸರಣೀಯ. ರವಿ ರವರ ಖಾಸಬಾತ್ ಬರವಣಿಗೆ ನನ್ನ ಅಚ್ಚುಮೆಚ್ಚು. ನಿಮ್ಮ ಆತ್ಮಕ್ಕೆ ಶಾಂತಿ’ ಎಂದು ಬರೆದುಕೊಂಡು ಸಂತಾಪ ಸೂಚಿಸಸಿದ್ದಾರೆ.
‘ಅಕ್ಷರ ರಾಕ್ಷಸ’ನ ನಿಧನಕ್ಕೆ ಕಂಬನಿ ಮಿಡಿದ ‘ಕಿಚ್ಚ’
ಆಗಿದ್ದ ರವಿ ಬೆಳಗೆರೆ ಅವರ ನಿಧನಕ್ಕೆ ಸಿನಿಮಾರಂಗದ ಗಣ್ಯರು, ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ. ಅದರಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ‘ಅಕ್ಷರ ಮಾಂತ್ರಿಕ’ನ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ‘ಕೊನೆ ಬಾರಿ ನಾನು ಅವರನ್ನು ನೋಡಿದ ಕ್ಷಣದ ಫೋಟೋ ಅತ್ಯಮೂಲ್ಯವಾಗಿರುತ್ತೆ. ಅದು ಎಲ್ಲಾ ಸ್ಪರ್ಧಿಗಳ ಪಾಲಿಗೂ ಅದ್ಭುತವಾದ ಕ್ಷಣವಾಗಿತ್ತು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನಿಮಗೆ ನೀಡಲಿ’ ಎಂದು ಬಿಗ್ ಬಾಸ್ ನೆನಪನ್ನು ಮೆಲುಕು ಹಾಕಿದ್ದಾರೆ.
cinema
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel