ದೇಶದಲ್ಲಿ ಕಾಂಗ್ರೆಸ್ ಒಂದು ಹಾಸ್ಯಾಸ್ಪದ ಪಕ್ಷ : ಕೆ.ಎಸ್.ಈಶ್ವರಪ್ಪ KS Eshwarappa saaksha TV
ಶಿವಮೊಗ್ಗ : ದೇಶದಲ್ಲಿ ಕಾಂಗ್ರೆಸ್ ಒಂದು ಹಾಸ್ಯಾಸ್ಪದ ಪಕ್ಷವಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಡೀಲ್ ಬಗ್ಗೆ ಉಗ್ರಪ್ಪ, ಸಲೀಂ ಮಾತುಕತೆ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ, ದೇಶದಲ್ಲಿ ಕಾಂಗ್ರೆಸ್ ಒಂದು ಹಾಸ್ಯಾಸ್ಪದ ಪಕ್ಷ ಆಗಿದೆ.
ರಾಜ್ಯದಲ್ಲಿ ಕೂಡಾ ಅದೇ ರೀತಿ ಆಗಿದೆ. ಉಗ್ರಪ್ಪ ಮತ್ತು ಸಲೀಂ ಅವರು ಡಿಕೆಶಿ ಬಗ್ಗೆ ಏನೇನು ಮಾತನಾಡಿದ್ದಾರೆ ಎಂಬುದನ್ನು ಟಿವಿಗಳಲ್ಲಿ ನೋಡಿದೆ.
ನಾನು ಆ ಪದಗಳನ್ನು ಬಳಸಲು ಹೋಗುವುದಿಲ್ಲ. ಕಾಂಗ್ರೆಸ್ ನವರ ಪರಿಸ್ಥಿತಿ ಅದೇ ರೀತಿ ಇದೆ. ಡಿ ಕೆ ಶಿವಕುಮಾರ್ ಬೆಂಬಲಿಗರು ಸಿದ್ದರಾಮಯ್ಯ ಅವರ ವಿರುದ್ಧ ಅದಕ್ಕಿಂತ ಜಾಸ್ತಿ ಹೇಳುತ್ತಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ಕಾಂಗ್ರೆಸ್ ಪಕ್ಷವೇ ಕೆಟ್ಟು ಹೋಗಿದೆ. ಕಾಂಗ್ರೆಸ್ ಪಕ್ಷವೇ ಕೆಟ್ಟ ಪಕ್ಷ ಆಗಿದೆ.
ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷ ಇವತ್ತು ಇಲ್ಲ ಎಂದು ಹೇಳಿದ್ದಾರೆ.









